ಉತ್ತರಪ್ರಭ ಸುದ್ದಿ

ಗದಗ: ರಾಜ್ಯದಲ್ಲಿ 58 ಸ್ಥಳಿಯ ಸಂಸ್ಥೆಗಳಿಗೆ ಹಾಗೂ ಅವಧಿ ಮುಕ್ತಾಯವಾದ ಮತ್ತು ಖಾಲಿ ಇರುವ ಗ್ರಾಮ ಮಂಪಚಾಯತ್ ಸದಸ್ಯ ಸ್ಥಾನಗಳಿಗೆ ಇದೇ ಡಿಸೆಂಬರ್ 27 ರಂದು ಮತದಾನ ನಡೆಯಲಿದೆ.

ಸಾರ್ವತ್ರಿಕ, ಉಪ ಚುನಾವಣೆ ನಡೆಯುವ ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಮತ ಕ್ಷೇತ್ರದಲ್ಲಿನ ಸರ್ಕಾರಿ ಹಾಗೂ ಖಾಸಗಿ ಶಾಲಾ ಕಾಲೇಜುಗಳು, ಅನುದಾನಿತ ಹಾಗೂ ಅನುದಾನರಹಿತ ವಿದ್ಯಾ ಸಂಸ್ಥೆಗಳು, ಎಲ್ಲಾ ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕಚೇರಿಗಳು, ರಾಷ್ಟ್ರೀಕೃತ ಹಾಗೂ ಇತರೆ ಬ್ಯಾಂಕುಗಳು, ಕಾರ್ಖಾನೆಗಳು, ಉಳಿದ ಕೈಗಾರಿಕಾ ಕಾರ್ಖಾನೆಗಳು, ಸಹಕಾರ ರಂಗದ ಸಂಸ್ಥೆಗಳಲ್ಲಿ ಎಲ್ಲ ವ್ಯವಹಾರಿಕ ಸಂಸ್ಥೆಗಳಲ್ಲಿ ಔಧ್ಯಮಿಕ ಸಂಸ್ಥೆಗಳಲ್ಲಿ, ಖಾಯಂ ಆಗಿ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಅರ್ಹ ಮತದಾರ ನೌಕರರಿಗೆ ಸೀಮಿತವಾದಂತೆ ದಿನಾಂಕ 27-12-2021 ರಂದು ವೇತನ ಸಹಿತ ರಜೆಯನ್ನು ಘೋಷಿಸಿ ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ.


ಈ ರಜೆಯು ತುರ್ತು ಸೇವೆಗಳ ಮೇಲೆ ಇರುವ ಸರ್ಕಾರಿ ನೌಕರರಿಗೆ ಅನ್ವಯಿಸುವುದಿಲ್ಲ. ಆದಾಗ್ಯೂ ಕೂಡ ತುರ್ತು ಸೇವೆಯಡಿ ಕೆಲಸ ಮಾಡುವ ನೌಕರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡತಕ್ಕದ್ದು, ಈ ಚುನಾವಣಾ ಕಾರ್ಯಗಳಿಗೆ
ನಿಯೋಜಿಸಲ್ಪಟ್ಟ ಎಲ್ಲಾ ಸರ್ಕಾರಿ ನೌಕರರಿಗಳು ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

You May Also Like

ಗುಲಗಂಜಿಕೊಪ್ಪ ವಿದ್ಯಾರ್ಥಿಗಳ ಗೋಳು ಕೇಳೋರು ಯಾರು

ಲಕ್ಷ್ಮೇಶ್ವರ: ತಾಲೂಕಿನ ಗುಲಗಂಜಿಕೊಪ್ಪ ಗ್ರಾಮದ ವಿದ್ಯಾರ್ಥಿಗಳಿಗೆ ಯಾರು ಬಸ್ ನಿಲ್ಲಸೊಲ್ಲ ವಿದ್ಯಾರ್ಥಿಗಳಿಗೆ ಏನು ಮಾಡಬೇಕು ಎಂದು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತ್ ಸದಸ್ಯರುಹಾಗೂ ಕರವೇ ಸ್ವಾಭಿಮಾನ ಬಣದಿಂದ ಲಕ್ಷ್ಮೇಶ್ವರ ಬಸ್ ಡಿಪೋದಲ್ಲಿ ಮನವಿ ಸಲ್ಲಿಸಲಾಯಿತು.

ಲಕ್ಷ್ಮೇಶ್ವರ:ಬತ್ತಿದ ಬೋರ್ ವೆಲ್ ನಲ್ಲಿ ಜಲಲ ಧಾರೆ…!

ಅಂತರ್ಜಲ ಹೆಚ್ಚಳದಿಂದ ಬತ್ತಿದ ಕೊಳವೆ ಬಾವಿಯಲ್ಲಿ ನೀರು ಚಿಮ್ಮುತ್ತಿದೆ. ಇದರಿಂದ ರೈತರಲ್ಲಿ ಸಂತಸ ಮೂಡಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಜುಲೈ 16ರಂದು ವಿದ್ಯುತ್ ವ್ಯತ್ಯಯ

ಗದಗ (ಕರ್ನಾಟಕ ವಾರ್ತೆ) ಜುಲೈ 14 : 110 ಕೆವ್ಹಿ ಶಿರಹಟ್ಟಿ ಉಪ ವಿದ್ಯುತ್ ವಿತರಣಾ…

ಬಸ್ ನಿಲುಗಡೆ ಸ್ಥಳದಲ್ಲೇ ಬೈಕ್ ಪಾರ್ಕಿಂಗ್, ಪ್ರಯಾಣಿಕರ ಪರದಾಟ

ಸ್ಥಳೀಯ ಬಸ್ ನಿಲ್ಧಾಣದ ನಿಲುಗಡೆ ಸ್ಥಳದಲ್ಲೇ ನಿತ್ಯ ಬೈಕ್ ಗಳ ಪಾರ್ಕಿಂಗ್ ಮಾಡುತ್ತಿದ್ದು ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಹೊಸ ಬಸ್ ನಿಲ್ಧಾಣ ಆರಂಭವಾದಾಗಿನಿಂದ ಬೈಕ ನಿಲ್ಲಿಸಲು ಪ್ರತ್ಯೇಕ ಜಾಗದ ವ್ಯವಸ್ಥೆ ಇಲ್ಲದಿರುವದು ಈ ಸಮಸ್ಯೆ ಉಂಟಾಗಿದೆ. ನಿಲ್ಧಾನದಲ್ಲಿ ಯಾವ ಸೂಚನಾ ಫಲಕವನ್ನು ಅಳಡಿಕೆಗೆ ಸಂಬಂಧಿಸಿದ ಸಾರಿಗೆ ಸಂಸ್ಥೆ ಸೂಕ್ತ ವ್ಯವಸ್ಥೆ ಮಾಡುತ್ತಿಲ್ಲ.