ಆಲಮಟ್ಟಿ : ಇಲ್ಲಿನ ಶ್ರೀಮದ್ ವೀರಶೈವ ವಿದ್ಯಾಲಯ ಅಸೋಸಿಯೇಷನ್ ಸಂಸ್ಥೆಯ ಮಂಜಪ್ಪ ಹಡೇ೯ಕರ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2021-22 ನೇ ಸಾಲಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ಗಳ ಶುಭಕೋರುವ,ಪ್ರತಿಭಾ ಪುರಸ್ಕಾರ ಮತ್ತು ನೂತನ ಪ್ರಾಚಾರ್ಯರರಿಗೆ,ನಿವೃತ್ತರಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭ ಶುಕ್ರವಾರ ಆಲಮಟ್ಟಿ ಡ್ಯಾಂ ಸೈಟ್ ನಲ್ಲಿನ ಸಮುದಾಯ ಭವನದಲ್ಲಿ ನಡೆಯಲಿದೆ.
ಹಡಗಲಿ, ನಿಡಗುಂದಿ, ಬೇವೂರ ಶ್ರೀ ರುದ್ರಮುುನಿ ಶಿವಾಚಾರ್ಯ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಜರುಗುವ ಸಮಾರಂಭವನ್ನು ವಿಜಯಪುರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮೇಶ ಗೋವಿಂದ ಕಾರಜೋಳ ಉದ್ಘಾಟಿಸಲ್ಲಿದ್ದಾರೆ.
ಆಲಮಟ್ಟಿ ಎಸ್.ವ್ಹಿ.ವ್ಹಿ. ಅಸೋಸಿಯೇಷನ್ ಸಂಸ್ಥೆಯ ಕಾರ್ಯದರ್ಶಿಗಳಾದ ವಿಶ್ರಾಂತ ಪ್ರಾಚಾರ್ಯ ಶಿವಾನಂದ ಪಟ್ಟಣಶೆಟ್ಚಿ ಅಧ್ಯಕ್ಷತೆ ವಹಿಸುವರು. ಹಾವೇರಿ ಹುಕ್ಕೇರಿ ಮಠದ ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಪುಷ್ಪಾ ಎಸ್.ಹಿರೇಮಠ ಉಪನ್ಯಾಸ ನೀಡುವರು.


