ಕೋರೊನಾ ಈ ಹೆಸರಿನ ಮಹಾಮಾರಿ ಯಾರಿಗೆ ಗೊತ್ತಿಲ್ಲ ದೇಶದಲ್ಲಿ ಈ ಮಹಾಮಾರಿಯಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಸಂಪ್ರದಾಯಿಕವಾಗಿ ಅದೆಷ್ಟು ಪರಿಣಾಮ ಬೀರಿದೆ ಅಂದರೆ ಹೇಳಲು ಕಷ್ಟಸಾಧ್ಯ. ಅದಕ್ಕಿಂತ ಈ ಮಹಾಮಾರಿ ತನ್ನ ವಕ್ರ ಧ್ರಷ್ಟಿ ಬೀರಿದ್ದು ಶೈಕ್ಷಣಿಕ ಕ್ಷೇತ್ರದ ಮೇಲೆ ಅದು ದಲಿತ ಶೋಷಿತ ಮತ್ತು ಹಿಂದೂಳಿದ ವರ್ಗಗಳ ಮಕ್ಕಳ ಮೇಲೆ ಅದರಲ್ಲೂ ಗ್ರಾಮೀಣ ಪ್ರದೇಶದ ಮಕ್ಕಳ ಮೇಲೆ ,ಅದೆಷ್ಟೋ ಕನಸುಗಳನ್ನ ಹೊತ್ತು, ಓದಿ ವಿದ್ಯಾವಂತರಾಗಿ ಏನಾದರೂ ಸಾಧಿಸಬೇಕೆಂಬ ಮಹದಾಸೆ ಹೊತ್ತ ವಿಧ್ಯಾರ್ಥಿಗಳಿಗೆ ಈ ಮಹಾಮಾರಿ ಬರಸಿಡಿಲಿನಂತೆ ಅಪ್ಪಳಿಸಿ ಅವರ ಕನಸುಗಳನ್ನ ನುಚ್ಚುನೂರು ಮಾಡಿರುವದು ಯಾರು ತಾನೆ ಮರೆಯಲು ಸಾದ್ಯ ?. ಇಂತಹ ಕಠೋರ ಮತ್ತು ಸಂಧೀಗ್ಞ ಪರಿಸ್ಥಿತಿಯಲ್ಲಿ ಒಂದು ಗ್ರಾಮದ ದಲಿತ ಓಣಿ(ಕಾಲೋನಿ)ಯಲ್ಲಿ ಶಿಕ್ಷಣದ ಬೀಜವೊಂದು ಮೊಳಕೆಯೊಡೆಯಿತು ಅದೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿರುವ ಡೋಣಿ ಗ್ರಾಮ,ಕಪ್ಪತ್ತ ಗುಡ್ಡದ ಸೆರಗಿನಲ್ಲಿರುವ ಡೋಣಿ ಗ್ರಾಮ.

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿರುವ ಡೋಣಿ ಗ್ರಾಮ,ಕಪ್ಪತ್ತ ಗುಡ್ಡದ ಸೆರಗಿನಲ್ಲಿರುವ ಡೋಣಿ ಗ್ರಾಮದ ಸಾವಿತ್ರಿ ಬಾಯಿ ಫುಲೆ” ಕಲಿಕಾ ಕೇಂದ್ರ


ಕಳೆದ ಮೂರು ವರ್ಷಗಳಿಂದ ಡಾ. ಅಂಬೇಡ್ಕರ ನಗರದಲ್ಲಿ ಕೆಲವು ಸಾಮಾಜಿಕ ಕಳಕಳಿ ಹೊಂದಿರುವ ಯುವಕ ಮತ್ತು ಯುವತಿಯರ ಕನಸಿನ ಶಿಕ್ಷಣದ ಹೆಮ್ಮರವೆ “ಸಾವಿತ್ರಿ ಬಾಯಿ ಫುಲೆ” ಕಲಿಕಾ ಕೇಂದ್ರ

