ಉತ್ತರಪ್ರಭ ಸುದ್ದಿ
ಶಿರಹಟ್ಟಿ: ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘ ತಾಲೂಕು ಘಟಕ ಆಶ್ರಯದಲ್ಲಿ ತಾಲೂಕಿನ ಕಡಕೋಳ ಗ್ರಾಮದ ಡಾ. ಶೇಖರ ಹೈದ್ರಿ ಅವರ ಮಹಾಮನೆಯಲ್ಲಿ 2ನೇ ಮಾಸಿಕ ಸಭೆ ಜರಗಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕ ಕಾರ್ಯಧ್ಯಕ್ಷ ಬಸವರಾಜ್ ತುಳಿ ರಾಜಕೀಯ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸರಕಾರಿ ಯೋಜನೆಗಳನ್ನು ಸಮುದಾಯದ ಕಟ್ಟಕಡೆಯ ಬಡ ಕುಟುಂಬಕ್ಕೂ ಒದಗಿಸಿಕೊಡುವುದೇ ಸಮಾಜ ಸಂಘಟನೆಯಾಗಿದೆ. ಯುವಕರು ಸಾಮಾಜ ಸಂಘಟನೆಯಲ್ಲಿ ಮುಂಚೂಣಿಯಲ್ಲಿದ್ದು ಹಿಂದುಳಿದ ಸಮುದಾಯದ ಜನರನ್ನು ಅಭಿವೃದ್ಧಿಪಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಬಸವರಾಜ್ ಪಲ್ಲೆದ ಮಾತನಾಡಿ, ತಾಲೂಕಿನ ಹಳ್ಳಿಗಳಲ್ಲಿ ಗ್ರಾಮ ಘಟಕ ರಚನೆ, ವಧು ವರರ ಸಹಾಯಕೇಂದ್ರ, ಕುಟುಂಬಗಣತಿ ಸೇರಿದಂತೆ ವಿವಿಧ ರೀತಿಯಲ್ಲಿ ಕೆಲಸ ಮಾಡುವ ಕಾರ್ಯ ತಾಲೂಕ ಸಭೆಯಿಂದ ನೆಡಲಿದೆ ಎಂದರು.

ತಾಲೂಕ ಪ್ರಧಾನ ಕಾರ್ಯದರ್ಶಿ ಬಸವರಾಜ ಬಡವಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಶರಣಪ್ಪ ಹೊಂಬಾಳ ವಂದಿಸಿದರು

ಸಭೆಯನ್ನು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ತಿಪ್ಪಣ್ಣ ಕೊಂಚಿಗೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಸವರಾಜ ಶಾಲಿ, ನ್ಯಾಯವಾದಿ ಎಸ್ ಎಸ್ ಪಾಟೀಲ್, ಚನ್ನವಿರಗೌಡ ಪಾಟೀಲ್,ಹಾಲಪ್ಪ ದುಗ್ಗಾಣಿ, ಚೆನ್ನಬಸಗೌಡ ಪಾಟೀಲ, ಶರಣಪ್ಪ ಹೊಂಬಾಳ, ಜಗದೀಶ ಸಾಸಲವಾಡ, ದೇವರಾಜ್ ಮೇಟಿ, ಸುರೇಶ್ ಬ್ಯಾಲಹುಣಸಿ, ಕಾಶಿನಾಥ್ ಗಿಡ್ಡವೀರಪ್ಪನವರು ಸೇರಿದಂತೆ ಕಡಕೋಳ ಗ್ರಾಮದ ಹಿರಿಯರು ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You May Also Like

ನೂತನ ಗದಗ ಜಿಲ್ಲಾಧಿಕಾರಿಯಾಗಿ ಸಿ.ಎನ್.ಶ್ರೀಧರ ನೇಮಕ..!

ಉತ್ತರಪ್ರಭ, ಗದಗ :ಗದಗ ಜಿಲ್ಲಾ ನೂತನ ಜಿಲ್ಲಾಧಿಕಾರಿಯಾಗಿ ಸಿ.ಎನ್.ಶ್ರೀಧರ ಇವರನ್ನು ತಕ್ಷಣವೆ ಜಾರಿಬರುವಂತೆ ರಾಜ್ಯ ಸರ್ಕಾರ…

ಹೆಚ್ಚಿನ ಬಸ್ ಓಡಾಟಕ್ಕೆ ಒತ್ತಾಯಿಸಿ ಮನವಿ

ಹುಬ್ಬಳ್ಳಿ ಹಾಗು ಗದಗ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ಸು ಓಡಿಸುವಂತೆ ಆಗ್ರಹಿಸಿ ಶನಿವಾರ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಶೇಖರ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಲಕ್ಕಲಕಟ್ಟಿಯಲ್ಲಿ ವಿದ್ಯುತ್ ಸ್ಪರ್ಷ: ಯುವಕ ಸಾವು

ಮನೆ ಮೇಲೆ ಹತ್ತಲು ನಿಚ್ಚಣಕಿ ಇಡಲು ಹೋದಾಗ ನಿಚ್ಚಣಿಕೆಗೆ ವಿದ್ಯುತ್ ತಂತಿ ತಗುಲಿ ವಿದ್ಯುತ್ ಸ್ಪರ್ಶಗೊಂಡ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮೇಶ್ವರ ನಗರಸಭೆಯಿಂದ ಮರೆಯಾಗಿ ಹೋದ ಅಭಿವೃದ್ಧಿ ಕಾಮಗಾರಿಗಳು

ಉತ್ತರಪ್ರಭ ಸುದ್ದಿ ಲಕ್ಷ್ಮೇಶ್ವರ: ಪಟ್ಟಣದ ನಾಲ್ಕನೇ ವಾರ್ಡನಲ್ಲಿ ರಸ್ತೆ ದುರಸ್ಥಿ ಮತ್ತು ನೀರಿನ ಹಾಹಾಕಾರ ಎದ್ದು…