ಉತ್ತರಪ್ರಭ ಸುದ್ದಿ

ನರೇಗಲ್:‌ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಕಾರ್ಯಭಾರವನ್ನು ಅವೈಜ್ಞಾನಿಕವಾಗಿ 15 ತಾಸಿಗೆ ಏರಿಸುವ ಮೂಲಕ 7,250ಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರನ್ನು ಸೇವೆಯಿಂದ ತೆಗೆಯಲು ಸರ್ಕಾರ ಮುಂದಾಗಿದೆ ಆದ್ದರಿಂದ ಉನ್ನತ ಶಿಕ್ಷಣ ಇಲಾಖೆಯ ಹೊಸ ಆದೇಶವನ್ನು ರದ್ದುಪಡಿಸುವಂತೆ ಹಾಗೂ ಸದ್ಯ ಸೇವೆಯಲ್ಲಿರುವ ಎಲ್ಲಾ ಅತಿಥಿ ಉಪನ್ಯಾಸಕರನ್ನು ಮುಂದೊರೆಸುವಂತೆ ಮತ್ತು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ಗದಗ ಜಿಲ್ಲೆ ನರೇಗಲ್‌ ಘಟಕದ ವತಿಯಿಂದ ಸೋಮವಾರ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಹಿರಿಯ ಅತಿಥಿ ಉಪನ್ಯಾಸಕ ವೀರುಪಾಕ್ಷ ಕೆ. ಸಂಗನಾಳ, ವಿದ್ಯಾರ್ಥಿಗಳ ಭವಿಷ್ಯವನ್ನು ಭದ್ರಗೊಳಿಸುವ ಅತಿಥಿ ಉಪನ್ಯಾಸಕರ ಜೀವನಕ್ಕೆ ಭದ್ರತೆ ಇಲ್ಲದೆ ಪರದಾಡುತ್ತಿದ್ದಾರೆ. ರಾಜ್ಯ ಉನ್ನತ ಶಿಕ್ಷಣ ಇಲಾಖೆಯ ಸಚಿವರು ಜನವರಿ 15ಕ್ಕೆ ಹೊರಡಿಸಿದ ವೇತನ ಹೆಚ್ಚಳ ನೆಪದ ಆದೇಶದಲ್ಲಿ ಅವೈಜ್ಞಾನಿಕ ಅಂಶಗಳು ತುಂಬಿಕೊಂಡಿವೆ ಎಂದರು.

ಈ ಮೊದಲು ವಾರಕ್ಕೆ 8 ತಾಸಿಗೆ ಇದ್ದ ಉಪನ್ಯಾಸ ಮಾಡುವ ಕಾರ್ಯಾಭಾರವನ್ನು 15 ತಾಸಿಗೆ ಏರಿಸಿರುವ ಕಾರಣದಿಂದಾಗಿ ರಾಜ್ಯ ಸರ್ಕಾರಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ 14 ಸಾವಿರ ಅತಿಥಿ ಉಪನ್ಯಾಸಕರಲ್ಲಿ ಅಂದಾಜು 7,250ಕ್ಕೂ ಹೆಚ್ಚಿನ ಅತಿಥಿ ಉಪನ್ಯಾಸಕರು ಉದ್ಯೋಗವನ್ನು ಕಳೆದುಕೊಳ್ಳುತ್ತಾರೆ

ಈ ಆದೇಶದಲ್ಲಿ ಒಂದು ವಿಷಯಕ್ಕೆ ಅಂದಾಜು ಇಬ್ಬರನ್ನು ಕೆಲಸದಿಂದ ತೆಗೆದು ಹಾಕಿ ಕೇವಲ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಇದರಿಂದ 7, 250ಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿಳುತ್ತವೆ. ಇದನ್ನೇ ನಂಬಿಕೊಂಡಿರುವ ಅತಿಥಿ ಉಪನ್ಯಾಸಕರು ಕೆಲಸ ಕಳೆದುಕೊಂಡು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಮೊದಲೇ ಕೊರೊನಾ ಸಂಕಷ್ಟದಿಂದ ನಿರುದ್ಯೋಗ ಹೆಚ್ಚಾಗಿರುವ ಸಂದರ್ಭದಲ್ಲಿ ಸರ್ಕಾರವೇ ಕೆಲಸದಿಂದ ತೆಗೆದು ಹಾಕಲು ಮುಂದಾಗಿರುವುದು ಉಪನ್ಯಾಸಕರ ಕುಟುಂಬಗಳಿಗೆ ವಿಷ ನೀಡಿದ ಹಾಗಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಅತಿಥಿ ಉಪನ್ಯಾಸಕಿ ಪಿ. ವೈ. ಶಾಸ್ತ್ರಿ ಮಾತನಾಡಿ, ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಅದರಲ್ಲೂ ಸೆಮಿಸ್ಟರ್‌ ಮಿಡ್‌ ಟರ್ಮ್‌ ನಲ್ಲಿ ಪೋರ್ಟಲ್‌ ಮೂಲಕ ಹೊಸದಾಗಿ ಅರ್ಜಿ ಹಾಕಲು ಅವಕಾಶ ನೀಡುವ ಮೂಲಕ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಜೀವನಕ್ಕೆ ಕುತ್ತು ಬಂದಂತಾಗಿದೆ ಎಂದರು. ಆದಕಾರಣ ವೆಬ್‌ ಪೊರ್ಟಲ್‌ ಅನ್ನು ಈ ಕೂಡಲೇ ನಿಲ್ಲಿಸಬೇಕು ಹಾಗೂ ಈಗ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಮುಂದೊರೆಸಬೇಕು ಎಂದರು.

