ಉತ್ತರಪ್ರಭ ಸುದ್ದಿ
ಗದಗ:
ಕಳೆದ ಒಂದು ವಾರದಿಂದ ಅಡವಿಸೊಮಾಪುರ ಗ್ರಾಮದ ಬಳಿ ರಸ್ತೆ ಮದ್ಯೆ ಕುಡಿಯುವ ನೀರಿನ ಪೈಪ ಒಡೆದು ಒಂದು ವಾರ ಕಳೆದರೂ ಇತ್ತ ಕಡೆ ಅಧಿಕಾರಿಗಳು ಗಮನ ಹರಿಸದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೆ ರಸ್ತೆ ಹಾಳಾಗಿ ಹೊಗಿದ್ದು ಅಂತಹ ರಸ್ತೆಯಲ್ಲಿ ಪ್ರಯಾಣಿಕರು ಹರಸಾಹಸ ಮಾಡಿಕೊಂಡು ರಸ್ತೆಯಲ್ಲಿ ಸಂಚರಿಸುತ್ತಾರೆ ಅದರ ಮದ್ಯೆ ಪೈಪ್ ಒಡೆದಿದ್ದರಿಂದ ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬಿದ್ದು ಗಾಯಗಳಾದ ಘಟನೆಗಳು ನಡೆದಿವೆ.
ಅಷ್ಟೇ ಅಲ್ಲದೇ ಶಾಲಾ ಮಕ್ಕಳು ರಸ್ತೆ ದಾಟುವಾಗ ಜಾರಿ ಬಿದ್ದು ಗಾಯಗೊಂಡ ಉದಾಹರಣೆಗಳು ಬಹಳ. ರೈತರ ಹೊಲಕ್ಕೆ ನೀರು ಹರಿದು ಬೆಳೆ ಬಾರದ ರೀತಿಯಲ್ಲಿ ಹೊಲಗಳಲ್ಲಿ ನೀರು ನಿಂತಿದೆ ಇದರಿಂದ ರೈತರು ಅಧಿಕಾರಿಗಳಿಗೆ ಹೀಡಿ ಶಾಪ ಹಾಕುತ್ತಿದ್ದಾರೆ.
ನೀರು ಅಮೂಲ್ಯ ವಾಗಿದ್ದು ಅದನ್ನು ಪೋಲಾಗದಂತೆ ತಡೆಯಲು ಹಲವು ಜಾಗೃತಿ ಕಾರ್ಯಾಗಾರಗಳನ್ನು ಸರ್ಕಾರ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು ಇತ್ತ ಅಧಿಕಾರಿಗಳು ಗಡದ ನಿದ್ದೆಯನ್ನು ಮಾಡುತ್ತಾ ಸಂಬಳ ಪಡೆದು ಕಾಲಹರಣ ಮಾಡುತ್ತಿರುವುದು ಜನರಲ್ಲಿ ಬೇಸರ ಮೂಡಿದೆ. ನೀರನ್ನು ಪೋಲಾಗದಂತೆ ತಡೆಯಬೇಕಾದ ಅಧಿಕಾರಿಗಳು ನೀರು ಪೊಲು ಮಾಡುತ್ತಿರುವುದು ನೋಡಿದರೆ ಅಧಿಕಾರಿಗಳು ಜಾಣಕುರುಡುತನ ಮೆರಯುತ್ತಿದ್ದಾರೆ.

ನೀರು ಕಳೆದ ಶನಿವಾರದಿಂದ ಹರಿದು ಹೊಗುತ್ತಿದ್ದರು ಯಾವುದೇ ಅಧಿಕಾರಿ ಇತ್ತ ಕಡೆ ಗಮನ ಹರಿಸದೆ ಕುಡಿಯುವ ನೀರನ್ನು ಪೋಲು ಮಾಡಿ ಜನರಿಗೆ ಅನಾವಶ್ಯಕ ತೊಂದರೆ ಕೊಡುತ್ತಿದ್ದಾರೆ. ರಸ್ತೆ ಪಕ್ಕದಲ್ಲೆ ಇರುವ ಜಮಿನಿಗೆ ನಿರು ಹರಿಯುತ್ತಿದ್ದು, ದನಗಳಿಗೆ ಅಂತ ಸಂಗ್ರಹಣೆ ಮಾಡಿದ ಮೇವಿನ ಬಣವಿಗೆ ನೀರು ಹೊಕ್ಕು ಹಾಳಾಗಿ ಹೊಗಿವೇ ಇದಕ್ಕೆಲ್ಲ ಅಧಿಕಾರಿಗಳೆ ಹೊಣೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.

