ಉತ್ತರಪ್ರಭ ಸುದ್ದಿ

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯ್ತಿ ಮುಂದೆ ಡಿ.ಎಸ್.ಎಸ್. ಸಂಘಟನೆಗಳು ನಡೆಸುತ್ತಿದ್ದ ಆಮರಣ ಸತ್ಯಾಗ್ರಹ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರಶಾಂತ ವರಗಪ್ಪನವರ, ಗದಗ ತಹಶೀಲ್ದಾರ ಕಿಷನ್ ಕಲಾಲ್ ಭೇಟಿ ನೀಡಿ ಸತ್ಯಾಗ್ರಹ ನಿರತರ ಮನವಿ ಸ್ವೀಕರಿಸಿದರು. ನಂತರ ಸತ್ಯಾಗ್ರಹ ಅಂತ್ಯಗೊಂಡಿತು.

ಈ ವೇಳೆ ಚಿಂಚಲಿ ಗ್ರಾಮ ಪಂಚಾಯ್ತಿ ಸದಸ್ಯ ಚಂದ್ರಶೇಖರ ಹರಿಜನ ಮಾತನಾಡಿ, 11ನೇ ವಾರ್ಡಿನ ಪಪಂ ಸದಸ್ಯ ಬಸವಂತಪ್ಪ ಹಾರೋಗೇರಿ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಖೋಟ್ಟಿ ಆಗಿದ್ದು ತನಿಖೆ ನಡೆಸಿ ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಒಂದುವರೆ ವರ್ಷದ ಹಿಂದೆ ಮನವಿ ಕೊಟ್ಟಿದ್ದೇವೆ, ಇವರೆಗೂ ಇತ್ಯರ್ಥವಾಗಿಲ್ಲ ಅಧಿಕಾರಿಗಳ ವಿಳಂಬ ಧೋರಣೆಯಿಂದ ಬೇಸತ್ತು ಆಮರಣ ಸತ್ಯಾಗ್ರಹ ಮಾಡಬೇಕಾಗಿದೆ. ನಿಜವಾದ ಪರಿಶಿಷ್ಟರ ಸವಲತ್ತುಗಳು ಅನ್ಯರ ಪಾಲಾಗಿದ್ದು ಕೂಡಲೆ ನ್ಯಾಯ ಒದಗಿಸಬೇಕು. ಈ ಕುರಿತು ಲಿಖಿತ ಭರವಸೆ ಕೊಡಬೇಕು. ಎಂದರು.

ನಂತರ ಜಿಲ್ಲಾ ಸಮಾಜ ಕಲ್ಯಾಣಧಿಕಾರಿ ಪ್ರಶಾಂತ ವರಗಪ್ಪನವರ ಮಾತನಾಡಿ, ಖೋಟ್ಟಿ ಜಾತಿ ಪ್ರಮಾಣ ಪತ್ರ ರದ್ದು ಕೋರಿ ಸಲ್ಲಿಸಿರುವ ಮನವಿ ಈಗಾಗಲೇ ಜಿಲ್ಲಾಡಳಿತ ತನಿಖೆ ಹಂತದಲ್ಲಿದೆ. ಪರ ಮತ್ತು ವಿರೋದಗಳನ್ನ ಆಲಿಸಿ ಜಿಲ್ಲಾಧಿಕಾರಿಗಳು ನ್ಯಾಯ ಇತ್ಯರ್ಥ ಮಾಡಲಿದ್ದು ತಮ್ಮ ಮನವಿಯನ್ನ ಅವರಿಗೆ ಸಲ್ಲಿಸುತ್ತೇವೆ. ಎಂದು ಭರವಸೆ ನೀಡಿದರು. ನಂತರ ಅರ್ಜಿದಾರ ಮರಿಯಪ್ಪ ನಡುಗೇರಿ ಮಾತನಾಡಿ, ಪರಿಶಿಷ್ಟ ಜಾತಿ ಸಮುದಾಯಕ್ಕೆ ಅನ್ಯಾಯವಾಗಿದ್ದು ತಾವು ಕೊಟ್ಟ ಭರವಸೆ ಕೂಡಲೆ ಈಡೆರದಿದ್ದರೆ ಜಿಲ್ಲಾಡಳಿತದ ಮುಂದೆ ಮತ್ತೆ ಸತ್ಯಾಗ್ರಹ ನಡೆಸುತ್ತೇವೆ. ಎಂದರು.

