ಉತ್ತರಪ್ರಭ ಸುದ್ದಿ
ಗದಗ:
ಯಲಬುರ್ಗಾ ಗೋರ ಸೇನಾ ತಾಲೂಕಾಧ್ಯಕ್ಷ ಪರಶುರಾಮ ನಿಧನ. ಪರಸುರಾಮ ನಾಯಕ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಾರನಾಳ ತಾಂಡಾದವರಾಗಿದ್ದು. ಇವರು ಬಂಜಾರ ಸಮಾಜವನ್ನು ಸಂಘಟಿಸಲು ಸದಾ ಮುಂದಿರುವ ವ್ಯಕ್ತಿ ಮತ್ತು ಎಲ್ಲ ಜನಾಂಗದ ಜೋತೆ ಒಳ್ಳೆಯ ಬಾಂಧವ್ಯ ಹೊಂದಿರುವವರು. ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ಗೋರ ಸೇನಾ ಸಂಘಟನೆ ಕಟ್ಟಿ ಅದರಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಮಾಡಿದ ಸಂಘಟನಾ ಚತುರ, ಅವರ ಅಗಲಿಕೆ ಸಮಾಜಕ್ಕೆ, ಅಭಿಮಾನಿಗಳಿಗೆ ಮತ್ತು ಕುಟುಂಬಕ್ಕೆ ತುಂಬಲಾರದ ನಷ್ಟ , ಸಮಾಜವನ್ನು ಜಾಗೃತ ಮಾಡಲು ಅವರ ಸೇವೆ ಅವಶ್ಯವಿತ್ತು. ಪರಶುರಾಮ ನಾಯಕ ಅವರಿಗೆ ಹಲವಾರು ಸಂಘ ಸಂಸ್ಥೆಗಳಿoದ ಅನೇಕ ಪ್ರಶಸ್ತಿಗಳು ಲಭಿಸಿವೆ. ಇವರು ಪತ್ನಿ,ಇಬ್ಬರೂ ಪುತ್ರರು ಮತ್ತು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ದಿನಾಂಕ:29.12.2021ರAದು ಮರನಾಳ ಗ್ರಾಮದಲ್ಲಿ 12.30ಗೆ ನೇರವೇರುವುದೆಂದು ತಿಳಿಸಿದ್ದಾರೆ.

ಗೋರ ಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ ಸಂತಾಪ:

ಪರಶುರಾಮ ನಾಯಕ ಸದಾ ನಗುತಲಿರುವ ವ್ಯಕ್ತಿ, ಸಂಘಟನಾ ಚತುರ, ಅವರ ನಿಧನ ಸುದ್ದಿ ಕೇಳಿ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ. ಅವರ ಅಗಲಿಕೆ ಅವರೆಲ್ಲಾ ಅಭಿಮಾನಿಗಳಿಗೆ ಬೆಸರ ತಂದಿದೆ, ಸಮಾಜದ ಬಗ್ಗೆ ತುಂಬಾ ಕಾಳಜಿ, ಎಲ್ಲರನ್ನು ಗೌರವಿಸುವ ಮನೋಭಾವವಿರುವ ವ್ಯಕ್ತಿತ್ವ, ಅವರ ಅಗಲಿಕೆಯಿಂದ ಸಮಾಜ,ಸಂಘಟನೆ ಮತ್ತು ಕುಂಟುoಬಕ್ಕೆ ತುಂಬಲಾರದ ನಷ್ಟ. ಭಗವಂತ ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸುವೆ ಹಾಗೂ ಗೋರಸೇನಾ ರಾಷ್ಟ್ರ, ರಾಜ್ಯ, ಕೊಪ್ಪಳ ಜಿಲ್ಲಾ ಮತ್ತು ಯಲಬುರ್ಗಾ ತಾಲೂಕ ಘಟಕದ ಪದಾಧಿಕಾರಿಗಳು ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You May Also Like

