ಆಲಮಟ್ಟಿ : ಸರಕಾರ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಹಾಗು ಮಕ್ಕಳ ಕಲಿಕೆಯ ಪ್ರಗತಿಗಾಗಿ ನಾನಾ ಬಗೆಯ ಸವಲತ್ತುಗಳನ್ನು ಅನುಷ್ಟಾನಗೊಳಿಸಿ ಜಾರಿಗೆ ತಂದಿವೆ. ಆ ದಿಸೆಯಲ್ಲಿ ಯುವ ಜನತೆ ಜ್ಞಾನ ಸಂಪನ್ನರಾಗಿ ಸಂಸ್ಕಾರಯುತ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಬೇಕು. ಶೈಕ್ಷಣಿಕ ಪ್ರಭಲರಾಗಿ ಮಿನುಗಬೇಕು. ಭವ್ಯ,ಬಲಿಷ್ಠ ನಮ್ಮ ರಾಷ್ಟ್ರ ನಿಮಾ೯ಣಕ್ಕೆ ನೆರವಾಗಬೇಕು ಎಂದು ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಹೇಳಿದರು.


ಸ್ಥಳೀಯ ರಾವಬಹದ್ದೂರ ಫ.ಗು.ಹಳಕಟ್ಟಿ ( ಆರ್.ಬಿ.ಪಿ.ಜಿ) ಪ್ರೌಢಶಾಲೆಯಲ್ಲಿ ನಡೆದ 73 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತೀಯವೆಂಬ ಆತ್ಮಾಭಿಮಾನ ಸಕಲರಲ್ಲೂ ಮೊಳಗಬೇಕೇಂದರು.


ಜಾತಿ,ಧರ್ಮ,ಮತ,ಪಂಥ, ಭಾಷೆ ಬೇರೆ ಬೇರೆಯಾಗಿದ್ದರೂ ನಮ್ಮೆಲ್ಲರ ಭಾವೊಂದೇ ಎಂಬುದನ್ನು ವಿಶ್ವಕ್ಕೆ ಸಾರಿದ್ದು ಭಾರತ. ಈ ದೇಶದ ಅನನ್ಯ ಶಕ್ತಿ,ಸಾಮಥ್ರ್ಯ ಅನಾವರಣ ಯುವಶಕ್ತಿ ಮೇಲೆ ಅವಲಂಬಿಸಿದೆ. ವಿವಿಧತೆಯಲ್ಲಿ ಏಕತೆ ಭಾವ ದರ್ಪಣ ಸಾಧಿಸಿರುವ ನಮ್ಮ ಸಂವಿಧಾನ ಪ್ರಪಂಚದಲ್ಲೇ ಅತಿ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಲಿಖಿತ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕಾಯಕ ನಾವೆಲ್ಲರೂ ಮನಸ್ಸೋ ಇಚ್ಚೆಯಿಂದ ಮಾಡಬೇಕು. ಹಕ್ಕು, ಕರ್ತವ್ಯ,ಸ್ವಾತಂತ್ರ್ಯ ಸಂವಿಧಾನಾತ್ಮಕವಾಗಿ ಲಭಿಸಿದ ದಿನವೇ ಗಣರಾಜ್ಯ ದಿನವಾಗಿದೆ ಎಂದರು.


ದೇಶದ ಸ್ವಾತಂತ್ರ್ಯಕ್ಕಾಗಿ ಲಕ್ಷಾಂತರ ಮಹನೀಯರು ಹೋರಾಡಿ ಮಡಿದಿದ್ದಾರೆ. ಆಂಗ್ಲರ ದಾಸ್ಯತ್ವದ ಕಪಿಮುಷ್ಟಿಯಿಂದ ನಮ್ಮನ್ನು ಬಂಧಮುಕ್ತಗೊಳಿಸಿದ್ದಾರೆ. ಅಂದಿನ ಸ್ವಾತಂತ್ರ್ಯ ಹೋರಾಟದಲ್ಲಿನ ಕಥಾಕದನದ ಹಂದರ ರೋಚಕತೆಯಿಂದಿದೆ. ಮೆಲುಕು ಹಾಕಿದರೆ ಮೈಮನಗಳೆಲ್ಲ ನಿಬ್ಬೆರಗಾಗುತ್ತವೆ. ಸ್ವಾತಂತ್ರ್ಯಕ್ಕೆ ತ್ಯಾಗ,ಬಲಿದಾನದ ಮೂಲಕ ಹವಣಿಸಿದ ಅದೆಷ್ಟೋ ಜೀವಗಳ ಪುಣ್ಯದ ಫಲದಿಂದ ನೆಮ್ಮದಿಯಲ್ಲಿದ್ದೆವೆ. ನಾವು ನಿಜಕ್ಕೂ ಅದೃಷ್ಟವಂತರು. ಸಂವಿಧಾನದಡಿಯಲ್ಲಿ ಹೆಜ್ಜೆ ಗುರುತು ಹಾಕುತ್ತಾ ಜೀವನ ಸಾರ್ಥಕತೆಯಿಂದ ಪಾವನಗೊಳಿಸಿಕೊಳ್ಳಬೇಕು ಎಂದರು.


