ಉತ್ತರಪ್ರಭ ಸುದ್ದಿ
ಗದಗ: ಯಲಬುರ್ಗಾ ಗೋರ ಸೇನಾ ತಾಲೂಕಾಧ್ಯಕ್ಷ ಪರಶುರಾಮ ನಿಧನ. ಪರಸುರಾಮ ನಾಯಕ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾರನಾಳ ತಾಂಡಾದವರಾಗಿದ್ದು. ಇವರು ಬಂಜಾರ ಸಮಾಜವನ್ನು ಸಂಘಟಿಸಲು ಸದಾ ಮುಂದಿರುವ ವ್ಯಕ್ತಿ ಮತ್ತು ಎಲ್ಲ ಜನಾಂಗದ ಜೋತೆ ಒಳ್ಳೆಯ ಬಾಂಧವ್ಯ ಹೊಂದಿರುವವರು. ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಗೋರ ಸೇನಾ ಸಂಘಟನೆ ಕಟ್ಟಿ ಅದರಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ ಸಂಘಟನಾ ಚತುರ, ಅವರ ಅಗಲಿಕೆ ಸಮಾಜಕ್ಕೆ, ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟ , ಸಮಾಜವನ್ನು ಜಾಗೃತ ಮಾಡಲು ಅವರ ಸೇವೆ ಅವಶ್ಯವಿತ್ತು. ಪರಶುರಾಮ ನಾಯಕ ಅವರಿಗೆ ಹಲವಾರು ಸಂಘ ಸಂಸ್ಥೆಗಳಿoದ ಅನೇಕ ಪ್ರಶಸ್ತಿಗಳು ಲಭಿಸಿವೆ. ಇವರು ಪತ್ನಿ,ಇಬ್ಬರೂ ಪುತ್ರರು ಮತ್ತು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ದಿನಾಂಕ:29.12.2021ರAದು ಮರನಾಳ ಗ್ರಾಮದಲ್ಲಿ 12.30ಗೆ ನೇರವೇರುವುದೆಂದು ತಿಳಿಸಿದ್ದಾರೆ.
ಗೋರ ಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಸಂತಾಪ:
ಪರಶುರಾಮ ನಾಯಕ ಸದಾ ನಗುತಲಿರುವ ವ್ಯಕ್ತಿ, ಸಂಘಟನಾ ಚತುರ, ಅವರ ನಿಧನ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ. ಅವರ ಅಗಲಿಕೆ ಅವರೆಲ್ಲಾ ಅಭಿಮಾನಿಗಳಿಗೆ ಬೆಸರ ತಂದಿದೆ, ಸಮಾಜದ ಬಗ್ಗೆ ತುಂಬಾ ಕಾಳಜಿ, ಎಲ್ಲರನ್ನು ಗೌರವಿಸುವ ಮನೋಭಾವವಿರುವ ವ್ಯಕ್ತಿತ್ವ, ಅವರ ಅಗಲಿಕೆಯಿಂದ ಸಮಾಜ,ಸಂಘಟನೆ ಮತ್ತು ಕುಂಟುoಬಕ್ಕೆ ತುಂಬಲಾರದ ನಷ್ಟ. ಭಗವಂತ ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುವೆ ಹಾಗೂ ಗೋರಸೇನಾ ರಾಷ್ಟ್ರ, ರಾಜ್ಯ, ಕೊಪ್ಪಳ ಜಿಲ್ಲಾ ಮತ್ತು ಯಲಬುರ್ಗಾ ತಾಲೂಕ ಘಟಕದ ಪದಾಧಿಕಾರಿಗಳು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.