ಬಸವಣ್ಣನವರ ವಚನ ಕ್ರಾಂತಿ ವಿಶ್ವದ ಬಹುದೊಡ್ಡ ಕ್ರಾಂತಿ: ಡಾ.ಬಸವಲಿಂಗ ಸ್ವಾಮೀಜಿ

ವೇದ ಪರಂಪರೆ, ವೈದಿಕ ಪರಂಪರೆ ಮತ್ತು ಆಚಾರ್ಯ ಪರಂಪರೆಗಳಿಗಿಂತಲೂ ಬಸವ ಪರಂಪರೆ ಶ್ರೇಷ್ಠವಾದುದು. ಎಲ್ಲರ ಬದುಕಿಗೆ ಅನುಗುಣವಾದ ಪರಂಪರೆ ಇದು. ಈ ನಿಟ್ಟಿನಲ್ಲಿ ಬಸವಣ್ಣನವರ ವಚನ ಕ್ರಾಂತಿ ವಿಶ್ವದ ಬಹುದೊಡ್ಡ ಕ್ರಾಂತಿಯಾಗಿದೆ

ರಾಜ್ಯ ಕ.ಸಾ.ಪ ಕಾರ್ಯಕಾರಿ ಸಮಿತಿಗೆ ನೇಮಕ.

ಬೆಂಗಳೂರ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ ಅವರು ಕನ್ನಡ ಭಾಷೆ,…

ಯಾರ ಜಪ್ತಿಗೂ ಸಿಗದ ನವಿಲುಗಳು ದೇವನೂರು ಮಹಾದೇವ ಅವರು..!

ದೇವನೂರರ ಕೃತಿ ಮತ್ತು ಇವರ ಬಗ್ಗೆ ಸಾಹಿತಿಗಳು, ಮಿತ್ರರು, ಕುಟುಂಬದವರು ಬರೆದಿರುವ, ಹೇಳಿರುವ ನೆನಪುಗಳು, ಕೃತಿಗಳ ಬಗ್ಗೆ ಹಿರಿಯ ಸಾಹಿತಿಗಳ ಅನಿಸಿಕೆಗಳು, ಸ್ನೇಹಿತರು ಬರೆದಿರುವ ಪತ್ರಗಳು, ಛಾಯಾಚಿತ್ರಗಳಿಂದ ಕೂಡಿದ್ದು, ಒಂದು ರೀತಿಯ ಅಭಿನಂದನಾ ಗ್ರಂಥವೆನಿಸುವAತಹ ‘ಯಾರ ಜಪ್ತಿಗೂ ಸಿಗದ ನವಿಲುಗಳು’ 2000 ದಲ್ಲಿ ಪ್ರಕಟವಾಗಿದೆ..!

ಮೂರುಸಾವಿರಮಠ ಮತ್ತು ಆಸ್ತಿಗಳ ವಿಚಾರ: ಬಹಿರಂಗ ಚರ್ಚೆಗೆ ದಿಂಗಾಲೇಶ್ವರ ಶ್ರೀಗಳ ಆವ್ಹಾನ

ಶ್ರೀ ಜಗದ್ಗುರು ಮಾರುಸಾವಿರಮಠದ ಆಸ್ತಿ ಮತ್ತು ಉತ್ತರಾಧಿಕಾರಕ್ಕೆ ಸಂಬಂಧಪಟ್ಟ ವಿಚಾರವಾಗಿ ಹೇಳಿಕೆ ನೀಡುವ ಯಾವುದೇ ವ್ಯಕ್ತಿಗಳು ನಮ್ಮೊಂದಿಗೆ ಚರ್ಚಿಸಿ ಹೇಳಿಕೆ ನೀಡಬೇಕು ಎಂದು ಬಾಲೇಹೊಸೂರು ದಿಂಗಾಲೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳು ತಿಳಿಸಿದ್ದಾರೆ.