ಲಕ್ಷ್ಮೇಶ್ವರ: ಪಟ್ಟಣದಿಂದ ಹುಬ್ಬಳ್ಳಿ ಹಾಗು ಗದಗ ಮತ್ತು ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ಸು ಓಡಿಸುವಂತೆ ಆಗ್ರಹಿಸಿ ಶನಿವಾರ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ ಶೇಖರ ನಾಯಕ ಅವರಿಗೆ ಮನವಿ ಸಲ್ಲಿಸಿದರು.

ಸದ್ಯ ಶಾಲೆ-ಕಾಲೇಜುಗಳು ಆರಂಭವಾಗಿದ್ದು ಪ್ರತಿನಿತ್ಯ ಸಾವಿರಾರು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದು, ವ್ಯಾಪಾರ ವಹಿವಾಟಿಗಾಗೆ ಸಾವಿರಾರು ಜನರು ನಿತ್ಯವ ಪಟ್ಟಣಕ್ಕೆ ಬರುತ್ತಾರೆ.

ಅದೆ ರೀತಿ ಲಕ್ಷ್ಮೇಶ್ವರದಿಂದ ಹುಬ್ಬಳ್ಳಿ ಮತ್ತು ಗದಗಿಗೆ ಸಾಕಷ್ಟು ಜನರು ಪ್ರಯಾಣಿಸುತ್ತಿದ್ದು, ರೈಲು ಸ್ಥಗಿತಗೊಂಡಿರುವುದರಿಂದ ಬಸ್ಸುಗಳು ಅನಿವಾರ್ಯವಾಗಿವೆ. ವಿಪರಿತವಾದ ಜನದಟ್ಟನೆಯಿಂದ ಪ್ರಯಾಣಿಕರು ನಿತ್ಯ ಪರದಾಡುತ್ತಿದ್ದಾರೆ. ಆದರಿಂದ ಬೆಳಗಿನ ಜಾವ 7 ರಿಂದ ಲಕ್ಷ್ಮೇಶ್ವರ-ಹುಬ್ಬಳ್ಳಿ- ಗದಗ ಪ್ರತಿ 10 ನಿಮೀಷಕ್ಕೆ ಒಂದು ಬಸ್ ಬಿಡುವ ವ್ಯವಸ್ಥೆ ಮಾಡಿ ಸಾರ್ವಜನಿಕರ ಗೋಳನ್ನು ತಪ್ಪಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಕೂಡಲೇ ಸಮಸ್ಯೆ ಬಗೆಹರಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲದ್ದಿದ್ದಲ್ಲಿ ಪ್ರತಿಭಟನೆ ಅನಿರ್ವಾಯವಾಗಿದೆ ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ಇಸ್ಮಾಲ್ ಆಡೂರ್, ಉಪಾಧ್ಯಕ್ಷ ರಮೇಶ ಹಂಗನಕಟ್ಟಿ, ರಮೇಶ ಲಮಾಣಿ, ಇಸಾಕಬಾಷಾ ಹರಪನಹಳ್ಳಿ, ಬಸುವರಾಜ ಮೇಲಮ್ಮುರಿ, ಖಾದರಬಾಷ ರೀತ್ತಿ, ಹಜರತ ಪಟೇಲ್ ನಲವಾಡ, ರುದ್ರಗೌಡ ಪಾಟೀಲ್, ಯಂಕಪ್ಪ ಲಮಾಣಿ, ಸಲೀಂ ನಾಡಗರ್, ಮೋಹಿದ್ದಿನ ಸಿದ್ದಾಪೂರ, ಶರತ ಸೂಣಗಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *

You May Also Like

ತೋಂಟದ ಸಿದ್ದಲಿಂಗ ಶ್ರೀಗಳ ಚಿಂತನಾ ಶಕ್ತಿ ಅದ್ಭುತ

ಆಲಮಟ್ಟಿ : ಕನ್ನಡ ನೆಲದ ಕಾವಿಕಂಪು,ತ್ರಿವಿಧ ದಾಸೋಹಿ ತೋಂಟದ ಲಿಂ,ಡಾ.ಸಿದ್ದಲಿಂಗ ಮಹಾಸ್ವಾಮಿಗಳವರ ಸಮಾಜಮುಖಿ ಚಿಂತನೆ,ಆಲೋಚನಾ ಲಹರಿಯ…

ಕಡಕೋಳದಲ್ಲಿ ಸಿಡಿಲು: ಮೂವರು ಸಾವು: ನಾಲ್ವರಿಗೆ ಗಂಭೀರ ಗಾಯ

ತಾಲೂಕಿನ ಕಡಕೋಳ ಗ್ರಾಮದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಮೂವರು ಸಾವನ್ನಪ್ಪಿದ ಧಾರುಣ ಘಟನೆ ಜರುಗಿದೆ. ಘಟನೆಯ ವಿವರ: ಕಡಕೋಳ ಗ್ರಾಮದ ನಿವಾಸಿಗಳಾದ ಕುಮಾರ(24), ಶರಣಪ್ಪ ಮಾಲಿಂಗಪ್ಪ(38) ಮಾರುತಿ(50) ಹೊಲ ನೋಡಿ ಬರಲು ಹೋಗಿದ್ದು, ಮಳೆ, ಗಾಳಿ ಪ್ರಾರಂಭವಾಗಿದ್ದರಿಂದ ಅಲ್ಲಿಯೇ ಗಿಡದ ಮರೆಯಲ್ಲಿ ನಿಂತುಕೊಂಡಿದ್ದಾರೆ. ದುರಾದೃಷ್ಟವಶಾತ್ ಸಿಡಿಲು ಬಡಿದು ಈ ಮೂವರು ಸಾವನ್ನಪ್ಪಿದ್ದಾರೆ.

ಸಿಡಿಲು ಬಡಿದು ಇಬ್ಬರು ಸಾವು

ಉತ್ತರಪ್ರಭಶಿರಹಟ್ಟಿ: ಪಟ್ಟಣದ ಹೊರವಲಯದಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ…

ಗದಗ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆಯ ಅಂಧಾ ದರ್ಬಾರ್…!

ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರೆ ಮರಳು ಗಣಿಗಾರಿಕೆಗೆ ಸಿಲುಕಿ ನರಳುವಂತಾಗಿದೆ. ನಿತ್ಯ ಲೆಕ್ಕವಿಲ್ಲದಷ್ಟು ತುಂಗಭದ್ರೆಯ ಒಡಲು ಬಗೆಯುತ್ತಿದ್ದರೂ ತುಂಗವ್ವಾ ಮರಳು ಗಣಿಗಳ್ಳರ ದಾಯಕ್ಕೆ ಅಸಹಾಯಕಳಾಗಿ ಮೈಯೊಡ್ಡಿದ್ದಾಳೆ.