ಗದಗ (ಕರ್ನಾಟಕ ವಾರ್ತೆ) ಜುಲೈ 14 : 110 ಕೆವ್ಹಿ ಶಿರಹಟ್ಟಿ ಉಪ ವಿದ್ಯುತ್ ವಿತರಣಾ ಕೇಂದ್ರದ ಪರಿವರ್ತಕ-2ರಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಂಡಿದ್ದು, ಜುಲೈ 16 ರಂದು ಬೆಳಗ್ಗೆ 10 ಘಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತದೆ. ಕಾರಣ 110 ಕೆವ್ಹಿ ಶಿರಹಟ್ಟಿ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುತ್ತಿರುವ ಎಫ್-8 ಸೊರಟೂರು ಎನ್.ಜೆ.ವೈ, ಎಫ್-9 ಬಸಾಪೂರ, ಎಫ್-10 ಶಿರಹಟ್ಟಿ(ಶಹರ), ಎಫ್-11 ಇಂಡಸ್ಟಿಯಲ್, ಎಫ್-13 ವಾಟ್‌ರ್ ಸಪ್ಲೆ ಹಾಗೂ ಗ್ರಾಮೀಣ ಪ್ರದೇಶಗಳ 11 ಕೆವ್ಹಿ ವಿತರಣಾ ಮಾರ್ಗಗಳಲ್ಲಿ, ವಿದ್ಯುತ್ ವ್ಯತ್ಯಯವಾಗಲಿದೆ. ಕಾರಣ ಸಾರ್ವಜನಿಕರು ಸಹಕರಿಸಲು ಕಾರ್ಯನಿರ್ವಾಹಕ ಇಂಜನೀಯರ್ ತಿಳಿಸಿದ್ದಾರೆ.
You May Also Like
ರೋಣದಲ್ಲಿ ಕಠಿಣ ಲಾಕ್ ಡೌನ್ ಗೆ ಜನರ ಸಾಥ್
ರೋಣ: ಪಟ್ಟಣದಾದ್ಯಂತ ಕಠಿಣ ಲಾಕ್ ದೌನ್ ಹಿನ್ನೆಲೆ ಘೋಷಣೆಯಾಗಿದ್ದು, ಸತತವಾಗಿ ಮೂರನೇ ದಿನಕ್ಕೆ ಕಾಲಿಟ್ಟಿದೆ. ಕಠಿಣ ಕ್ರಮಕ್ಕೆ ಜನರು ಸಹಕಾರ ನೀಡಿದ ಪರಿಣಾಮ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅನಗತ್ಯವಾಗಿ ಯಾರೊಬ್ಬರೂ ಹೊರಬರದೆ ಇರುವುದು ಆಶ್ಚರ್ಯಕರ ಸಂಗತಿಯಾಗಿದೆ.
- ಉತ್ತರಪ್ರಭ
- May 30, 2021