ಈ ಸಂದರ್ಭದಲ್ಲಿ ಗದಗ ತಾಲೂಕ ಸಮಾಜ ಕಲ್ಯಾಣಧಿಕಾರಿ ಎಸ್.ಎಂ.ಹೆಬ್ಬಳ್ಳಿ, ಡಿಎಸ್‍ಎಸ್‍ನ ಸುಭಾಶ್ ಜಾಲಣ್ಣವರ, ಪ್ರಕಾಶ ಗಡದವರ, ದೇವಪ್ಪ ನಡುಗೇರಿ, ಪರಸುರಾಮ ನಡುಗೇರಿ, ಗಾಳೆಪ್ಪ ನಡುಗೇರಿ, ಉಡಚಪ್ಪ ಪೂಜಾರ, ಸಂತೋಷ ಜಾಲಣ್ಣವರ, ಮಹಾಂತೇಶ ದೊಡ್ಡಮನಿ, ಬಸವರಾಜ ನಡುಗೇರಿ, ಬಸವಣ್ಣೆಪ್ಪ ನಡುಗೇರಿ, ಮಂಜು ಗಡದವರು, ಶರಣಪ್ಪ ಕಾಳೆ, ಕನಕಪ್ಪ ಹಲಗಿಕೆಂಚಣ್ಣವರ, ಫಕ್ಕಿರೇಶ ಚಾಕಲಬ್ಬಿ ಮೊದಲಾದವರು ಇದ್ದರು.

ಮುಳಗುಂದ ಡಿಎಸ್‍ಎಸ್ ಸಂಘಟನೆ ನಡಸುತ್ತಿದ್ದ ಸತ್ಯಾಗ್ರಹ ಮನವಿಯನ್ನ ಸಮಾಜ ಕಲ್ಯಾಣಧಿಕಾರಿ ಪ್ರಶಾಂತ ವರಗಪ್ಪನವರ ಸ್ವೀಕರಿಸಿದರು.

Leave a Reply

Your email address will not be published. Required fields are marked *

You May Also Like

ನರೆಗಲ್ ಗಾರ್ಡನ್ ಕಥೆ: 10 ಲಕ್ಷ ಖರ್ಚು ಮಾಡಿ 9 ವರ್ಷವಾದ್ರು, ಉಪಯೋಗಕ್ಕೆ ಬಾರದ ಉದ್ಯಾನವನ..!

ಗದಗ: ದೇವಾಲಯದ ಪಕ್ಕದಲ್ಲಿರುವ ಉದ್ಯಾನವನ ದೇವರು ವರ ಕೊಟ್ರು ಪೂಜಾರಿ ವರ ಕೊಡಲಿಲ್ಲ ಎನ್ನುವಂತಿದೆ. ಸರ್ಕಾರ…

ಗದಗ, ರೋಣ, ಮುಂಡರಗಿ, ತಾಲೂಕಿನ ಕೆಲವು ಕಡೆ ಕಂಟೇನ್ಮೆಂಟ್ ಘೋಷಣೆ

ಗದಗ: ಜಿಲ್ಲೆಯ ಕೆಲವು ತಾಲೂಕಿನ ಪ್ರದೇಶಗಳನ್ನು ಕಂಟೇನ್ಮೆಂಟ್ ಪ್ರದೇಶವೆಂದು ಘೋಷಣೆ ಮಾಡಲಾಗಿದೆ. ಅದರ ವಿವರ ಈ…

ರಾಷ್ಟ್ರೀಯ ಶಕ್ತಿ ಸಂರಕ್ಷಣಾ ದಿನ

 ಉತ್ತರಪ್ರಭ ಗದಗ: ತೋಂಟದಾರ್ಯ  ಇಂಜೀನಿಯರಿಂಗ್ ಕಾಲೇಜಿನ  ಇಲೇಕ್ಟ್ರೀಕಲ್ & ಇಲೇಕ್ಟ್ರಾನಿಕ್ಸ್ ವಿಭಾಗ ಮತ್ತು ಕಾಲೇಜಿನ ಇಂಟರಪುನರಶಿಪ್…

ನಗರ ಸಭೆ ಚುನಾವಣೆ: 17ನೇ ವಾರ್ಡನ ಪಕ್ಷೇತರ ಅಭ್ಯರ್ಥಿ  ಆಸ್ಮಾ ಮುನ್ನಾ ಸಾಭ ರೇಶ್ಮಿ ಮತ್ತು 3ನೇ ವಾರ್ಡನಲ್ಲಿ ಬಿಜೆಪಿಗೆ ಜಯ

ನಗರ ಸಭೆ ಚುನಾವಣೆ: 17ನೇ ವಾರ್ಡನ ಪಕ್ಷೇತರ ಅಭ್ಯರ್ಥಿ  ಆಸ್ಮಾ ಮುನ್ನಾ ಸಾಭ ರೇಶ್ಮಿ ಮತ್ತು…