ಹೈದರಾಬಾದ್: ರಾಜಕೀಯ ಮತ್ತು ಸಿನಿಮಾಗಳನ್ನು  ಅತಿ ಹೆಚ್ಚು ಪೋಸಿಸುವ  ರಾಜ್ಯಗಳಲ್ಲಿ ಆಂಧ್ರ ಪ್ರದೇಶಒಂದಾಗಿದೆ.  ಹಿಂದಿನಿಂದಲೂ ಈ ಎರಡೂ ರಂಗಗಳ ನಡುವೆ ಬಿಡಿಸಲಾಗದ ನಂಟು. ಆಂಧ್ರ ಪ್ರದೇಶದಲ್ಲಿ ರಾಜಕಾರಣ, ಸಿನಿಮಾ ಮಾಡಿಕೊಂಡು ಜಯಿಸುವುದು ಅಷ್ಷು ಸುಲಭವಲ್ಲ .ಜಾತಿ ರಾಜಕಾರಣದಲ್ಲೂ ಹೆಸರಾಗಿರುವ ಆಂಧ್ರ ಪ್ರದೇಶದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪುಷ್ಪ ಸಿನಿಮಾ ಸದ್ದನ್ನು ಮಾಡುತ್ತಿದೆ. ಸಿನಿಮಾದ ಕಲೆಕ್ಷನ್ ನಿಂದ  ಈಗಾಗಲೇ ದೇಶವ್ಯಾಪಿ ಹೆಸರು ಮಾಡಿರುವ ಪುಷ್ಪ ಸಿನಿಮಾಗೆ ಜಾತಿ ರಾಜಕೀಯ ಅಂಟು ಕೊಂಡಿದೆ.

ಅಲ್ಲು ಅರ್ಜುನ್ ಪ್ರಮುಖ ಭೂಮಿಕೆಯಲ್ಲಿರುವ ಪುಷ್ಪ ಚಿತ್ರದ ನಿರ್ಮಾಪಕರು ಚೌಧುರಿ ಮತ್ತು ಪ್ರೊಡಕ್ಷನ್ ಹೌಸ್ ಮೈತ್ರಿ ಮೂವಿ ಮೇಕರ್ಸ್, ಮುಟ್ಟಂಶೆಟ್ಟಿ ಮಿಡಿಯಾ. ಚಿತ್ರದಲ್ಲಿ ಕೊಂಡ ರೆಡ್ಡಿ, ಜಾಲಿ ರೆಡ್ಡಿ (ಡಾಲಿ ಧನಂಜಯ್ ಪಾತ್ರಧಾರಿ), ಜಕ್ಕ ರೆಡ್ಡಿ ಮುಂತಾದ ಹಲವು ಪಾತ್ರಗಳಿವೆ. ವಿಲನ್ ಪಾತ್ರಧಾರಿಗಳಿಗೆ ರೆಡ್ಡಿ ಎನ್ನುವ ಉಪನಾಮ ಇಟ್ಟಿರುವುದು ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖಂಡರ ಸಿಟ್ಟಿಗೆ ಕಾರಣವಾಗಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ಆರ್ ಜಗನ್ ಸೇರಿದಂತೆ, ಸಂಪುಟದ ಹಲವರು ರೆಡ್ಡಿ ಸಮುದಾಯದವರಾಗಿದ್ದಾರೆ.  ಆದರೆ ವಿಶೇಷ ಏನೆಂದರೆ ಆ ಚಿತ್ರದ ನಿರ್ಮಾಪಕ ರೆಡ್ಡಿ ಜನಾಂಗಕ್ಕೆ ಸೇರಿದವರಲ್ಲ.

ರೆಡ್ಡಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂಬ ಕಾರಣ

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಶೇಷಾಚಲಂ ದಟ್ಟಾರಣ್ಯದಲ್ಲಿನ ರಕ್ತಚಂದನ ಕಳ್ಳಸಾಗಣಿ ಮಾಡುವ ತಂಡದ ಮಾಲೀಕ ಪಾತ್ರವನ್ನು ಪುಷ್ಪ ಚಿತ್ರದಲ್ಲಿ ಅಜಯ್ ಘೋಶ್ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಈ ಪಾತ್ರಕ್ಕೆ ಕೊಂಡ ರೆಡ್ಡಿ ಎಂದು ನಿರ್ದೇಶಕ ಸುಕುಮಾರ್ ಹೆಸರಿಟ್ಟಿದ್ದಾರೆ. ಇದು ಈಗ ಅಲ್ಲಿನ ಎರಡು ಪಕ್ಷಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ರೆಡ್ಡಿ ಎಂದು ಖಳನಾಯಕನ ಪಾತ್ರಕ್ಕೆ ಹೆಸರಿಟ್ಟಿದ್ದು, ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕರ ಕೆಂಗಣ್ಣಿಗೆ ಕಾರಣವಾಗಿದೆ. ರೆಡ್ಡಿ ಸಮುದಾಯವನ್ನು ಅವಮಾನಿಸುವ ಉದ್ದೇಶ ಈ ಚಿತ್ರಕ್ಕಿದೆ ಎನ್ನುವುದು ಅವರ ಆರೋಪ.

