ಬೆಂಗಳೂರು:ಕಾಂಗ್ರೆಸ್ ಪಕ್ಷದ ಯಾವ ಶಾಸಕರು ರಾಜಿನಾಮೆ ನೀಡುವುದಿಲ್ಲ. ತಮ್ಮ ಪಕ್ಷದ ಹುಳುಕು ಮುಚ್ಚಿಕೊಳ್ಳಲು ಸಚಿವ ರಮೇಶ್ ಜಾರಕಿಹೊಳಿ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟವೇ ಬಿಜೆಪಿಗೆ ಮುಳುವಾಗಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರಲು ಸಿದ್ಧರಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ನಿಡಿದ ಹೇಳಿಕೆ ಪ್ರತಿಕ್ರಿಸಿದ ಸಿದ್ದರಾಮಯ್ಯ, ಬಿಜೆಪಿಯಲ್ಲಿ ಬೆಂಕಿ ಬಿದ್ದಿದೆ. ಯಡಿಯೂರಪ್ಪ ಬಗ್ಗೆ ಯತ್ನಾಲ್ ನೀಡಿದ ಹೇಳಿಕೆ ಅರ್ಥವೇನು? ಬಿಜೆಪಿಯ ಆಂತರಿಕ ಭಿನ್ನಮತದಲ್ಲಿ ಕಾಂಗ್ರೆಸ್ ಕೈ ಹಾಕುವುದಿಲ್ಲ. ಅವರ ಕಚ್ಚಾಟದಿಂದ ಸರ್ಕಾರ ಹೋದರೆ ನಾವು ಜವಾಬ್ದಾರರಲ್ಲ. ಇಂಥ ಕೆಟ್ಟ ಸರ್ಕಾರ ಎಂದೂ ಬಂದಿರಲಿಲ್ಲ ಎಂದು ಕಿಡಿಕಾರಿದರು.

ಉಮೇಶ್ ಕತ್ತಿಯವರು ನನ್ನನ್ನು ಭೇಟಿಯಾಗಲು ಪ್ರಯತ್ನ ಮಾಡಿದರು ಎಂಬುದು ಊಹಾಪೋಹ. ಅವರು ನನ್ನ ಸ್ನೇಹಿತರು. ನನ್ನ ಮತ್ತು ಅವರ ಮಧ್ಯೆ ಗೆಳೆತನ, ವಿಶ್ವಾಸ ಇದೆ. ಆದರೆ ಅವರು ನನ್ನನ್ನು ಭೇಟಿಯಾಗುವ ಪ್ರಯತ್ನ ಮಾಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *

You May Also Like

ಅನ್ಲಾಕ್-2 ಮಾರ್ಗಸೂಚಿ ಬಿಡುಗಡೆ!: ಏನಿರುತ್ತೆ, ಏನಿರಲ್ಲ

ನವದೆಹಲಿ : ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಜುಲೈ 31ರ ವರೆಗೆ ಶಾಲಾ, ಕಾಲೇಜು,…

ಪುರಾಣ ಪ್ರವಚನ ಪ್ರಾರಂಭೋತ್ಸವ ಆಧ್ಯಾತ್ಮಿಕ ಜೀವನ ಚೈತ್ರವೇ ನವೋಲ್ಲಾಸಕ್ಕೆ ದಾರಿ- ರುದ್ರಮುನಿ ಶಿವಾಚಾರ್ಯ

ಉತ್ತರಪ್ರಭ ಸುದ್ದಿಆಲಮಟ್ಟಿ: ಧಾಮೀ೯ಕ ಪ್ರವಚನಗಳು ಆಲಿಸುವುದರಿಂದ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ನೆಲೆಗೊಳ್ಳುತ್ತದೆ. ಒಳ್ಳೆಯ ವಿಚಾರಗಳು ಶ್ರವಣಗಳಿಗೆ…

ಮಹಾರಾಷ್ಟ್ರದಲ್ಲಿ ಬಿಜೆಪಿ ಸಮರ್ಥ ವಿರೋಧ ಪಕ್ಷವಾಗಿ ಕೆಲಸ ಮಾಡಲಿ: ರಾಹುಲ್ ಗಾಂಧಿ

ಮಹಾರಾಷ್ಟ್ರ ಪ್ರಾಕೃತಿಕ ವಿಪತ್ತಿನ ವಿರುದ್ಧ ಹೋರಾಡುತ್ತಿದೆ. ಮಹಾರಾಷ್ಟ್ರದ ದೇಶದ ದೊಡ್ಡ ಆಸ್ತಿ. ಇದು ವ್ಯವಹಾರದ ಕೇಂದ್ರ. ಆದ್ದರಿಂದ ಮಹಾರಾಷ್ಟ್ರ ರಾಜ್ಯವನ್ನು ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲಿಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಇಂದು ವಿದ್ಯುತ್ ಶಾರ್ಟ್ ಸರ್ಕ್ಯೂಟ್

ಕೊಪ್ಪಳ: ಕೊಪ್ಪಳದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಂಗಡಿ ಸುಟ್ಟು ಹೊಗಿರುವ ಘಟನೆ ಇಂದು ಬೆಳಿಗ್ಗೆ…