ಲಕ್ಷ್ಮೇಶ್ವರ: ಪಟ್ಟಣದ ಶಿಗ್ಲಿ ಕ್ರಾಸ್ ನಲ್ಲಿ ಸರ್ಕಲ್ ನಲ್ಲಿ ಬಿಜೆಪಿ ಯುವಮೋರ್ಚಾ ಶಿರಹಟ್ಟಿ ಘಟಕ ಹಾಗೂ ನಗರ ಬಿಜೆಪಿ ಘಟಕದಿಂದ ಕೈಗೆ ಕಪ್ಪು ಬಟ್ಟೆ ಕಟ್ಟಿಗೊಂಡು ಬಿತ್ತಿಪತ್ರಗಳನ್ನು ಹಿಡಿದು ಪಂಜಾಬ ನಲ್ಲಿ ಆದ ಭದ್ರತಾ ವೈಫಲ್ಯವನ್ನು ಖಂಡಿಸಿ ಪಂಜಾಬಿನ ಕಾಂಗ್ರೆಸ್ ಸರಕಾರ ಹಾಗೂ ಅಲ್ಲಿನ ಮುಖ್ಯಮಂತ್ರಿ ಚರಣಜಿತ ಸಿಂಗ ಚನ್ನಿ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು ಮುಖ್ಯಮಂತ್ರಿ ಚನ್ನಿಗೆ ದಿಕ್ಕಾರ ಕೂಗಿದರು ಬಿಜೆಪಿ ಕಾರ್ಯಕರ್ತರು ಕೈ ಗೆ ಕಪ್ಪು ಬಟ್ಟೆ ಧರಿಸಿ ಬಿತ್ತಿಪತ್ರಗಳಲ್ಲಿ ಕಾಂಗ್ರೆಸ ಸರಕಾರಕ್ಕೆ,ಹಾಗೂ ಪಂಜಾಬ ಮುಖ್ಯಮಂತ್ರಿ ಗೆ ದಿಕ್ಕಾರ ಎಂದು ಹೇಳಿದರು

ಈ ಸಂದರ್ಭದಲ್ಲಿ ಶಿರಹಟ್ಟಿ ಮಂಡಳ ಯುವ ಮೋರ್ಚಾ ಅಧ್ಯಕ್ಷ ನವೀನ ಹಿರೇಮಠ ಹಾಗೂ ತಾಲೂಕ ಮಂಡಳ ದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗಾಧರ ಮೆಣಸಿನಕಾಯಿ ಮಾತನಾಡಿ ಪ್ರಧಾನಿ ಮೋದಿಯವರು ಪಂಜಾಬ ಪ್ರವಾಸದ ವೇಳೆ ಭದ್ರತಾ ಲೋಪ ಆಗಿದ್ದು ಫಿರೋಜಪುರ ದಲ್ಲಿನ ಬಿಜೆಪಿ ರೈಲಿಗಾಗಿ ತೆರಳುತ್ತಿದ್ದರು ಪ್ರಧಾನಿ ಮೋದಿ ಅವರ ವಾಹನಕ್ಕೆ ಪ್ರತಿಭಟನಾ ರೈತರು ತಡೆದರು ರ್ಯಾಲಿ ಸ್ಥಳ 10ಕಿಲೋಮೀಟರ್ ದೂರದಲ್ಲಿ ಇತ್ತು ದಾರಿಯಲ್ಲಿ ಇದ್ದ ಪ್ಲೈ ಓವರ್ ಮೇಲೆ 20 ನಿಮಿಷದ  ಕಾಲ ಕಾದ ಮೋದಿಯವರು ರ್ಯಾಲಿ ರದ್ದು ಪಡಿಸಿ ವಾಪಾಸ ತೆರಳಿದರು ಮೊದಲೇ ಪ್ರಧಾನಿ ಹೋಗುವ ರಸ್ತೆಯನ್ನು ಮುಕ್ತಗೊಳಿಸಬೇಕು ಆದರೆ ಅಲ್ಲಿಯ ಮುಖ್ಯಮಂತ್ರಿ ಹಾಗೂ ಸರಕಾರ ಅದನ್ನು ಮಾಡದೇ ಲೋಪ ಎಸಗಿದ್ದಾರೆ ಪಂಜಾಬ ಸರಕಾರವನ್ನು ವಜಾ ಗೊಳಿಸ ಬೇಕು, ಎಂದು ಹೇಳಿದರು

