ಉತ್ತರಪ್ರಭ ಸುದ್ದಿ
ಗದಗ: ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ ರೂಪಾಯಿ ಹಣ ಸಾಲ ಪಡೆದಿದ್ದ ಮಾಜಿ ನಗರಸಭೆ ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಅವರ ಪುತ್ರ ದತ್ತಾತ್ರೇಯ ಬಾಕಳೆ ಸೇರಿದಂತೆ 17 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಹಾಗೆ ಯೂನಿಯನ್ ಬ್ಯಾಂಕ್‌ನಲ್ಲಿ ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 57 ಲಕ್ಷ ರೂಪಾಯಿ ಚಿನ್ನದ ಸಾಲ ಪಡೆಯಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲ ಪಡೆದಿದ್ದ ಒಟ್ಟು 11 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ ತಿಳಿಸಿದ್ದಾರೆ.
ಗದಗನಲ್ಲಿ ಎರಡು ದೊಡ್ಡ ನಕಲಿ ಚಿನ್ನದ ಗ್ಯಾಂಗ್ ಠಿಕಾಣಿ ಹೂಡಿದೆ. ಎರಡು ರಾಷ್ಟ್ರೀಯ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಾಂತರ ಸಾಲ ಪಡೆದು ಭಾರಿ ವಂಚನೆ ಮಾಡಿದ್ದಾರೆ. ಆರೋಪಿ ದತ್ತಾತ್ರೇಯ ಬಾಕಳೆ, ಬ್ಯಾಂಕ್‌ನಲ್ಲಿನ ಚಿನ್ನ ಪರೀಕ್ಷೆ ಮಾಡುವ ಸುರೇಶ್ ರೇವಣಕರ ಅವರ ಸಹಾಯ ಪಡೆದು ವಂಚನೆ ಮಾಡಿದ್ದ. ದತ್ತಾತ್ರೇಯ ಆ್ಯಂಡ್ ಟೀಮ್ ತರುತ್ತಿದ್ದ ನಕಲಿ ಚಿನ್ನಕ್ಕೆ 22 ಕ್ಯಾರೆಟ್ ಚಿನ್ನ ಅಂತಾ ಸುರೇಶ್ ಸರ್ಟಿಫಿಕೇಟ್ ಕೊಡ್ತಿದರಂತೆ. ಪ್ರಮಾಣ ಪತ್ರ ಪಡೆದು ಎರಡು ತಿಂಗಳ ಅಂತರದಲ್ಲಿ ಬೇರೆ ಬೇರೆ ಹೆಸರಲ್ಲಿ ನಕಲಿ ಚಿನ್ನವನ್ನ ಅಡ ಇರಿಸಲಾಗಿತ್ತು. ಚಿನ್ನ ಅಡಮಾನವಿಟ್ಟು ಬರೋಬ್ಬರಿ ಕೋಟ್ಯಾಂತರ ರೂಪಾಯಿಯನ್ನು ಸಾಲದ ರೂಪದಲ್ಲಿ ಪಡೆಯಲಾಗಿತ್ತು.
ಶುಕ್ರವಾರ ನಗರದ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗದಗ ಬೆಟಗೇರಿ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ್ ಬಾಕಳೆ ಮಗ ದತ್ತಾತ್ರೇಯ ಬಾಕಳೆ, ಇದೇ ವರ್ಷದ ಏಪ್ರಿಲ್ ತಿಂಗಳಿಂದ ಜೂನ್ ವರೆಗೆ ದತ್ತಾತ್ರೇಯ ಸಹಚರರ ಹೆಸರಲ್ಲಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನದ ಆಭರಣ ಅಡವಿಟ್ಟಿದ್ದ ಹಾಗೂ ಪಟ್ಟಣದ ಸ್ಟೇಷನ್ ರೋಡ ವಿಮಲೇಶ ಜ್ಯುವೆಲರ್ ಇವರೆಲ್ಲರೂ ಸೇರಿಸಿಕೊಂಡು ತಮ್ಮ ಬಳಿ ಇರುವ ಆಭರಣಗಳ ಮೇಲೆ ಸ್ವಲ್ಪ ಪ್ರಮಾಣದ ಬಂಗಾರದ ಲೇಪನ ಇದ್ದು, ಒಳಗಡೆ ಬೇರೆ ಲೋಹ ಇದೆ ಅಂತಾ ಗೊತ್ತಿದ್ದೂ, ಇವು ಸಂಪೂರ್ಣ ಬಂಗಾರದ ಆಭರಣಗಳು ಅಂತಾ ಸುಳ್ಳು ಹೇಳಿ ಅವುಗಳನ್ನು ಅಡವಿಟ್ಟು ಸಾಲ ಪಡೆಯುವ ಬಗ್ಗೆ ಒಳಸಂಚು ಮಾಡಿ ಹೀಗೆ ಮತ್ತೋಂದೆಡೆ ಗದಗ ಶಹರದ ಭೂಮರಡ್ಡಿ ಸರ್ಕಲ ಹತ್ತಿರವಿರುವ ಯೂನಿಯನ್ ಬ್ಯಾಂಕದಲ್ಲಿ ಮತೊಂದು ನಕಲಿ ಚಿನ್ನದ ಗ್ಯಾಂಗ್ ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 57 ಲಕ್ಷ ರೂಪಾಯಿ ಚಿನ್ನದ ಮೇಲೆ ಸಾಲ ಪಡೆದು ಬ್ಯಾಂಕಿಗೆ ಮೋಸ ಮಾಡಿದ್ದಾರೆ ಎಂದು ತಿಳಿಸಿದರು.

ಬ್ಯಾಂಕ್ ಅಧಿಕಾರಿಗಳೂ ಶಾಮೀಲು ಶಂಕೆವಿದ್ದು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಕಲಿ ಚಿನ್ನವಿಟ್ಟು ಕೋಟ್ಯಾಂತರ ಹಣ ಸಾಲ ನೀಡುವಾಗ ಮೇಲಾಧಿಕಾರಿಗಳು ಖುದ್ದು ಪರಿಶೀಲನೆ ಮಾಡಬೇಕಂತೆ. ಆದ್ರೆ, ಪರಿಶೀಲನೆ ಮಾಡಿದ್ದಾರೋ ಇಲ್ವೋ ಅನ್ನೋ ಬಗ್ಗೆ ತನಿಖೆ ವೇಳೆ ಗೊತ್ತಾಗಲಿದೆ ಅಂತ ಗದಗ ಎಸ್ಪಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.
ಪ್ರಕರಣ ಸಂಬಂಧ ಬೆಟಗೇರಿ ಬಡಾವಣೆಯಲ್ಲಿ ಕೇಸ್ ದಾಖಲಾಗಿದ್ದು, ವಂಚನೆ ಸಹಕಾರ ನೀಡಿದ್ದ ಬ್ಯಾಂಕ್ ನ ಚಿನ್ನ ಚೆಕ್ ಮಾಡುತ್ತಿದ್ದ ಸುರೇಶ್ ರೇವಣಕರ, ದತ್ತಾತ್ರೇಯ ಬಾಕಳೆ, ಅರಣ್ ಕುಮಾರ್, ಆದಿಲ್ ನಿಶಾನಿ, ರವಿ ಹತ್ತರಕಲ್, ಗಣೇಶ ಮಾದರ, ಮಾಣಿಕ್ ಲಕ್ಕುಂಡಿ, ದಾನೇಶ್ ಉಮಾದಿ, ರಾಕೇಶ್ ನವಲಗುಂದ, ಮಂಜುನಾಥ ಹೊಸಮನಿ, ಸುಚೀತಕುಮಾರ ಹರಿವಾಣ, ದುಂಡಪ್ಪ ಕೊಟ್ಟೂರುಶೆಟ್ಟರ್, ಸಿದ್ಧಾರ್ಥ್ ಭರಡಿ, ನಾಗರಾಜ ರಾಮಗಿರಿ, ಅರುಣಕುಮಾರ ಹೂಗಾರ, ಸಚಿನ್ ಹರಿವಾಣ, ಸಂತೋಷ ವೀರಶೆಟ್ಟಿ ಅವರ ವಿರುದ್ಧ ದೂರು ದಾಖಲು ಮತ್ತು ಯೂನಿಯನ್ ಬ್ಯಾಂಕ್ ವಂಚನೆ ಪ್ರಕರಣ ಪ್ರಕರಣ ಸಂಬಂಧ ಬೆಟಗೇರಿ ಬಡಾವಣೆಯಲ್ಲಿ ಕೇಸ್ ದಾಖಲಾಗಿದ್ದು, ವಂಚನೆಗೆ ಸಹಕಾರ ನೀಡಿದ್ದ ಬ್ಯಾಂಕ್‌ನ ಚಿನ್ನ ಚೆಕ್ ಮಾಡುತ್ತಿದ್ದ ಮಾಣಿ ಲಕ್ಕುಂಡಿ, ನಾಗರಾಜ ರಾಮಗಿರಿ, ರಾಘವೇಂದ್ರ ವಾಯ್ ನೀರಲಕೇರಿ, ಸುಚೇತಕುಮಾರ ಹರಿವಾನ, ನಿಹಾಲ್ ಕಬಾಡಿ, ಗಣೇಶ ಪಿ. ಮಾದರ, ಹಮೀದಾಬೇಗಂ ಎ ಬಡೇಖಾನ, ಸಂತೋಷ ವೀರಶಬ್ದ, ಗಣೇಶ ಕಾಶಪ್ಪ ಹೊಂಬಳ, ಮಂಜುನಾಥ ಯಲ್ಲಪ್ಪ ಮಣ್ಣವಡ್ಡರ, ಸುರೇಶ ಗೋಪಾಲ ರೇವಣಕರ ಅವರ ವಿರುದ್ಧ ದೂರು ದಾಖಲಾಗಿದೆ.
ನಕಲಿ ಚಿನ್ನಾಭರಣ ಎಲ್ಲಿಂದ ಖರೀದಿ ಮಾಡಿದರು. ಆರೋಪಿಗಳಿಂದ ಎಷ್ಟು ಹಣ ಸೀಜ್ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಮುಂದಿನ ತನಿಖೆಯ ನಂತರ ತಿಳಿದು ಬರಲಿದೆ. ಈ ಪ್ರಕರಣವನ್ನ ಗಂಭೀರವಾಗಿ ಆರೋಪಿತರ ಪತ್ತೆ ಕುರಿತು ಡಿಎಸ್‌ಪಿ ಗದಗ ಉಪ-ವಿಭಾಗ, ಗದಗ ರವರ ಮಾರ್ಗದರ್ಶನದಲ್ಲಿ. ಸಿಪಿಐ ಬೆಟಗೇರಿ ವೃತ್ತ ರವರ ನೇತೃತ್ವಲ್ಲಿ ಪಿಎಸ್‌ಐ ಬೆಟಗೇರಿ ಬಡಾವಣೆ ಹಾಗೂ 6 ಜನ ಸಿಬ್ಬಂದಿ ಜನರು ಸೇರಿದಂತೆ ಒಂದು ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.