ಉತ್ತರಪ್ರಭ

ವರದಿ:ವಿಠ್ಠಲ ಕೆಳೊತ

ಮಸ್ಕಿ: ರಾಯಚೂರು ಕೊಪ್ಪಳ ವಿಧಾನ ಪರಿಷತ್ ಚುನಾವಣೆಯಲ್ಲಿ ಶರಣೇಗೌಡ ಪಾಟೀಲ್ ಬಯ್ಯಾಪೂರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಪಟಾಕಿ ಸಿಡಿಸಿ ಕಾಂಗ್ರೆಸ್ ಪಕ್ಷಕ್ಕೆ, ಗೆಲುವು ಸಾಧಿಸಿದ ಬಯ್ಯಾಪುರ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು.
ಈ ವೇಳೆ ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ ಅವರು ಮಾತನಾಡಿ, ರಾಯಚೂರು ಕೊಪ್ಪಳದಲ್ಲಿ ಕಾಂಗ್ರೆಸ್ ಮುಖಂಡರು ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ‌. ಇಲ್ಲಿನ ಕಾಂಗ್ರೆಸ್ ಕೋಟೆಗೆ ಕೆಡವಲು ವಿರೋಧಿ ಪಕ್ಷ ಎಷ್ಟೇ ಪ್ರಯತ್ನ ಮಾಡಿದರು. ಸಫಲ ಆಗಲ ಕೊನೆಗೆ ಕಾಂಗ್ರೆಸ್ ಪಕ್ಷವೇ ಜಯ ಸಾಧಿಸುತ್ತದೆ ಎಂದರು.


ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ಸಿದ್ದಣ್ಣ ಹೂವಿನಭಾವಿ, ಎಚ್.ಬಿ.ಮುರಾರಿ, ಮೈಬುಸಾಬ ಮುದ್ದಾಪೂರು, ವೆಂಕಟರೆಡ್ಡಿ ಹಾಲಾಪುರ, ಬಸನಗೌಡ ಮುದವಾಳ, ಕೃಷ್ಣಾ ಚಿಗರಿ‌, ಆನಂದ ವಿರಾಪೂರ, ಪಂಪನಗೌಡ ಗುಡದೂರು, ಚಾಂದಶೇಡ್ಮಿ, ಮಲ್ಲಯ್ಯ ಬಳ್ಳಾ, ನಾಗರಬೆಂಚಿ ಮಲ್ಲಪ್ಪ, ಸುರೇಶ್ ಬ್ಯಾಳಿ, ಬಸನಗೌಡ ಮಾರಲದಿನ್ನಿ, ಮಲ್ಲನಗೌಡ್ರು ಗೋನಾಳ, ಶರಣಪ್ಪ ಎಲಿಗಾರ, ಆಲಂಪಾಷ, ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You May Also Like

ಪ್ಲೀಸ್…..ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ!

ಬೆಂಗಳೂರು : ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ. ಈ ಸಂದರ್ಭದಲ್ಲಿ ಮಾಡಿದರೆ ಸಮಾಜಕ್ಕೆ ಬೇರೆ ಸಂದೇಶ ರವಾಣೆ ಮಾಡಿದಂತಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರ ಬೇಸರ ವ್ಯಕ್ತಪಡಿಸಿದ್ದಾರೆ.

ಜ್ಞಾನಗಿರಿಯಲ್ಲಿ ಡಿ.5 ರಂದು ದಿವ್ಯ ದೀಫೋತ್ಸವ

ಸಮೀಪದ ನೀಲಗುಂದ ಗ್ರಾಮದ ಜ್ಞಾನಗಿರಿ ಗುದ್ನೇಶ್ವರ ಮಠದ ದಿವ್ಯ ಚೇತನ ಶಾಲಾ ಆವರಣದಲ್ಲಿ ಡಿ.5 ಶನಿವಾರ ಸಂಜೆ 2 ನೇ ವರ್ಷದ ದಿವ್ಯ ದೀಪೋತ್ಸವ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.

ಸಾರಿಗೆ ಸಂಸ್ಥೆಯ ಬಸ್ ಪಲ್ಟಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಉತ್ತರಪ್ರಭ ಸುದ್ದಿಲಕ್ಷ್ಮೇಶ್ವರ: ಸಾರಿಗೆ ಸಂಸ್ಥೆಯ ಬಸವೊಂದರ ವೀಲ್ ಜೇಂಟ್ ಕಟ್ ಆಗಿರುವ ಪರಿಣಾಮ, ಬಸ್ ಪಲ್ಟಿಯಾಗಿ…

ನರೆಗಲ್ಲ: ಅತೀಯಾದ ಮಳೆಯಿಂದ ಕೊಳೆಯುತ್ತಿದೆ ಈರುಳ್ಳಿ

ಹೋಬಳಿಯ ಎಲ್ಲೇಡೆ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಕೃಷಿ ಚಟುವಟಿಕೆಗೆ ತಿವ್ರ ಹಿನ್ನೆಡೆಯಾಗಿದೆ.