ಈ ಸಂದರ್ಭದಲ್ಲಿ ನಗರ ಅಧ್ಯಕ್ಷ ದುಂಡೆಶ ಕೊಟಗಿ  ತಾಲೂಕ ಯುವ ಘಟಕ ಕಾರ್ಯದರ್ಶಿ ಬಸವರಾಜ ಚಕ್ರಸಾಲಿ ನಗರ ಯುವ ಘಟಕ ಅಧ್ಯಕ್ಷ ಗಿರೀಶ ಚೌರಡ್ಡಿ ನಗರ ಪ್ರಧಾನ ಕಾರ್ಯದರ್ಶಿ ಚಂದ್ರು ಮಾಗಡಿ, ಹಿರಿಯ ಮುಖಂಡ ಪಿ, ಬಿ ಕರಾಟೆ, ನಿಂಗಪ್ಪ ಬನ್ನಿ ಪುರಸಭೆ ಸದಸ್ಯರಾದ ಪ್ರವೀಣ ಬೋಮಲೆ, ವಿಜಯಕುಂಬಾರ, ಚಂದ್ರು ಹಂಪಣ್ಣವರ ಸಂತೋಷ ಜಾವುರ ನವೀನ ಬೆಳ್ಳಟ್ಟಿ, ಮಲ್ಲಿಕಾರ್ಜುನ ನಿರಾಲೋಟ ಬಸವರಾಜ ಕಲ್ಲೂರ, ಅನಿಲ ಮುಳಗುಂದ, ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

You May Also Like

ಗಣರಾಜ್ಯೋತ್ಸವ ಪರೇಡ್ ನಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರ ತಿರಸ್ಕಾರ: ಖಂಡನೆ

ಉತ್ತರಪ್ರಭ ಸುದ್ದಿಶಿರಹಟ್ಟಿ: ಜನೆವರಿ 26 ರಂದು ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು…

ಗಜೇಂದ್ರಗಡದಲ್ಲಿ ಮುಷ್ಕರ: ಪೊಲೀಸ್-ಪ್ರತಿಭಟನಾಕಾರರ ಮದ್ಯೆ ಮಾತಿನ ಚಕಮಕಿ

ರೈತ, ಕಾರ್ಮಿಕ, ವಿದ್ಯುತ್, ಎಪಿಎಂಸಿ ಕಾಯ್ದೆ, ಬೆಲೆ ನಿಯಂತ್ರಣ ಕಾಯ್ದೆ, ಭೂ ಸುಧಾರಣೆ ಕಾಯ್ದೆ ಸೇರಿದಂತೆ ಜನ ವಿರೋದಿ ನೀತಿ ಖಂಡಿಸಿ ರಾಷ್ಟ್ರವ್ಯಾಪಿ, ಕಾರ್ಮಿಕ, ರೈತ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಮುಷ್ಕರದ ಅಂಗವಾಗಿ ಗದಗ ಜಿಲ್ಲೆ ಗಜೇಂದ್ರಗಡದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಗದಗ ಬಂದಗೆ ಕರೆ..!

ಉತ್ತರಪ್ರಭ ಗದಗ: ದಿನಾಂಕ: 26/01/2022 ರಂದು ರಾಯಚೂರು ಜಿಲ್ಲಾ ಕೋರ್ಟ್ ಆವರಣದಲ್ಲಿ ನಡೆದ ಗಣರಾಜೋತ್ಸವದ ಆಚರಣೆಯಲ್ಲಿ…

ಮೊಸಳೆ ಬಂತು.. ಮೊಸಳೆ..! ಹೊಳೆಯಾಲೂರು: ಮಲಪ್ರಭ ನದಿ ದಡದಲ್ಲಿ ಮೊಸಳೆ ಪತ್ತೆ!

ಮಲಪ್ರಭಾ ನದಿಯಲ್ಲಿ ಮೊಸಳೆ ಪತ್ತೆಯಾಗಿದ್ದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಗದಗ ಜಿಲ್ಲೆ ರೊಣ ತಾಲೂಕಿನ ಹೊಳೆಆಲೂರ ಗ್ರಾಮದ ಮಲಪ್ರಭಾ ನದಿಯಲ್ಲಿ ಬುಧುವಾರ ಸಂಜೆ ಮೊಸಳೆ ಪ್ರತ್ಯಕ್ಷವಾಗಿಜe. ಮೊಸಳೆ ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.