ಸಮಾಜದ ಒಲವು, ಕರ್ತವ್ಯ ಮರೆಯುವಂತಿಲ್ಲ. ಸಮಾಜ ಆಧುನಿಕತೆಯತ್ತ ತೆರೆದುಕೊಳ್ಳುತ್ತದೆ. ನಿಸರ್ಗದ ಸಂಶೋಧನೆಗಳ ಪ್ರಕಾರ ಯಾವುದೇ ವಸ್ತುವು ಕೇವಲ ಘನ ವಸ್ತುವಾಗಿರದೇ ಅಂದೊಂದು ಬಲದ ಸಂಚಯವಾಗಿದೆ.
ಆ ಚಿಂತನೆ ನಮ್ಮ ಯೋಚನೆಯ ದಿಕ್ಕನ್ನೆ ಬದಲಿಸಿ ಹೋಗುತ್ತದೆ. ಹಳೆಯ ಚಿಂತನೆಗಳು ಮತ್ತು ಹೊಸ ಶೋಧಗಳ ನಡುವೆ ಆಳವಾದ ಘರ್ಷಣೆ ಆಗುತ್ತದೆ. ಹಳೆಯ ಮತ್ತು ಹೊಸ ವಿಚಾರ ಧಾರೆಗಳು ತಮ್ಮ ಧೋರಣೆ ಹೊಂದಿರುತ್ತದೆ.
ನಮ್ಮ ಜೀವನದಲ್ಲಿ ಭಿನ್ನತೆ ತೀವ್ರವಾಗಿದೆ. ಒಡಕು ಹೆಚ್ಚುತ್ತಿದೆ. ಜನರು ಯೋಚನೆ ಮತ್ತು ಕ್ರಿಯೆಗಳು ವಿಭಜಿಸುವ ನಿಟ್ಟಿನಲ್ಲೇ ಇವೆ. ನನ್ನದರ ಹೊರತಾಗಿ ಮತ್ಯಾವುದು ಸರಿಯಲ್ಲ. ಮಾನವರ ಬದುಕುಗಳಿಗೆ ಪ್ರೀತಿ, ಭ್ರಾತೃತ್ವ, ಕರುಣೆ, ಅನುಕಂಪ, ಸಹಾನುಭೂತಿಯ ಸ್ಪರ್ಶ ನೀಡುವ ತುರ್ತು ಅಗತ್ಯವಿದೆ. ನಮಗಿರುವ ಸೀಮಿತ ಅರಿವಿನ ಮೂಲಕವೇ ನಾವು ಜಗತ್ತನ್ನು ನೋಡುತ್ತೇವೆ.
ಒಂದು ಚಕ್ರದ ಕಡ್ಡಿಗಳನ್ನು ಬಿಡಿ ಬಿಡಿಯಾಗಿ ನೋಡಿದಾಗ ಅವು ಪ್ರತ್ಯೇಕ ಕಡ್ಡಿಗಳಂತೆಯೇ ಕಾಣುತ್ತೇವೆ . ಆದರೆ ನಮ್ಮ ದೃಷ್ಟಿಯನ್ನು ಕೇಂದ್ರ ದತ್ತ ತಿರುಗಿಸಿದಾಗ ನಮ್ಮ ದೃಷ್ಟಿ ಕೋನ ಮತ್ತು ಸಮಗ್ರ ಚಿತ್ರಣ ಬದಲಾಗುತ್ತದೆ. ಸೃಷ್ಟಿಯ ಹರಿವಿನ ಅರಿವು ದಕ್ಕುತ್ತದೆ. ಬದುಕಿನ ಬಗ್ಗೆ ಆಳವಾಗಿ ಹೆಚ್ಚು ಹೆಚ್ಚು ತಿಳಿದಂತೆಲ್ಲಾ ನಾವೆಲ್ಲಾ ಬಯಸುವ ಶಾಂತಿ, ನೆಮ್ಮದಿ, ಸಂತೋಷ ಮತ್ತು ಪ್ರೀತಿ ನಮಗೆ ದಕ್ಕುತ್ತದೆ. ನಾನು ನನ್ನೊಳಗಿನ ನನ್ನೊಂದಿಗೆ ಉತ್ತಮವಾದ ಬೆಸುಗೆ ಬೆಳೆಸಿ ಕೊಂಡಿದ್ದೇನೆ. ಅದೇ ಎಂದಿಗೂ ಕೈ ಬಿಡದ ಆತ್ಮ ವಿಶ್ವಾಸ, ಮಾನಸಿಕ ವಾಗಿ ಶಕ್ತಿ ತುಂಬಿ ಕೊಳ್ಳುವುದನ್ನು ಕಲಿತುಕೊಂಡೆ. ಹೀಗಾಗಿ ನನಗೆ ಯಾವ ಸಂಗತಿ ದೊಡ್ಡ ದಾಗಿರಲಿಲ್ಲ.
ನಡೆಯೋದೆಲ್ಲ ಒಳ್ಳೇಯದಕ್ಕೆ. ಯಶಸ್ವಿಯಾದ ಬದುಕಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ ನಾವು ಬೆಳೆದುಬಂದ ಹೆಜ್ಜೆಗಳಲ್ಲವು ಏಣಿಯ ಮೆಟ್ಟಿಲುಗಳನ್ನು ಕಾಣುತ್ತದೆ. ಆದರೆ, ನಾವು ಎಂಥ ಕಾಲ ಘಟ್ಟದಲ್ಲಿ ಜಿವಿಸುತ್ತಿದೇವೆ ಎಂಬುದನ್ನು ಅರಿಯಲು ಈ ಪ್ರಸಂಗ ಹೇಳಬೇಕಾಯಿತು. ಎಲ್ಲರು ಬದುಕುವ ರೀತಿ ಬೇರೆ ಬೇರೆ ಯಾಗಿರುತ್ತದೆ. ಅವರ ಯೋಗ್ಯತೆ ಮೇಲೆ ಅಹರ್ತೆ, ಸಂಸ್ಕೃಕಾರ, ನಡವಳಿಕೆ ಬಗ್ಗೆ ತಿಳಿಸುತ್ತದೆ. ಆದರೆ, ಇಂದು ಸಂಬಂಧಗಳ ಬೆಲೆ ತಿಳಿಯದೆ ಅವುಗಳು ಅಳಿವಿನ ಅಂಚಿನಲ್ಲಿ ಇವೆ. ಆಧುನಿಕತೆಗೆ ಮಾರುಹೋಗಿ ಜೀವನದ ಉತ್ಸಾಹ ಮರೆಯುತ್ತಿದ್ದೇವೆ.
ಹಬ್ಬ, ಹರಿದಿನಗಳಲ್ಲಿ ಅಂತು ಕೇಳಬೇಕೆ. ಮೊಬೈಲ್ ಜಗತ್ತಿನಲ್ಲಿ ಕಳೆದು ಹೋಗಿದ್ದಾರೆ. ಆಧುನಿಕತೆ ಜೀವನಕ್ಕೆ ಅಡಿಪಾಯವಾಗಬೇಕು. ಸಂಬAಧಗಳನ್ನು ಮರೆಯುವಷ್ಟವಲ್ಲ. ಇಂದಿನ ದಿನಗಳಲ್ಲಿ ಸಂಬಂಧಗಳಿಗೆ ಆದ್ಯತೆ ನೀಡಬೇಕಾಗಿದೆ..
– ದೀಪಾ ಹೊನ್ನಪ್ಪನವರ