ಸಂವಿಧಾನ ಜ್ಞಾನದ ಸಂಕೇತ. ಅದರಲ್ಲಿ ಪ್ರೀತಿ,ವಿಶ್ವಾಸ, ಬ್ರಾತ್ವತ್ವ,ಸಮಾನತೆ ಇದೆ. ಒಕ್ಕೂಟ ವ್ಯವಸ್ಥೆಗೆ ಮಾರಕವಾಗದೇ ನೈತಿಕತೆಯಿಂದ ಸಂವಿಧಾನದ ರಕ್ಷಕರಾಗಿ ಮೆರೆಯಬೇಕು. ಪವಿತ್ರ ಗ್ರಂಥ ಸಂವಿಧಾನ ಕತೃ ಅಂಬೇಡ್ಕರ್ ಸದಾಕಾಲ ಚಿರಸ್ಥಾಯಿ. ಈ ಮಹಾನುಭಾವರಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ. ಪುಣ್ಯಜೀವಗಳನ್ನು ಸ್ಮರಿಸಿ ನಮನ ಸಲ್ಲಿಸುವುದು ನಮ್ಮೆಲ್ಲರ ಅದ್ಯ ಕರ್ತವ್ಯ. ಅವರ ತತ್ವಾದರ್ಶಗಳು ಸಾರ್ವಕಾಲಕ್ಕೂ ಅಜರಾಮ. ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕೋಟ್ಯಾಳ ನುಡಿದರು.


ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಎಂ.ಎಚ್.ಎಂ.ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಪುಟ್ಟ ಪುಟ್ಟ ಪುಟಾಣಿ ಚಿಣ್ಣರು ಅಮಿತ್ಸೋಹಾದಿಂದ ಪಾಲ್ಗೊಂಡು ಗಣತಂತ್ರ ವ್ಯವಸ್ಥೆ ಅನುಭವಿಸಿ ಸಂಭ್ರಮಿಸಿದರು.ಈ ನೋಟ ವಿಶೇಷವಾಗಿತ್ತು.


ಮುಖ್ಯ ಗುರುಮಾತೆ ತನುಜಾ ಪೂಜಾರಿ, ಸಿದ್ದಮ್ಮ ಅಂಗಡಿ,ಕವಿತಾ ಮರಡಿ, ಶೈನಾಬಾನು ಬಾಗಲಕೋಟ, ಕಾಂಚನಾ ಕುಂದರಗಿ, ಸರೋಜಾ ಕಬ್ಬೂರ,ಸುನೀತಾ ಮಹೇಂದ್ರಕರ, ಅತಿಥಿ ಶಾಲೆಯ ಎನ್.ಎಸ್.ಬಿರಾದಾರ. ಎಸ್.ಎಚ್.ನಾಗಣಿ,ಆರ್.ಎಂ.ರಾಠೋಡ,ಎಲ್.ಆರ್.ಸಿಂಧೆ.ಅನಿತಾ ರಾಠೋಡ, ಪ್ರಶಿಕ್ಷಣಾಥಿ೯ ದೀಪಾ.ಬಿ. ಪಾಟೀಲ, ಎಸ್‌. ಎಸ್.ಮಠ, ಶಾಂತು ತಡಸಿ.ಗೋಪಾಲ ಬಸಪ್ಪ ಬಂಡಿವಡ್ಡರ, ವಿದ್ಯಾ ಮಹೇಂದ್ರಕರ, ರೇಣುಕಾ ಶಿವಣಗಿ, ದಾನಾಬಾಯಿ ಲಮಾಣಿ ಇತರರಿದ್ದರು.

Leave a Reply

Your email address will not be published. Required fields are marked *

You May Also Like

ತಂತ್ರಜ್ಞಾನ ಯುಗದಲ್ಲೂ ರಂಗಭೂಮಿ ಕಲೆ ಜೀವಂತಿಕೆ ಗೊಳಸಂಗಿಯಲ್ಲಿ ರಂಗ ಕಲಾವಿದರಿಗೆ ಸನ್ಮಾನ,

ಉತ್ತರಪ್ರಭ ಸುದ್ದಿನಿಡಗುಂದಿ: ಆಧುನಿಕ ಯುಗದಲ್ಲಿ ರಂಗಭೂಮಿ ಕಲಾವಿದರು ಮೂಲೆ ಗುಂಪಾದರು ಎಂಬ ಮಾತೆಲ್ಲ ಶುದ್ಧ ಸುಳ್ಳು.…

ದಾರಾವಾಹಿ ಶೂಟಿಂಗ್ ಗೆ ಸರ್ಕಾರದ ಅನುಮತಿ

ಲಾಕ್ ಡೌನ್ ಬಿಸಿ ದಾರಾವಾಹಿಗಳಿಗೂ ತಟ್ಟಿದ್ದರಿಂದ ಶೂಟಿಂಗ್ ಗೆ ಅವಕಾಶವಿರಲಿಲ್ಲ. ಇದರಿಂದಾಗಿ ಮನೆಮಂದಿಯಲ್ಲಿ ಮನೆ ಹಿಡಿದ ಮೇಲೆ ಮಹಿಳೆಯರಿಗೆ ತುಸು ಕೆಲಸದ ಹೊರೆ ಜಾಸ್ತಿಯಾಗಿತ್ತು. ಈ ಕಾರಣದಿಂದ ದಾರಾವಾಹಿಗಳನ್ನು ಬಹುತೇಕರು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ದಾರಾವಾಹಿ ಒಳಾಂಗಣ ಚಿತ್ರಿಕರಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಕೊಡಗಾನೂರ ವೀರಭದ್ರೇಶ್ವರ ರಥೋತ್ಸವ

ಸಮೀಪದ ಕೊಡಗಾನೂರ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಭಕ್ತರ ಹರ್ಷೊದ್ಘಾರದ ಮಧ್ಯೆ ಶನಿವಾರ ಸಂಜೆ ಸಂಭ್ರಮದಿಂದ ನಡೆಯಿತು.