ಉತ್ತರಪ್ರಭ ಸುದ್ದಿ

ಗದಗ: ಗದಗ ಬೆಟಗೇರಿ ನಗರಸಭೆ ಚುಣಾವಣೆ  ಹಿನ್ನಲೇ ಬಿಜೆಪಿಯ  ಅಭ್ಯರ್ಥಿಗಳ  ಪಟ್ಟಿಯನ್ನು ಎರಡು ದಿನಗಳ ಹಿಂದೆ ಪ್ರಕಟಿಸಿತ್ತು. ನಾಮ ಪತ್ರ ಸಲ್ಲಿಸಲು ದಿನಾಂಕ: 15.12.2021 ಕೊನೆಯ ದಿನ ವಾಗಿದ್ದು, ಈಗಾಗಲೇ ಕೆಲವು ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ,ಇನ್ನೂ ಹಲವು ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಲಿದ್ದಾರೆ. ಈ ಮಧ್ಯೆ ಕಾಂಗ್ರೇಸ್  35 ವಾರ್ಡಗಳ ಪೈಕಿ 26 ಅಭ್ಯರ್ಥಿಗಳ  ಪಟ್ಟಿಯನ್ನು ಬಿಡುಗಡೆಗೊಳಿಸಿ ಇನ್ನೂ 9 ವಾರ್ಡ ಅಭ್ಯರ್ಥಿಗಳ  ಪಟ್ಟಿಯನ್ನು ಕಾಂಗ್ರೇಸ್ ಘೋಷಿಸಿರುವುದಿಲ್ಲಾ,  ಈ ಮಧ್ಯೆ ಬಿಜೆಪಿಯ   ಮುಖಂಡ ಮತ್ತು ಗದಗ ವಿಧಾನಸಭಾ ಪರಾಜಿತ ಅಭ್ಯರ್ಥಿ ಅನೀಲ ಮೇಣಸಿನಕಾಯಿ 35ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾದ ಉಷಾ ಮಹೇಶ ದಾಸರ  ಪರವಾಗಿ  ಮನೆ ಮನೆಗೆ  ತೆರಳಿ ಮತಭೀಕ್ಷೆ ಕೇಳುತ್ತಿರುವುದು ವಿಶೇಷವಾಗಿದೆ. ಜೋಳಿಗೆ ಹಿಡಿದುಕೊಂಡು  ದಯವಿಟ್ಟು ಈ ಭಾರಿ ಬಿಜೆಪಿ ಅಭ್ಯರ್ಥಿಗೆ ಮತವನ್ನು ಹಾಕಿ ಅದರೊಂದಿಗೆ ಅವರಿಗೆ ಧನಸಹಾಹ ಮಾಡಿ ಬಹುಮತದಿಂದ ಗೆಲ್ಲಿಸಲು  ಮನವಿ ಮಾಡಿದರು .ಈ ಸಂದರ್ಭದಲ್ಲಿ ಬಿಜೆಪಿಯ ಪ್ರಮುಖರು ಹಾಜರಿದ್ದರು.

Leave a Reply

Your email address will not be published.

You May Also Like

ಶೋಷಿತ ಸಮುದಾಯಗಳು ಮೀಸಲಾತಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಿ

ರಾಜ್ಯದ ಹಲವು ಸಮುದಾಯಗಳು ಮೀಸಲಾತಿಗಾಗಿ ಹೋರಾಟದ ಹಾದಿ ಹಿಡಿದಿವೆ. ಇದಕ್ಕೆ ನಮ್ಮ ವಿರೋಧ ಖಂಡಿತಾ ಇಲ್ಲ. ಶೋಷಿತ ಸಮುದಾಯಗಳು ಮೀಸಲಾತಿ ಪಡೆಯುವುದು ಅವುಗಳ ಸಂವಿಧಾನಬದ್ಧ ಹಕ್ಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಗದಗ ಜಿಲ್ಲೆಯಾದ್ಯಂತ ನಿರಂತರ ಮಳೆ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಇಂದು ರಜೆ

ಉತ್ತರಪ್ರಭ ಗದಗ: ಗದಗ ಜಿಲ್ಲೆಯಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣದಿಂದ ಎಲ್ಲಾ ಅಂಗನವಾಡಿ, ಶಾಲೆಗಳಿಗೆ ಇಂದು…

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ಕಳಪೆ ಕಾಮಗಾರಿಗೆ ತಡೆ

ಉತ್ತರ ಪ್ರಭ ಸುದ್ದಿರೋಣ : ಪಟ್ಟಣದ ಸಿದ್ದಾರೊಡ ಮಠದ ಮುಂದಿನ ರಸ್ತೆ ದುರಸ್ಥಿಯನ್ನು ಅತ್ಯಂತ ಕಳಪೆ…

ವೈದ್ಯೋಪಚಾರದ ಗವಿಯಲ್ಲಿದ್ದೂ ಕವಿಯಾದ ಡಾ. ಸಂಕನಗೌಡರು

ಇತ್ತೀಚೆಗೇಕೋ ಡಾ. ವ್ಹಿ. ಕೆ. ಸಂಕನಗೌಡರನ್ನು ಕಾಡುತ್ತಿದ್ದಾಳಂತೆ ಕಾವ್ಯ ಕನ್ನಿಕೆ. ಅವರ ಮನದೊಳಗೆ ಹೊಕ್ಕವಳು ಹೊರಬಾರದೇ ಮನೆ ಮಾಡಿ ನಿಂದು ಜನರಿಗೇ ಬೆರಗು ಮೂಡಿಸಿದ್ದಾಳೆ.