ಮುಖ್ಯ ಅತಿಥಿಗಳಾಗಿ ಕೆಬಿಜೆಎನ್ ಎಲ್ ಅಧೀಕ್ಷಕ ಇಂಜನೀಯರ ಬಸವರಾಜ ಡಿ, ವಿಶ್ರಾಂತ ಪ್ರಾಚಾರ್ಯರ ಎಸ್.ಬಿ.ಪಾಟೀಲ, ಕನಾ೯ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ನುಗ್ಲಿ, ಬಾಗಲಕೋಟ ನಾಹಜಾನಿ ಸಿ.ಪಿ.ಆಯ್. ರಮೇಶ ರೊಟ್ಟಿ, ಕಲಬುಗಿ೯ ಜೆಸ್ಕಾಂದ ಸಿ.ಪಿ.ಆಯ್. ಸಚೀನ ಎಸ್, ನಿಡಗುಂದಿ ಸಿ.ಪಿ.ಆಯ್.ಸೋಮಶೇಖರ್ ಜುಟ್ಟಲ್, ವಲಯ ಅರಣ್ಯಾಧಿಕಾರಿ ಮಹೇಶ್ ಪಾಟೀಲ, ಶಿಕ್ಷಕರ ಸ್ನೇಹದ ಪ್ರಧಾನ ಸಂಪಾದಕ ಎಸ್.ಎ.ಹಿರೇಮಠ, ಹಾವೇರಿಯ ಸಿಂದಗಿ ಶಾಂತವೀರೇಶ್ವ ಆಯುವೆ೯ದಿಕ್ ಮೆಡಿಕಲ್ ಕಾಲೇಜಿನ ಸ್ಥಾನಿಕ ಆಡಳಿತಾಧಿಕಾರಿ ವ್ಹಿ.ಎಚ್.ಕೋಡಿಳ್ಳಿಹಿರೇಮಠ, ಕುಕನೂರಿನ ಗ್ರಾನಾಟ್ ವರ್ತಕ ಆನಂದಕುಮಾರ ಕೊಚಲಾಪುರಮಠ, ಗ್ರಾ.ಪಂ. ಅಧ್ಯಕ್ಷ ಮಂಜುನಾಥ್ ಹಿರೇಮಠ, ಉಪಾಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಉಪ್ಪಾರ, ಕ.ರಾ.ಸ.ನೌ.ಸಂಘದ ಆಲಮಟ್ಟಿ ಶಾಖೆ ಅಧ್ಯಕ್ಷ ಸದಾಶಿವ ದಳವಾಯಿ, ಯಲಗೂರ ಗಂಗಾ ಇಂಟರ್ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ವಿರೇಶ ಹೆಬ್ಬಾಳ, ನಿಡಗುಂದಿ ಪಪಂ ಸದಸ್ಯ ಸಂಜು ರಾಠೋಡ ಭಾಗವಹಿಸುವರು.
ಅತಿಥಿಗಳಾಗಿ ಪಪಂ ಸದಸ್ಯೆ ಶ್ರೀಮತಿ ಜಂಬಕ್ಕ ವಿಭೂತಿ, ನಿಡಗುಂದಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಂಕರ ಜಲ್ಲಿ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ ಪ್ರಾಚಾರ್ಯ ಎಚ್.ಎನ್.ಕೆಲೂರ,ಮುಖ್ಯ ಗುರುಮಾತೆ ಶ್ರೀಮತಿ ಕಮಲಾಕ್ಷಿ ಹಿರೇಮಠ, ವಿಶ್ರಾಂತ ಉಪನ್ಯಾಸಕ ಜಿ.ಎಸ್.ಬಿರಾದಾರ, ಪಿ.ಬಿ.ತಾಂಬೆ, ಎಸ್.ಎಸ್.ಹಾಲಗಂಗಾಧರಮಠ, ವ್ಹಿ.ಎ.ಭಾಂಡವಾಲಕರ, ಆಯ್.ಬಿ.ಉಳ್ಳೇಗಡ್ಡಿ ಮೊದಲಾದವರು ಪಾಲ್ಗೊಳ್ಳಲ್ಲಿದ್ದಾರೆ.
ಈರಣ್ಣ ಕೋನ, ಶ್ರೀಮತಿ ಸವಿತಾ ಪಾಟೀಲ, ಯಶವಂತ ಮರಡಿ, ಅಡಿವೆಪ್ಪ ವಕ್ರ, ಅನೀಲ ಗೋಕಲೆ, ಬಸವರಾಜ ಸಾತಿಹಾಳ,ಅಶೋಕ ಲಮಾಣಿ, ಹಣಮಂತ ಬಂಡಿವಡ್ಡರ, ಮುತು೯ಜ ಬಾಣಕಾರ, ರಾಜೇಸಾಬ ನದಾಫ್,ಶಿವಾನಂದ ಹಡಪದ, ಚಾಂದಬಾಷಾ ನದಾಫ್,ಎಚ್.ಎಫ್.ಕಟ್ಟಿಮನಿ ಮತ್ತಿತರರು ದಾನಿ, ಶಿಕ್ಷಣ ಪ್ರೇಮಿಗಳು ಸಹಕಾರ ನೀಡಿದ್ದಾರೆ. ಕಾರ್ಯಕ್ರಮದ ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಕೊಪ್ಪಳ ಮೂಲದ ಮಸ್ಕಿ ಕೆನರಾ ಬ್ಯಾಂಕ್ ಉದ್ಯೋಗಿಗೂ ಕೊರೊನಾ..!

ಮಸ್ಕಿ: ಪಟ್ಟಣದ ಬ್ಯಾಂಕಿನ ಉದ್ಯೋಗಿಗೆ ಕೊರೊನಾ ಪಾಸಿಟಿವ್ ದೃಡ ಪಟ್ಟಿರುವ ಹಿನ್ನಲ್ಲೆಯಲ್ಲಿ ಬ್ಯಾಂಕ್ ವನ್ನು ಸಿಲ್…

ಪೊಲೀಸ್ ಇಲಾಖೆಗೆ ಸೇರಿದ ಜಾಗವನ್ನೇ ಅತಿಕ್ರಮಣ ಮಾಡಿದ ಜನರು!

ಧಾರವಾಡ : ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಜಾಗಗಳನ್ನು ವಶಕ್ಕೆ ಪಡೆಯಲು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ…