ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಕಬ್ಬು ಕಟಾವಿಗೆ ಬಂದಿದ್ದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡದ ಬಡ ಕುಟುಂಬದ ಹೆಣ್ಣು ಮಗು ಮೃತಪಟ್ಟಿರುವ ದೃಶ್ಯ.

ವರದಿ: ವಿಠಲ ಕೆಳೂತ್

ಉತ್ತರಪ್ರಭ

ಮಸ್ಕಿ: ತುತ್ತಿನ ಚೀಲ ತುಂಬಿಕೊಳ್ಳಲು ಕೂಲಿ ಅರಸಿ ಅನ್ಯ ಜಿಲ್ಲೆಗಳಿಗೆ ಕಬ್ಬು ಕಟಾವಿಗೆ ತೆರಳಿದ ಕಲ್ಯಾಣ ಕರ್ನಾಟಕದ ಲಂಬಾಣಿ ಸಮಾಜದ ಬಡ ಕುಟುಂಬಗಳ ಮಕ್ಕಳು ಕಬ್ಬು ಕಟಾವು ವಾಹನಕ್ಕೆ ಸಿಲುಕಿ ಸಾವನ್ನಪ್ಪುತ್ತಿರುವ ದುರ್ಘಟನೆ ಹೆಚ್ಚುತ್ತಿದೆ.
ರಾಯಚೂರು ಭಾಗದಿಂದ ಕಬ್ಬು ಕಟಾವಿಗೆ ವಲಸೆ ಹೋಗುವ ಕೂಲಿ ಕಾರ್ಮಿಕ ಮಕ್ಕಳಿಗೆ ಭದ್ರತೆ ಇಲ್ಲದಂತಾಗಿದೆ. ಇದರಿಂದ ಬಡ ಕುಟುಂಬ ಮಕ್ಕಳು ಕಬ್ಬು ಕಟಾವು ವಾಹನಗಳಿಗೆ ಸಿಲುಕಿ ಸಾವಿನ್ನಪ್ಪಿತ್ತಿರುವ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಕಳೆದ ವಾರದ ಹಿಂದಷ್ಟೆ ಬಿಜಾಪೂರ ಜಿಲ್ಲೆ ವ್ಯಾಪ್ತಿಗೆ ಕಬ್ಬು ಕಟಾವಿಗೆ ತೆರಳಿದ್ದ ಲಿಂಗಸ್ಗೂರು ತಾಲೂಕಿನ ಗೋನವಟ್ಲಾ ತಾಂಡಾದ ಈಶಪ್ಪ ಅವರ ಮಗ ಕಬ್ಬು ತುಂಬಿದ ಟ್ಯಾಕ್ಟರ್ ವಾಹನಕ್ಕೆ ಸಿಲುಕಿ ಪ್ರಾಣ ಬಿಟ್ಟಿದ್ದು, ಅದರ ಜೊತೆ ಜೊತೆಗೆ ಇದೇ ತಾಲೂಕಿನ ಪರಾಂಪೂರ ತಾಂಡದ ಚಂದ್ರಶೇಖರ ಅವರ ಎರಡು ವರ್ಷ ಮಗುವಿಗೆ ಟ್ಯಾಕ್ಟರ್ ಹಿಂದೆ ಸೀರೆಯಿಂದ ತೊಟ್ಟಿಲು ಕಟ್ಟಿದ್ದರು. ಡೈವರ್ ಮಗುವನ್ನು ಲೆಕ್ಕಿಸದೇ ವಾಹನ ಓಡಿಸಿದ್ದಾರೆ. ಮಗು ಗಾಲಿ ಬಿದ್ದು ಪ್ರಾಣ ಕಳೆದುಕೊಂಡಿದೆ. ಈ ಘಟನೆಗಳು ಮಾಸುವ ಮುನ್ನ ಇನ್ನೊಂದು ಘಟನೆ ಜರುಗಿದೆ.


ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಕಬ್ಬು ಕಟಾವಿಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ತಾಂಡದ ಮನು ಎಂಬುವರು ಬಡ ಕುಟುಂಬದ ಹೆಣ್ಣು ಮಗು ಟಾಕ್ಟರನ ಹಿಂಬದಿ ಟ್ರಾಲಿಯಲ್ಲಿ ಕುಳಿತುಕೊಂಡಿದ್ದರು ಚಾಲಕ ವೇಗವಾಗಿ ಟ್ಯಾಕ್ಟರ್ ಓಡಿಸಿದ ಪರಿಣಾಮ ಎರಡನೇ ಟ್ರಾಲಿಯಲ್ಲಿ ಕುಳಿತಿದ್ದ ಮಗು ಜಂಪಿಗೆ ಹಾರಿ ಟಾಕ್ಟರ ಗಾಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿದೆ. ಇಂತಹ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಲಂಬಾಣಿ ಜನಾಂಗದ ಅನೇಕ ಬಡ ಕುಟುಂಬಗಳು ಹೊಟ್ಟೆ ತುಂಬಿಸಿಕೊಳ್ಳಲು ಕಬ್ಬು ಮಾಡಲು ತೆರಳಿ ತಮ್ಮ ಮಕ್ಕಳ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಶಾಲೆಗೆ ತೆರಳಿ ಆಟ ಪಾಠ ಕಲಿಯುವ ವಯಸ್ಸಿನಲ್ಲಿ ಪೋಷಕರ ಜೊತೆ ಕಬ್ಬು ಕಟಾವಿಗೆ ತೆರಳಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಕಬ್ಬು ತುಂಬುವ ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿರುವ ದುರ್ಘಟನೆ ನಡೆಯುತ್ತಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ತಪ್ಪಿಸಲು ಸರಕಾರ ಸಂಚಾರಿ ಶಾಲೆ ತೆರೆಯಬೇಕು,ಕೂಲಿ ಕಾರ್ಮಿಕರು ಕೆಲಸ‌‌‌ ನಿರ್ವಹಿಸುವ ವೇಳೆ ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರ ಸಾಮಾಜಿಕ ಭದ್ರತೆ ನೀಡಬೇಕು ಎಂದು ಗೋರ ಶಿಕವಾಡಿ ರಾಜ್ಯ ಸಂಚಾಲಕ ಬೋಜರಾಜ್ ನಾಯ್ಕ ಅವರು ಒತ್ತಾಯಿಸಿದ್ದಾರೆ.

ಇದನ್ನು ನೋಡಿ
Leave a Reply

Your email address will not be published. Required fields are marked *

You May Also Like

2ರಾಷ್ಟ್ರೀಯ ಬ್ಯಾಂಕ್; 8ಕೆಜಿ ನಕಲಿ ಚಿನ್ನ; 27 ಜನ 3 ಕೋಟಿ ಸಾಲ ಪಡೆದು ವಂಚನೆ..!

ಉತ್ತರಪ್ರಭ ಸುದ್ದಿಗದಗ: ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ…

ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಪತ್ನಿಯಿಂದಲೇ ಪತಿಯ ಬರ್ಬರ ಹತ್ಯೆ..!

ಉತ್ತರಪ್ರಭ ಸುದ್ದಿ ಗದಗ: ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಸುವರ್ಣಗಿರಿ ತಾಂಡಾದಲ್ಲಿ ಪತ್ನಿಯಿಂದಲೇ ಪತಿಯ ಹತ್ಯೆಯಾದ ಘಟನೆ…

ಡೆತ್‌ನೋಟ್ ಬರೆದಿಟ್ಟು ಪೊಲೀಸ್ ಪೇದೆ ಸಾವು

ಉತ್ತರಪ್ರಭ ಸುದ್ದಿಗದಗ: ತಾಲೂಕಿನ ಲಕ್ಕುಂಡಿ ಗ್ರಾಮದ ಮನೆಯಲ್ಲಿ ಪೊಲೀಸ್ ಪೇದೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ಸಾವಿಗೆ ಶರಣಾಗಿರುವ…

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ.

ವರದಿ: ವಿಠಲ ಕೆಳೂತ್ ಮಸ್ಕಿ: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ…