ವಿಜಯನಗರ : ಜೆಸ್ಕಾಂ ಇಲಾಖೆಯ ಎಇಇ ಅಧಿಕಾರಿ ಭಾಸ್ಕರ್ ರೈತನಿಂದ ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಹೂವಿನಹಡಗಲಿ ತಾಲ್ಲೂಕಿನ ಬಸರಹಳ್ಳಿ ತಾಂಡಾದ ರೈತ ಉಮೇಶ್ ನಾಯ್ಕ್ ವಿದ್ಯುತ್ ಪರಿವರ್ತಕ(ಟಿಸಿ) ಬೇಕು ಎಂದು ಜೆಸ್ಕಾಂ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ನಂತರ ಜೆಸ್ಕಾಂ ಇಲಾಖೆ ಎಇಇ ಅಧಿಕಾರಿ ಭಾಸ್ಕರ್ ಅವರು ವಿದ್ಯುತ್ ಪರಿವರ್ತಕ(ಟಿಸಿ) ಅಳವಡಿಸಿಕೊಡಲು 45 ಸಾವಿರ ರೂ. ರೈತನಿಗೆ ಬೇಡಿಕೆಯಿಟ್ಟಿದ್ದಾನೆ. ರೈತ ಒಪ್ಪಿ ಅಧಿಕಾರಿಗೆ ಮುಂಗಡವಾಗಿ 25 ಸಾವಿರ ರೂ.ಗಳನ್ನು ಹಣ ನೀಡಿದ್ದನು.
ರೈತ ಎಚ್ಚೆತ್ತುಕೊಂಡು ಎಸಿಬಿಗೆ ದೂರನ್ನು ದಾಖಲಿಸಿದ್ದಾನೆ. ಉಳಿದ 20 ಸಾವಿರ ಹಣವನ್ನು ರೈತನಿಂದ ಹಣ ಪಡೆಯುವ ವೇಳೆ ಭ್ರಷ್ಟ ಅಧಿಕಾರಿ ಭಾಸ್ಕರ್‌ಗೆ ಎಸಿಬಿ ಬೀಸಿದ ಬಲೆಗೆ ಅಧಿಕಾರಿ ಸಿಕ್ಕಿಬಿದ್ದಿದ್ದಾನೆ.