ಲಾಕ್ ಡೌನ್ ಆದ ಸಮಯದಲ್ಲಿ ಶಾಲೆಗಳು ಪ್ರಾರಂಭ ಆಗದಿರುವ ಸಮದಲ್ಲಿ ದಿನನಿತ್ಯ ಸಾಯಂಕಾಲ ಐದು ಘಂಟೆಯ ವೇಳೆಗೆ ಪ್ರಾರಂಭವಾಗುವ ಕಲಿಕಾ ಕೇಂದ್ರ ಸರಿಸುಮಾರು ಒಂಬತ್ತು ಘಂಟೆಯ ವರೆಗೂ ನಡೆಯುತ್ತದೆ.

ಇಲ್ಲಿ ಪ್ರಮುಖವಾಗಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ. ವಿಶೇಷವಾಗಿ ಸಂವಿಧಾನದ ಬಗ್ಗೆ ಬಹಳಷ್ಟು ತಿಳಿಸಿಕೊಡುವ ಪ್ರಯತ್ನಗಳು ನಡೆಯುತ್ತಿವೆ. ಇನ್ನೂ ಅಗತ್ಯಕ್ಕೆ ತಕ್ಕಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಮಹಾನ್ ವ್ಯಕ್ತಿಗಳ, ಇತಿಹಾಸ ಸ್ರಷ್ಟಿಸಿದ ಇತಿಹಾಸಕಾರರ ಬಗೆಗಿನ ವಿಷಯಗಳನ್ನ ಮಕ್ಕಳಲ್ಲಿ ತುಂಬಿ ಮಕ್ಕಳಲ್ಲಿಯೂ ಕೂಡ ಒಂದು ಇತಿಹಾಸದ ಪ್ರಜ್ಞೆಯನ್ನ ತುಂಬುವ ಪ್ರಯತ್ನ ನಡೆಯುತ್ತಲೆ ಇದೆ. ಇದಲ್ಲದೆ ಒಂದಿಷ್ಟು ಸ್ವಚ್ಚತಾ ಕಾರ್ಯಗಳು ಶೈಕ್ಷಣಿಕ ಪ್ರವಾಸಗಳು ಹಾಗೂ ವಿವಿಧ ರೀತಿಯ ಪಠ್ಯೇತರ ಚಟುವಟಿಕೆಗಳು ನಿರಂತರವಾಗಿ ಮುಂದುವರೆಯುತ್ತಲೆ ಇವೆ .

ಕಳೆದ ವರ್ಷ ನಡೆದ ಎನ್ ಎನ್ ಎಮ್ ಎಸ್ ಪರೀಕ್ಷೆಯಲ್ಲಿ ಈ ಕಲಿಕಾ ಕೇಂದ್ರದ ಮಕ್ಕಳು ಮಾಡಿದ ಸಾಧನೆ ನಿಜಕ್ಕೂ ಮೆಚ್ಚುವಂತದ್ದು .ಒಂದು ಸಣ್ಣ ಗ್ರಾಮದಲ್ಲಿ ಇಂತಹ ಬದಲಾವಣೆಯ ಮತ್ತು ಭರವಸೆಯ ಗಾಳಿ ಬೀಸುತ್ತಿರುವದು ಹೆಮ್ಮೆಯ ವಿಷಯ.


