ಉತ್ತರಪ್ರಭ

ಲಕ್ಷ್ಮೇಶ್ವರ: ಧಾರವಾಡ ವಿಧಾನ ಪರಿಷತ್ ಚುಣಾವಣೆಯ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಅವರು ಪ್ರಥಮ ಪ್ರಾಶಸ್ತ್ಯ ಮತಗಳಿಂದ ಜಯಗಳಿಸಿದ ಹಿನ್ನೆಲೆ ಲಕ್ಷ್ಮೇಶ್ವರ ತಾಲೂಕ ಬ್ಲಾಕ್ ಕಾಂಗ್ರೇಸ್ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಯುವ ಕಾಂಗ್ರೇಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಮಾಡಲಾಯಿತು.

ಉದ್ದೇಶಿಸಿ ಮಾತನಾಡಿದ ಪುರಸಭೆ ಮಾಜಿ ಅದ್ಯೆಕ್ಷೆ ಹಾಗೂ ಹಾಲಿ ಸದಸ್ಯೆ ಜಯಕ್ಕ ಕಳ್ಳಿ ಹಾಗೂ ಕಾಂಗ್ರೇಸ್ ನಗರ ಘಟಕದ ಅದ್ಯಕ್ಷ ಅಮರೀಶ್ ತೆಂಬದಮನಿ ಮಾತನಾಡಿ ಸಲೀಂ ಅಹ್ಮದ್ ಅವರ ಗೆಲವು ಧಾರವಾಡ ವಿಧಾನ ಪರಿಷತ್ ಕ್ಷೇತ್ರದ ಜನರಿಗೆ ಹರ್ಷವನ್ನುಂಟು ಮಾಡಿದೆ. ಈ ಗೆಲುವಿನಿಂದ ನಾವೆಲ್ಲ ಕಾರ್ಯಕರ್ತರಿಗೆ ಹಿಗ್ಗುವಂತೆ ಮಾಡಿದೆ ಮುಂದಿನ ವಿಧಾನ ಸಭಾ ಚುನಾವಣೆ, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೇಸ್ ಗೆ ಅತಿಹೆಚ್ಚು ಸ್ಥಾನಗಳು ಬರುವುದು ಖಚಿತ. ಅದಕ್ಕೆಲ್ಲ ನಾವೇಲ್ಲರೂ ಶ್ರಮಿಸುತ್ತೆವೆ. ಜನರ ನಡುವಲ್ಲಿ ನಮ್ಮ ಕಾಂಗ್ರೇಸ್ ಪಕ್ಷ ಇದ್ದು ರೈತರ, ಬಡವರ ಪರವಾಗಿ ಕೆಲಸ ಮಾಡುತ್ತ ಬಂದಿದ್ದೆವೆ ಆದ್ದರಿಂದ ಮುಂದಿನ ಎಲ್ಲಾ ಚುನಾವಣೆಯಲ್ಲಿ ನಮ್ಮ ಪಕ್ಷ ಗೆದ್ದು ಕಾಂಗ್ರೇಶ ಪಕ್ಷ ಆಡಳಿತಕ್ಕೆ ಬರುವುದು ಖಚಿತ ಎಂದರು

