ಗದಗ : ಜಿಲ್ಲೆಯಲ್ಲಿ ದಿನದ ಲೆಕ್ಕದಲ್ಲಿ ಪತ್ತೆಯಾಗುತ್ತಿರುವ ಕೋವಿಡ್-19 ಸೋಂಕಿನ ಪ್ರಕರಣಗಳು ನೂರರ ಗಡಿಯ ಆಸುಪಾಸಿನಲ್ಲೇ ಇದೆ. ಬುಧವಾರ ಮತ್ತೆ 100 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 16 ಜನ 18 ವರ್ಷದೊಳಗಿನ ಮಕ್ಕಳಿದ್ದಾರೆ. ಜೊತೆಗೆ ಸೋಂಕಿಗೆ ಓರ್ವ ಮಹಿಳೆ ಸಾವನ್ನಪ್ಪಿದ್ದು, ಈ ಮೂಲಕ ಮೂರನೇ ಅಲೆಯ ಮೊದಲ ಸಾವು ಇದಾಗಿದೆ.

ಬುಧವಾರವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ : 658850. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ : 710766. ನಕಾರಾತ್ಮಕವಾಗಿವೆ (ನೆಗೇಟಿವ್) ಎಂದು ವರದಿಯಾದ ಸಂಖ್ಯೆ : 685808. ಒಟ್ಟು ಕೊವಿಡ್-19 ಪಾಸಿಟಿವ್ ದೃಢಪಟ್ಟ ಪ್ರಕರಣಗಳು : 26958 (ಇಂದಿನ 100 ಸೇರಿ). ಈವರೆಗೆ ಕೋವಿಡ್ ನಿಂದ ಮೃತಪಟ್ಟವರು : 320 (ಇಂದಿನ 1 ಸೇರಿ). ಸೋಂಕಿನಿಂದ ಗುಣಮುಖರಾದವರು : ಒಟ್ಟು 25898 ಜನ (ಇಂದಿನ 36 ಸೇರಿ) ಸಕ್ರಿಯ ಪ್ರಕರಣಗಳು : 740

ತಾಲೂಕುವಾರು ಒಟ್ಟು ಸೋಂಕಿತರ ವಿವರ : ಗದಗ-53, ಮುಂಡರಗಿ-25, ನರಗುಂದ-00, ರೋಣ-17, ಶಿರಹಟ್ಟಿ-05, ಹೊರಜಿಲ್ಲೆಯ ಪ್ರಕರಣಗಳು-00

ಸೋಂಕಿತ ಮಹಿಳೆ ಸಾವು: ಗದಗ ರಾಜೀವ ಗಾಂಧೀ ನಗರದ ನಿವಾಸಿ 60 ವರ್ಷದ ಮಹಿಳೆ (ಪಿ-3368146) ಇವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ಕಾಯಿಲೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ನಂತರ ಇವರನ್ನು ಕೋವಿಡ್ ಸೋಂಕು ತಪಾಸಣೆಗೆ ಒಳಪಡಿಸಿದಾಗ ಸೋಂಕು ದೃಢಪಟ್ಟಿತ್ತು. ಇವರು ಬಹು ಅಂಗಾಂಗ ವೈಫಲ್ಯದಿಂದಾಗಿ ದಿ 18 01-2022 ರಂದು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

You May Also Like

ಸಾರಿಗೆ ನೌಕರರ ಮುಷ್ಕರ ವಾಪಸ್: ಸತ್ಯಾಗ್ರಹ ಮುಂದುವರಿಕೆ

ಈಗಾಗಲೇ ಕಳೆದ ನಾಲ್ಕು ದಿನಗಳಿಂದ ಆರಂಭವಾಗಿದ್ದ ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆದುಕೊಂಡಿರುವ ಬಗ್ಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಸ್ಪಷ್ಟಪಡಿಸಿದ್ದಾರೆ.

ಗದಗನಲ್ಲಿ ಮತ್ತೆ ಇಬ್ಬರಿಗೆ ಕೊರೋನಾ ಪಾಸಿಟಿವ್

ಗದಗ: ಜಿಲ್ಲೆಯಲ್ಲಿ ಮತ್ತೆ ಎರಡು ಕೊರೋನಾ ಪಾಸಿಟಿವ್ ದೃಢಪಟ್ಟಿವೆ‌. ಈ ಮೂಲಕ ಸೋಂಕಿತರ ಸಂಖ್ಯೆ 20…

ಸಂಡೇ ಲಾಕ್ ಡೌನ್ ಸಂಕಟ: ಕಂಗಾಲಾದ ಕಾಗೆಗಳಿಗೆ ಖಾರಾ-ಡಾಣಿ ಊಟ

ಸಂಡೇ ಲಾಕ್ ಡೌನ್ ಸಂದರ್ಭದಲ್ಲಿ ಆಹಾರವಿಲ್ಲದೆ ಕಂಗಾಲಾಗಿದ್ದ ಕಾಗೆಗಳಿಗೆ ಗದಗ ನಗರದ ಹೊಟೆಲ್ ಮಾಲೀಕರೊಬ್ಬರು ಖಾರಾ-ಡಾಣಿ ನೀಡಿ ಮಾನವೀಯತೆ ಮೆರೆದಿದ್ದಾರೆ.