ಒಂದು ವಾರದಿಂದ ಕುಡಿಯೋ ನೀರಿನ ಪೈಪ ಹೊಡದೈತರಿ ಹಂಗ ನೀರ ಹರದ ರೊಡ ಮತ್ತು ಹೊಲಕ್ಕ ಹರಿಯಾಕತೈತಿ ಯಾರು ಬಂದು ಅದನ್ನು ರೀಪೆರಿ ಮಾಡಿಲ್ಲ ಶಾಲೆ ಹುಡುಗರು, ಮುದುಕರು ಮತ್ತು ಬಹಳ ಗಾಡಿಯವರು ಜಾರಿ ಬಿದ್ದ ಗಾಯಾ ಮಾಡಕೊಂಡಾರ ಅಷ್ಟ ಅಲ್ಲರಿ ಹೊಲದಾಗ ಒಟ್ಟಿರೊ ಬಣವಿಗೆ ನೀರ್ ಹೊಕ್ಕೊಂಡು ಮೇವ ಹಾಳಾಗೈತಿ, ಈ ಸಮಸ್ಯೆ ಯಾರಿಗ ಹೆಳೋದು ಅಂತ ತಿಳಿವಲ್ದ, ಒಟ್ಟಾರೆ ಸರಿಹೋದ್ರ ಸಾಕು.

-ಸೋಮನಗೌಡರ ಪಾಟೀಲ್
ಅಡವಿಸೋಮಾಪುರ ಗ್ರಾಮದ ನಿವಾ
ಸಿ

ಇನ್ನಾದರೂ ಅಧಿಕಾರಿಗಳು ಉತ್ತರಪ್ರಭ ವರದಿಯಿಂದ ಎಚ್ಚೆತ್ತು ಪೋಲಾಗುತ್ತಿರುವ ನೀರನ್ನು ತಡೆಯುವಲ್ಲಿ ಅಧಿಕಾರಿಗಳು ತಮ್ಮ ಕರ್ತವ್ಯ ಪೂರೈಸಲಿ ಎಂಬ ಕಳಕಳಿ.

Leave a Reply

Your email address will not be published. Required fields are marked *

You May Also Like

ಸಿಎಂ ಸಭೆಯ ಸಂಪೂರ್ಣ ಮಾಹಿತಿ: ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಕ್ಕೆ ಸೂಚನೆ

ಸಿಎಂ ಬಿ.ಎಸ್.ಯಡಿಯೂರಪ್ಪ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದರು. ಇನ್ನು ಈ ಸಭೆಯಲ್ಲಿ ನಡೆದ ಮಹತ್ವದ ಚರ್ಚಿತ ವಿಷಯಗಳ ಮುಖ್ಯಾಂಶೆಗಳು ಇಲ್ಲಿವೆ ನೋಡಿ.

ರಾಜ್ಯಾದ್ಯಂತ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: 150 ಸ್ಥಾನ ಗೆಲ್ಲುವ ಗೂರಿ..!

ಉತ್ತರಪ್ರಭಗದಗ: ರಾಜ್ಯಾದ್ಯಂತ 150 ಸ್ಥಾನ ಗೆಲ್ಲುವ ಉದ್ದೇಶದಿಂದ ಬಿಜೆಪಿಯ ವಿಜಯ ಸಂಕಲ್ಪ ಅಭಿಯಾನ ಕಾರ್ಯಕ್ರಮ ಆಯೋಜನೆ…

ಆಂತರಿಕ ಕಚ್ಚಾಟದಿಂದ ಬಿಜೆಪಿ ಸರ್ಕಾರ ಪತನವಾದರೆ ನಾವು ಜವಾಬ್ದಾರರಲ್ಲ-ಸಿದ್ದರಾಮಯ್ಯ

ಕಾಂಗ್ರೆಸ್ ಪಕ್ಷದ ಯಾವ ಶಾಸಕರು ರಾಜಿನಾಮೆ ನೀಡುವುದಿಲ್ಲ. ತಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟವೇ ಬಿಜೆಪಿಗೆ ಮುಳುವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಯಚೂರಿನಲ್ಲಿಂದು 9 ಕೊರೊನಾ ಪಾಟಿಟಿವ್..!

ಜಿಲ್ಲೆಯಲ್ಲಿಂದು 9 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 443ಕ್ಕೆ ಏರಿಕೆಯಾಗಿದೆ.