ಕಾಂಗ್ರೇಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ನಂತರ ಕಾಂಗ್ರೇಸ್ ಕಾರ್ಯಕರ್ತರು ಸಿಹಿಹಂಚಿ, ಪಟಾಕಿ ಸಿಡಿಸಿ ಕಾಂಗ್ರೇಸ್ ಪರ , ಸಲೀಂ ಅಹ್ಮದ್ ಪರವಾದ ಘೋಷಣೆ ಕೂಗಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಅಮರೀಶ್ ತೆಂಬದಮನಿ, ತಾಲೂಕ ಯುವ ಘಟಕ ಅಧ್ಯಕ್ಷ ಸರ್ಫರಾಜ ಸೂ ರಣಗಿ ಪುರಸಭೆ ಉಪಾಧ್ಯಕ್ಷ ರಾಮಣ್ಣ ಗಡದವರ, ಸದಸ್ಯ ಸಾಹೇಬ್ ಜಾನ ಹವಾಲ್ದಾರ್. ನಾಗರಾಜ್ ದೊಡ್ಡಮನಿ, ಅಣ್ಣಪ್ಪ ರಾಮಗೇರಿ, ಬಸವರಾಜ್ ಹಿರೇಮನಿ, ಬಸವರಾಜ ಹೊಳಲಾಪುರ,ನೀಲಪ್ಪ ಪಡಗೇರಿ,ವೀರೇಂದ್ರ ಭಜಂತ್ರಿ, ಗಣೇಶ ನಾಯಕ, ಸೋಮಪ್ಪ ಲಮಾಣಿ, ಮಾನಪ್ಪ ಲಮಾಣಿ, ಮುತ್ತಣ್ಣ ಗಡೆಪ್ಪನವರ,ಹನುಮಂತ ಶೇರಸೂರಿ,ಶಫಿಕ್ ಬಿಜಾಪುರ್, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You May Also Like

ಹೊಸ ವರ್ಷಾಚರಣೆ: ಕೊವಿಡ್ ಮಾರ್ಗಸೂಚಿಯನ್ನು ಹೊರಡಿಸಿದ ರಾಜ್ಯ ಸರ್ಕಾರ

ಉತ್ತರಪ್ರಭ ಸುದ್ದಿ ಬೆಳಗಾವಿ:  ದಿನದಿಂದ ದಿನಕ್ಕೆ ಕೊವಿಡ್ ಒಮಿಕ್ರಾನ್  ಹಾವಳಿ ಹೆಚ್ಚಾಗುತ್ತಿರುವ ಹಿನ್ನಲೆ, ಹೊಸ ವರ್ಷಾಚರಣೆಯಲ್ಲಿ…

ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿನಿಯರಿಗೆ ಟ್ಯಾಬ್ ವಿತರಣೆ

ಜೀವನದಲ್ಲಿ ಒಂದಿಲ್ಲ ಒಂದು ಸಂಕಷ್ಟಗಳು ಇರುತ್ತವೆ. ಸಂಕಷ್ಟ ಎದುರಿಸುವ ಮನೋಬಲ ಬಲಿಷ್ಠವಿದ್ದರೆ ಎಂತಹ ಸಮಸ್ಯೆಯೂ ದೂರ ಮಾಡಬಹುದು ಈ ನಿಟ್ಟಿನಲ್ಲಿ ಸಾಧಕರ ಯಶೋಗಾಥೆಗಳನ್ನು ಅವಲೋಕಿಸಿಕೊಂಡು ಮುನ್ನಡೆಯಿರಿ ಎಂದು ರೋಟರಿ ಕ್ಲಬ್ ಅಧ್ಯಕ್ಷ ಸುರೇಂದ್ರಸಾ ರಾಯಬಾಗಿ ಹೇಳಿದರು.

ರಾಜ್ಯದಲ್ಲಿ ಇಂದು 8 ಸಾವಿರದ ಗಡಿ ದಾಟಿದ ಮಹಾಮಾರಿ!

ಬೆಂಗಳೂರು : ರಾಜ್ಯದಲ್ಲಿ ಇಂದು 8,477 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 7,43,848ಕ್ಕೆ ಏರಿಕೆ ಕಂಡಿದೆ.

ಇಂದು ಕೂಡ ಶತಕ ಬಾರಿಸಿದ ಸೋಂಕಿತರ ಸಂಖ್ಯೆ!: ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತರು..?

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೊನಾ ಸೋಂಕಿತರ ಸಂಖ್ಯೆ ಶತಕ ಬಾರಿಸಿದೆ. ಇಂದು ಬರೋಬ್ಬರಿ 122…