ಗದಗ: ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರು ಮತ್ತು ನೆಲ್ಸನ್ ಮಂಡೇಲಾ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದ ಶ್ರೀ ಡಿ.ಡಿ. ಕಡೇಮನಿಯವರು ತಮ್ಮ ೭೩ನೇ ವಯಸ್ಸಿನಲ್ಲಿ ದಿ.೬ ರಂದು ಗುರುವಾರ ಹೃದಯಾಘಾತದಿಂದ ನಿಧನರಾದರು.
ಇವರು ತಮ್ಮ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಕಡೇಮನಿ, ಸುಪುತ್ರರಾದ ವಿಶಾಲ್ ಹಾಗೂ ವಿಜಯಕುಮಾರ, ಮಗಳು ಶ್ರೀಮತಿ ರೇಶ್ಮಾ ಕೋಂ. ಆನಂದ ಜಿಗಜಿಣಗಿ, ಸೊಸೆ ಶ್ರೀದೇವಿಯವರನ್ನು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮಾಜಿ ಕೇಂದ್ರ ಸಚಿವರು ಹಾಗೂ ಸಂಸದರಾದ ಶ್ರೀ ರಮೇಶ ಜಿಗಜಿಣಗಿ, ಹಿರಿಯರಾದ ಮೋಹನ ಆಲಮೇಲಕರ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ‍್ಯದರ್ಶಿಗಳಾದ ಶಿವಾನಂದ ಎಸ್. ಪಟ್ಟಣಶೆಟ್ಟಿ, ಹಿರಿಯ ಮುಖಂಡರಾದ ಎಸ್. ಎನ್. ಬಳ್ಳಾರಿ ನಿವೃತ್ತ ಶಿಕ್ಷಕರು, ಪ್ರೊ. ಸತೀಶ ಪಾಸಿ ಹಾಗೂ ಅವರ ಅಭಿಮಾನಿಗಳು ಡಿ.ಡಿ. ಕಡೇಮನಿಯವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಮೃತರ ಅಂತ್ಯಕ್ರಿಯೆ ದಿ.೭ ರಂದು ಶುಕ್ರವಾರ ಮುಂಜಾನೆ ೧೧ ಗಂಟೆಗೆ ಹಾತಲಗೇರಿ ರಸ್ತೆಯ ಹಿಂದೂ ರುದ್ರಭೂಮಿಯಲ್ಲಿ ಜರುಗುವುದು.

Leave a Reply

Your email address will not be published. Required fields are marked *

You May Also Like

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಸ್ಟಡಿಗೆ ನೀಡಿದ ಕೋರ್ಟ್!

ಧಾರವಾಡ : ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ನೀಡಿದೆ.

ಇಂಧನ ಬೆಲೆ ಏರಿಕೆ ಖಂಡಿಸಿ ಕರವೇಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ದೇಶದಲ್ಲಿ ಇಂಧನ ಬೆಲೆ, ವಿದ್ಯುತ್ ಬೆಲೆ ಏರಿಕೆಯನ್ನು ಖಂಡಿಸಿ, ಶೀಘ್ರವಾಗಿ ಬೆಲೆ ಏರಿಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಹೆಚ್.ಶಿವರಾಮೇಗೌಡ) ಬಣದ ಜಿಲ್ಲಾ ಘಟಕದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸಿಡಿ ಪ್ರಕರಣ ನ್ಯಾಯಾಲಯಕ್ಕೆ ಮೊರೆ ಹೋದ ಆರು ಸಚಿವರು : ಇಂದು ಅರ್ಜಿ ವಿಚಾರಣೆ

ರಾಜ್ಯದಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಹೊರಬೀಳುತ್ತಿದ್ದಂತೆ ರಾಜ್ಯದ 6 ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದು ಇಂದು ಇನ್ನೂ 6 ಸಚಿವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ ತಿಳಿಸಿದ್ದಾರೆ.

ಪ್ರೇಯಸಿಯ ಸಮಾಧಿ ಮುಂದ.. ಆತ್ಮಹತ್ಯೆ ಮಾಡಿಕೊಂಡ ಹುಡುಗ..!

ತಿ ಕುರುಡು, ಪ್ರೇಮಕ್ಕೆ ಕಣ್ಣಿಲ್ಲ ಅಂತಾರ. ಅದು ಖರೆನಾ ಅನಿಸುತ್ತ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸ್ತಿದ್ದ ಪ್ರೇಯಸಿಯ ಸಮಾಧಿ ಎದುರು ಆತ್ಮಹತ್ಯೆ ಮಾಡಿಕೊಂಡು ಘಟನೆ ನಡದೈತಿ. ಬಿಳಿ ಹಾಳಿಯಂಗಿರೋ ಪ್ರೀತಿಗೆ ಪ್ರಾಣದ ಹಂಗಿಲ್ಲ ಅಂತಾರ. ಆದ್ರ ಈ ಜೋಡಿ ಈ ಮಾತು ಖರೆ ಮಾಡ್ಯಾರ. ಪ್ರೀತಿಯ ವಿಷಯದೊಳಗ ಮಾದರಿಯಾಗಿ ಕುಟುಂಬಸ್ಥರಿಗೆ ಶಾಶ್ವತ ದು:ಖ ನೀಡ್ಯಾರ.