ಉತ್ತರಪ್ರಭ
ಗದಗ: ದಿನಾಂಕ: 26/01/2022 ರಂದು ರಾಯಚೂರು ಜಿಲ್ಲಾ ಕೋರ್ಟ್ ಆವರಣದಲ್ಲಿ ನಡೆದ ಗಣರಾಜೋತ್ಸವದ ಆಚರಣೆಯಲ್ಲಿ ರಾಯಚೂರಿನ ಪ್ರಧಾನ ಜಿಲ್ಲಾ ನ್ಯಾಯಧೀಶರು ಮಲ್ಲಿಕಾರ್ಜುನ ಗೌಡರವರು ನನ್ನ ಅಪ್ಪಣೆ ಇಲ್ಲದೆ ಅಂ ಬೇಡ್ಕರ ರವರ ಭಾವಚಿತ್ರವನ್ನು ಇಡಲಾಗಿದೆ. ಅವರ ಭಾವಚಿತ್ರವನ್ನು ತೆಗೆದರೆ ಮಾತ್ರ ನಾನು ಧ್ವಜಾರೋಹಣ ಮಾಡುತ್ತೇನೆ ಇಲ್ಲವಾದರೆ ಧ್ವಜಾರೋಹಣ ಮಾಡುವುದಿಲ್ಲಾ ಎಂದು ಹೇಳಿದ್ದಾರೆ. ನಂತರ ಬಾಬಾ ಸಾಹೇಬ ಅಂಬೇಡ್ಕಿರವರ ಭಾವಚಿತ್ರವನ್ನು ತಮ್ಮ ಪ್ರಭಾವ ಬಳಸಿ ತೆಗೆಸಿರುತ್ತಾರೆ ಇದು ಖಂಡನಿಯ. ಭಾರತದ ಪ್ರಜಾಪ್ರಭುತ್ವದ ಬಹುಮುಖ್ಯ ಅಂಗ ನ್ಯಾಯಾಂಗ ಅಂತಹ ಶ್ರೇಷ್ಠ ನ್ಯಾಯಾಂಗದ ಜಿಲ್ಲಾ ನ್ಯಾಯಾಧೀಶರ ಈ ನಡೆ ನಾಗರಿಕ ಸಮಾಜಕ್ಕೆ ತೀವ್ರ ಆತಂಕ ಮತ್ತು ನೋವು ತಂದೊಡ್ಡಿದೆ. ಸಂವಿಧಾನದ ನಿರ್ಮಾತೃಗಳ ಬಗ್ಗೆ ಇಷ್ಟು ಪೂರ್ವಾಗ್ರಹ ಪೀಡಿತ ಮನಸ್ಥಿತಿ ಇರುವ ನ್ಯಾಯಾಧೀಶರಿಂದ ನಿಷ್‌ಪಕ್ಷಪಾತ ನ್ಯಾಯದಾನವನ್ನು ನಿರೀಕ್ಷಿಸಲು ಹೇಗೆ ಸಾಧ್ಯ.
ಇಂತಹ ನ್ಯಾಯಾಧೀಶರ ಮೇಲೆ ಕ್ರಮ ಕೈಗೊಳ್ಳಬೇಕು ಮುಂದೆ ಯಾರು ಈ ತರಹದ ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದೆಂದು ಶುಕ್ರವಾರ ದಿನಾಂಕ: 04/02/2022 ರಂದು ಗದಗ ಬಂದ ಕರೆ ನೀಡುತ್ತಿದ್ದೇವೆ. ಪ್ರಗತಿ ಪರ ಎಲ್ಲಾ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳ ಸಭೆಯನ್ನು ಮಂಗಳವಾರ ದಿನಾಂಕ: 01/02/2022 ರಂದು ಸಂಜೆ 05:00 ಘಂಟೆಗೆ ಗದಗ ಮುಳಗುಂದ ನಾಕಾ ಐ.ಬಿ ಯಲ್ಲಿ ಕರೆಯಲಾಗಿದೆ. ಕರೆ ಮಾಡಲು :9448386199 ಪ್ರಗತಿಪರ ಸಂಘಟನೆಗಳ ಎಲ್ಲಾ ಸದಸ್ಯರು ಪಾಲ್ಗೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಈ ಸಂದರ್ಭದಲ್ಲಿ ಚಂದ್ರಕಾoತ ಚವ್ಹಾಣ ರಾಜ್ಯ ಪ್ರಧಾನ ಕಾರ್ಯದರ್ಶಿ, ರಫಿಕ್ ತೋರಗಲ್, ಮಕ್ತುಂಸಾಬ ನಾಲಬಂದ, ಬಾಷಾಸಾಬ ಮಲ್ಲಸಮುದ್ರ, ಬಸವರಾಜ ಬಂಕದ, ವಿಕಾಸ ಕ್ಷೀರಸಾಗರ, ಈಶ್ವರ ಲಕ್ಷ್ಮೇಶ್ವರ, ಶರೀಫ ಬೆನಕಲ್, ನಾಗರಾಜ ಕ್ಷತ್ರೀಯ, ಮುತ್ತು ಪೂಜಾರ, ರಾಜು ಪೂಜಾರ, ಸತ್ಯನಗೌಡ ಗೌಡರ, ಯಲ್ಲಪ್ಪ ಮೇಲ್ಮನಿ, ಕಳಕಪ್ಪ ಪೋತ ಹಾಗೂ ಇತರರು ಉಪಸ್ಥಿತರಿದ್ದರು.