ಬೆಂಗಳೂರು : ಈ ಸಂದರ್ಭದಲ್ಲಿ ಖಾತೆ ಬದಲಾವಣೆ ಮಾಡಬೇಡಿ. ಈ ಸಂದರ್ಭದಲ್ಲಿ ಮಾಡಿದರೆ ಸಮಾಜಕ್ಕೆ ಬೇರೆ ಸಂದೇಶ ರವಾಣೆ ಮಾಡಿದಂತಗುತ್ತದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರ ಬೇಸರ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಖಾತೆ ಬದಲಾವಣೆ ಕುರಿತು ಶ್ರೀರಾಮುಲು ಅವರು ನಿನ್ನೆ ರಾತ್ರಿಯೇ ಸಿಎಂ ಅವರಿಗೆ ಕರೆ ಮಾಡಿ ಚರ್ಚೆ ನಡೆಸಿದ್ದಾರೆ. ಆದರೆ, ಶ್ರೀರಾಮುಲು ಅವರಿಗೆ ಬೆಳಿಗ್ಗೆ ಬಂದು ಭೇಟಿ ಮಾಡುವಂತೆ ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಖಾತೆ ಬದಲವಾಣೆ ಮಾಡಿದರೆ, ಕೊರೊನಾ ನಿರ್ವಹಣೆ ವಿಷಯದಲ್ಲಿ ವಿಫರಾಗಿದ್ದಕ್ಕೆ ಖಾತೆ ಬದಲವಾಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತವೆ. ಹೀಗಾಗಿ ಖಾತೆ ಬದಲಾವಣೆ ಬೇಡ. ಸ್ವಲ್ಪ ಸಮಯ ನನಗೆ ಕೊಟ್ಟರೆ, ನಾನೇ ಈ ಖಾತೆ ಬಿಟ್ಟು ಬರುತ್ತೇನೆ ಎಂದು ಶ್ರೀರಾಮುಲು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಸಿಎಂ ಅವರನ್ನು ಭೇಟಿ ಮಾಡಲಿರುವ ಶ್ರೀರಾಮುಲು ಅವರು ಖಾತೆ ಬಿಟ್ಟು ಕೊಡುತ್ತಾರೆಯೇ? ಆ ಖಾತೆಯನ್ನು ಮತ್ತೆ ತಮ್ಮಲ್ಲಿಯೇ ಉಳಿಸಿಕೊಳ್ಳುತ್ತಾರೆಯೇ ಕಾಯ್ದು ನೋಡಬೇಕಿದೆ.

Leave a Reply

Your email address will not be published. Required fields are marked *

You May Also Like

ಗದಗನಲ್ಲಿ ಎಇಇ ಮನೆ ಮೇಲೆ ಎಸಿಬಿ ದಾಳಿ

ಗದಗ: ಇಲ್ಲಿನ ರಾಜೀವ್ ಗಾಂಧಿ ನಗರದಲ್ಲಿರುವ ಬಾಗಲಕೋಟೆ ಜಿಲ್ಲೆಯ ನೀರು‌ ಸರಬರಾಜು ಮಂಡಳಿಯ ಎಇಇ ಹನುಮಂತ…

ರಾಜ್ಯದಲ್ಲಿ ಅಬ್ಬರಿಸುತ್ತಿದೆ ಮಹಾಮಾರಿ – ಇಂದು ಮತ್ತೆ 10 ಸಾವಿರ ಗಡಿ ದಾಟಿದ ಸೋಂಕು!

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಇಂದು ಕೂಡ ರಾಜ್ಯದಲ್ಲಿ ದಾಖಲೆಯ ಸೋಂಕಿತರು ಪತ್ತೆಯಾಗಿದ್ದಾರೆ.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಿಗರಿಗೆ ವಿಶೇಷ ಗಿಫ್ಟ್ ನೀಡಿದ ಆರ್ ಸಿಬಿ ತಂಡ!

ದುಬೈ : ಕನ್ನಡದಲ್ಲಿಯೇ ಕನ್ನಡ ರಾಜ್ಯೋತ್ಸವದ ಕುರಿತು ಶುಭಾಶಯ ತಿಳಿಸುವುದರೊಂದಿಗೆ ಕನ್ನಡಿಗರಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ.

ರೋಣ ಎಪಿಎಮ್‌ಸಿ ಅಧ್ಯಕ್ಷರಾಗಿ ರಾಜಣ್ಣ,ಉಪಾಧ್ಯಕ್ಷರಾಗಿ ಶಿವಾನಂದ ಆಯ್ಕೆ

ಕೃಷಿ ಉತ್ಪನ್ನ ಮಾರುಕಟ್ಟೆ(ಕೇಂದ್ರ ಕಚೇರಿ ಹೊಳೆಆಲೂರ) ಸಮಿತಿಯ ಕೊನೆಯ ಅವಧಿಗೆ ನೂತನ ಅಧ್ಯಕ್ಷರಾಗಿ ರೋಣ ರೈತ ಕ್ಷೇತ್ರದ ಸದಸ್ಯ ಅಂದಾನಪ್ಪ ಉರ್ಫ ರಾಜಣ್ಣ ಹೂಲಿ,ಉಪಾಧ್ಯಕ್ಷರಾಗಿ ಹೊಳೆಆಲೂರ ಕ್ಷೇತ್ರದ ಸದಸ್ಯ ಶಿವಾನಂದ ಅರಹುಣಸಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.