ಸಾವಿತ್ರಿ ಬಾಯಿ ಫುಲೆ ಕಲಿಕಾ ಕೇಂದ್ರದ ಶಿಕ್ಷಕಿಯರಾದ ಶಶಿಕಲಾ ಹೊಸಮನಿ,
ರೇಣುಕಾ ಚಲವಾದಿ
ಪಾರ್ವತಿ ಚಲವಾದಿ
ದ್ಯಾಮವ್ವ ಚಲವಾದಿ

ಶಿಕ್ಷಕರಾದ ದೇವಪ್ಪ ಚಲವಾದಿ , ಹನಮಂತ ಚಲವಾದಿ ಇವರು ಸಮಯ ಸಿಕ್ಕಾಗಲೆಲ್ಲ ಇವರಿಗೆಲ್ಲ ಸಲಹೆ ಮಾರ್ಗದರ್ಶನ ನೀಡುತ್ತಿರುವ ಅರಕ್ಷಕ ಹುದ್ದೆಯಲ್ಲಿರುವ ಈರಣ್ಣ ದೊಡ್ಡಮನಿ, ಸಚಿನ್ ಕನ್ನಾರಿ , ಮತ್ತು ಪಧವಿದರ ವಿದ್ಯಾರ್ಥಿ ಮಲ್ಲಪ್ಪ ದೊಡ್ಡಮನಿ ಹಾಗೂ ಸಮಾಜದ ಎಲ್ಲ ಯುವಕರು,ಯುವತಿಯರು, ಮಹಿಳೆಯರು,ಹಿರಿಯರಾದ ಸತ್ಯಪ್ಪ ಸತ್ಯಮ್ಮನಗುಡಿ, ಬಸಪ್ಪ ಹೊಸಮನಿ, ನಿಂಗಬಸಪ್ಪ ಹೊಂಬಳ, ನಾಗಪ್ಪ ಮೊರಬದ, ಮಹಾದೇವಪ್ಪ ಕನಕಮ್ಮನವರ ,ಮಹಾದೇವಪ್ಪ ಸಾಲಿ,ದೇವಪ್ಪ ಬೆಟಗೇರಿ ಶಿವಪ್ಪ ಕನ್ನಾರಿ , ಮಲ್ಲಿಕಾರ್ಜುನ ಕನಕಮ್ಮನವರ ,ಹನಮಪ್ಪ ದೊಡ್ಡಮನಿ, ಯಲ್ಲಪ್ಪ ಚಲವಾದಿ , ಕಾಶಪ್ಪ ದೊಡ್ಡಮನಿ, ರಾಮಣ್ಣ ಚಲವಾದಿ , ಶ್ರೀ ಮಲ್ಲೇಶ ಹೊಸಮನಿಯವರ ಕಾರ್ಯವನ್ನು ಮೆಚ್ಚಲೆಬೇಕು.

ವರದಿ:ಬಸವರಾಜ ಬೆವಿನಮರದ

Leave a Reply

Your email address will not be published. Required fields are marked *

You May Also Like

ನಟ ಧ್ರುವಾ ಸರ್ಜಾ, ಪ್ರೇರಣಾಗೂ ಕೊರೊನಾ ಪಾಸಿಟಿವ್…!

ಕುರಿತು ಟ್ವೀಟ್ ಮಾಡಿರುವ ಧ್ರುವ, ನನಗೆ ಹಾಗೂ ನನ್ನ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಕೊರೊನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇವೆ. ಶೀಘ್ರವೇ ಗುಣಮುಖರಾಗಿ ಹೊರಬರುತ್ತೇವೆ ಎಂದು ಹೇಳಿದ್ದಾರೆ.

ನಾಳೆ ಆಲಮಟ್ಟಿ ಎಂ.ಎಚ್.ಎಂ.ಪಿಯು ಕಾಲೇಜು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ

ಆಲಮಟ್ಟಿ : ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ…

ಹೊಸ ಶಿಕ್ಷಣ ಪದ್ದತಿಗೆ ಅಣಿಯಾಗಿ- ಬಿ.ಸಿ.ನಾಗೇಶ

ಆಲಮಟ್ಟಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕಾಯಾ೯ಗಾರ“ಎಲ್ಲ ವ್ಯವಸ್ಥೆಗಳು ಅಮೂಲಾಗ್ರ ಬದಲಾಗಬೇಕು” ಸಚಿತ್ರ ವರದಿ : ಗುಲಾಬಚಂದ…