ಈಗ ಹೊರಡಿಸಿರುವ ಆದೇಶವನ್ನು ಈ ಕೂಡಲೇ ಹಿಂಪಡೆಯಬೇಕು ಹಾಗೂ ಎಲ್ಲಾ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಬೇಕು. ಇಲ್ಲವಾದರೇ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರ ಸಂಘಟನೆಗಳು ಕುಟುಂಬ ಸಮೇತರಾಗಿ ವಿಧಾನಸೌಧದ ಮುಂದೆ ಹಾಗೂ ಮುಖ್ಯಮಂತ್ರಿಗಳ ನಿವಾಸದ ಮುಂದೆ ಹಾಗೂ ಉನ್ನತ ಶಿಕ್ಷಣ ಸಚಿವರ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ ಕಚೇರಿಯ ಕಚೇರಿ ಸಿಬ್ಬಂದಿ ಎಸ್. ಎಂ. ಜಮ್ಮನಕಟ್ಟಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ವಿ. ಸಿ. ಇಲ್ಲೂರ, ಬಿ. ಕೆ. ಕಂಬಳಿ, ಪಿ. ವಿ. ವಿ. ಪೊಲೀಸ್‌ ಪಾಟೀಲ, ಎಂ. ಎಸ್.‌ ಹೊನ್ನವಾಡ, ಚಂದ್ರು ಎಂ. ರಾಥೋಡ್‌, ಎನ್.‌ ಬಿ. ಜುಟ್ಲದ, ಬಿ. ಎಸ್.‌ ಪರವಣ್ಣವರ, ಕೆ. ಎನ್.‌ ಕಟ್ಟಿಮನಿ, ಎಂ. ಎಫ್.‌ ತಹಶೀಲ್ದಾರ, ಎಂ. ಎಸ್.‌ ಕಬ್ಬೇರ, ಎಂ. ಎಸ್.‌ ಗೌಡರ, ತಂಗೇಮ್ಮ ಎಸ್.‌ ಶಿಲಬನೂರ, ಬಸವರಾಜ ಎಸ್.‌ ಮಡಿವಾಳರ, ವಿಜಯಲಕ್ಷ್ಮೀ ಲಕ್ಕುಂಡಿ, ಎಫ್.‌ ಎಸ್.‌ ಕರಿದುರ್ಗಣ್ಣವರ, ಶರಣಪ್ಪ ತೆಗ್ಗಿಹಾಳ, ಪೂನಂ ರಾಯಬಾಗಿ, ಮಹೇಶ ಗೌಡರ ಇದ್ದರು.

Leave a Reply

Your email address will not be published. Required fields are marked *

You May Also Like

ಸಾಮಾಜಿಕ, ಆರ್ಥಿಕ, ಶೈಕ್ಷಣಿಕೆ ಸಮೀಕ್ಷೆ ವರದಿ ಜಾರಿಗೊಳಿಸಿ: ಸಿದ್ದರಾಮಯ್ಯ

ಸಾಮಾಜಿಕ ನ್ಯಾಯದ ಪರವಾಗಿದ್ದೇವೆ ಎಂದು ಬಾಯಿಮಾತಿನಲ್ಲಿ ಹೇಳಿದರೆ ಸಾಲದು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಸಲ್ಲಿಸಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಅವರನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಮರಗಳಿಗೆ ಕತ್ತರಿ: ಅರಣ್ಯಾಧಿಕಾರಿಗಳ ಅಮಾನತು

ಬಾಳೂರು ಮೀಸಲು ಅರಣ್ಯ ಪ್ರದೇಶದಲ್ಲಿ ಮಾಫಿ ಪಾಸ್ ಹೆಸರಲ್ಲಿ ಕಾಡುಗಳ ಮರಗಳನ್ನು ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿ ಅರಣ್ಯ ಇಲಾಖೆ ನೌಕರರನ್ನು ಅಮಾನತುಗೊಳಿಸಲಾಗಿದೆ. ಚಿಕ್ಕಮಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ್ ಪವಾರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕೂತುಹಲ ಕೆರಳಿಸಿದ ಸಿದ್ದರಾಮಯ್ಯ ದೆಹಲಿ ಬೇಟಿ

ಮಾಜಿ ಸಿಎಂ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಿಢೀರ್‌ ದೆಹಲಿ ಭೇಟಿಗೆ ಮುಂದಾಗಿದ್ದಾರೆ.

ಗಡಿಬಿಡಿಯ ಲಾಕ್ ಡೌನ್ ಜಾರಿ: ಗಲಿಬಿಲಿಯಲ್ಲಿ ಉತ್ಪಾದನಾ ಫ್ಯಾಕ್ಟರಿ

ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಹಲವು ಜಿಲ್ಲೆ ಮತ್ತು ನಗರಗಳಲ್ಲಿ ದಿಢೀರ್ ಲಾಕ್ ಡೌನ್ ಹೇರಿದ್ದರಿಂದ ಕೈಗಾರಿಕಾ ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಿದೆ.