ಗದಗ. ನಗರದ ಬಣ್ಣದ ಮನೆ ಆರ್ಟ್ ಅಡ್ಡಾದ ಸಾಂಸ್ಕೃತಿಕ ಭವನದಲ್ಲಿ ಇಂದು ಸಂಜೆ 7-00ಘಂಟೆಗೆ ಗೀಯ ಗಾ.. ಗಾಗೀಯ ಗಾ… “ಜಾನಪದ ಗಾನ ಭಜಾನಾ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಖ್ಯಾತ ಜನಪದ ಕಲಾವಿದ ವೀರಣ್ಣ ಚನ್ನಪ್ಪ ಅಂಗಡಿ ಸಾಕೀನ ಅಡವಿಸೋಮಾಪುರ ಹಾಗೂ ಸಂಗಡಿಗರಿಂದ ಪ್ರಸ್ತುತಿಗೊಳ್ಳಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತ್ಯ ಚಿಂತಕರಾದ ಡಾ.ಜಿ.ಬಿ.ಪಾಟೀಲ ವಹಿಸಿಕೊಳ್ಳಲಿದ್ದಾರೆ, ಮುಖ್ಯ ಅತಿಥಿಗಳಾಗಿ ಸುರೇಶ್ ಕೊಪ್ಪದ ನಿರ್ದೇಶಕರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ಡಾ. ಶಾಂತಕುಮಾರ ಬಿ. ಭಜಂತ್ರಿ ಜಿಲ್ಲಾಧ್ಯಕ್ಷರು, ಕನ್ನಡ ಜಾನಪದ ಪರಿಷತ್, ಗದಗ ಭಾಗವಹಿಸುವರು, ಬಸವರಾಜ ಈರಣ್ಣವರ, ವಿಶ್ವನಾಥ್ ಬೇಂದ್ರೆ, ಡಿ. ಎಚ್. ಮಲ್ಲೇಶ, ವಿಶಾಲ ಹಂಜಗಿ,ಕು. ನಂದಾ ಬೆಂತೂರ, ವಿಜಯ ದೊಡ್ಡಮನಿ ಮುಂತಾದವರು ಉಪಸ್ಥಿತರಿರುವರು.ಎಂದು ಬಣ್ಣದ ಮನೆ ಆರ್ಟ್ ಅಡ್ಡಾದ ಸಂಸ್ಥಾಪಕ ವಿಜಯ ಕಿರೇಸೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