ಕೋವಿಡ್ ಹಾವಳಿಯ ನಡುವೆಯೂ ಪುಷ್ಪ ಸಿನಿಮಾ ಭರ್ಜರಿ ಕಲೆಕ್ಷನ್ ಅನ್ನು ಮಾಡಿತ್ತು. ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರು ಕೂಡಾ, ಸಿನಿಮಾ ಬಾಲಿವುಡ್ ಸಿನಿಮಾಗಳನ್ನು ಮೂಲೆಗೆ ತಳ್ಳಿ ಮುನ್ನೂರು ಕೋಟಿಗೂ ಅಧಿಕ ಬ್ಯೂಸಿನೆಸ್ ಮಾಡಿತ್ತು. ಚಿತ್ರದಲ್ಲಿನ ಖಳನಾಯಕನ ಪಾತ್ರಕ್ಕೆ ಇಟ್ಟ ಹೆಸರು ಈಗ ವಿವಾದಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *

You May Also Like

ಮಳೆಗಾಲ: ಕೊರೊನಾ ಮಧ್ಯೆ ಆರೋಗ್ಯಕ್ಕಾಗಿ ನಿಮ್ಮ ಆಹಾರ ಪದ್ಧತಿ ಹೀಗಿರಲಿ..!!

ಬೆಂಗಳೂರು: ಈಗ ಮಳೆಗಾಲ ಆರಂಭವಾಗಿದೆ. ಅಲ್ಲದೇ, ಕೊರೊನಾ ಕಾಟ ಕೂಡ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ…

ಅವನೇ ಶ್ರೀಮನ್ನಾರಾಯಣನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ!

ಬೆಂಗಳೂರು: ಅವನೇ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಲಾಕ್ ಡೌನ್ ಹಿನ್ನೆಲೆಯಲ್ಲಿ…

ಹಾಡು ನಿಲ್ಲಿಸಿದ ಸಾವಿರಾರು ಹಾಡುಗಳ ಸರದಾರ ಎಸ್ಪಿಬಿ

ಎದೆ ತುಂಬಿ ಹಾಡುವ ಮೂಲಕ ಜನರ ಮನಗೆದ್ದು ಲಕ್ಷಾಂತರ ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ. ಎಸ್ಪಿಬಿ ಹಾಡು ಯಾರಿಗೆ ಇಷ್ಟವಿಲ್ಲ ಹೇಳಿ. ಆ ಹೆಸರಲ್ಲಿಯೇ ಒಂದು ಕಂಠವಿದೆ, ರೋಮಾಂಚನವಿದೆ. ಆಕರ್ಶಣೆ ಇದೆ. ಆದರೆ ಇಂದು ತೀವ್ರ ಇಂದು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಸುಬ್ರಹ್ಮಣ್ಯಂ ಇನ್ನಿಲ್ಲ ಎನ್ನುವುದು ಅರಗಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ: ಸಿದ್ದರಾಮಯ್ಯ

ಕೊಪ್ಪಳ: ಸಚಿವ ಸೋಮಣ್ಣ ಅವರ ಹೇಳಿಕೆ ಆರ್ಥಿಕತೆಯ ಬಗ್ಗೆ ಅವರಿಗಿರುವ ಅಜ್ಞಾನವನ್ನು ತೋರಿಸುತ್ತದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆರ್ಥಿಕ ಶಿಸ್ತಿನಲ್ಲಿ ರಾಜ್ಯ ಮೊದಲ ಸ್ಥಾನದಲ್ಲಿತ್ತು. ಈಗ ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಸರ್ಕಾರದ ಬಳಿ ಹಣವಿಲ್ಲ. ರಾಜ್ಯ ಮಾತ್ರವಲ್ಲ ಇಡೀ ದೇಶವೇ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.