ಉತ್ತರಪ್ರಭ ಸುದ್ದಿ
ರೋಣ: ಪಟ್ಟಣದಲ್ಲಿ ಬಿಸಿ ರಕ್ತದ ಯುವಕರ ಗುಂಪುಗಳ ಗಲಾಟೆ ಮಾಡಿಕೊಂಡು, ರೋಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ. ಈ ಗಲಾಟೆಯಲ್ಲಿ ಒಬ್ಬ ಯುವಕನಿಗೆ ಗಂಭೀರ ಗಾಯ ವಾಗಿದ್ದು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ರೋಣ ಪಟ್ಟಣದ ಶಿವಾನಂದ ಮಠದ ಹತ್ತಿರ ಬುಧವಾರ ಮದ್ಯಾಹ್ನ ಎರಡು ಯುವಕರ ಗುಂಪುಗಳ ಮದ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಪಟ್ಟಣದ ಸಂಜು ಎಂಬ ಯುವಕನಿಗೆ ಪಟ್ಟಣದ ಬಸವರಾಜ, ನಾಗರಾಜ, ರವಿ, ಅನೀಲ, ಸಂತೋಷ ಎಂಬ ಯುವಕರು ಹಲ್ಲೆ ಮಾಡಿದ್ದು ಹಲ್ಲೆಗೊಳಗಾದ ಯುವಕ ರೋಣ ಪೊಲೀಸ್ ಠಾಣೆಯಲ್ಲಿ ದೂರು ನಿಡಿದ್ದಾನೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You May Also Like

ಪಶುವೈದ್ಯಕೀಯ ಕಾಲೇಜಿಗೆ ನೀರು ಕೊಡಿ

ಪಶುವೈದ್ಯಕೀಯ ಕಾಲೇಜಿಗೆ ನೀರು ಒದಗಿಸಿ ಎಂದು ಒತ್ತಾಯಿಸಿ ಪಶುವೈದ್ಯಕೀಯ ವಿದ್ಯಾರ್ಥಿಗಳು ಕಾರ್ಯಪಾಲಕ ಅಭಿಯಂತರ ಸಹಾಯಕ ಕಾರ್ಯಪಾಲಕ ಅಭಿಯಂತರ ಹಾಗೂ ಲೋಕೋಪಯೋಗಿ ಇಲಾಖೆ ಉಪ ವಿಭಾಗದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಸ್ವರಾಜ್ಯಕ್ಕೆ ಮುಕ್ಕಾಲು ನೂರು: 75ನೆಯ ಸ್ವಾತಂತ್ರ‍್ಯ ಸಂಗ್ರಾಮದ ನಿಮಿತ್ಯ ‘ಕನ್ನಡ ತೇರು’ ಕಾರ್ಯಕ್ರಮ

ಉತ್ತರಪ್ರಭಗದಗ: ಯುವ ಬ್ರಿಗೆಡ್ ಕರ್ನಾಟಕ ಹಾಗೂ ಗದಗ ತಂಡದ ಸಹಯೋಗದೊಂದಿಗೆ 75ನೆಯ ಸ್ವಾತಂತ್ರ‍್ಯ ಸಂಗ್ರಾಮದ ನಿಮಿತ್ಯ…

ಅಬ್ಬಿಗೇರಿ: ಕಠಿಣ ಲಾಕ್ಡೌನ್ ಮನೆ ಮನೆಗೆ ಪಡಿತರ

ನರೇಗಲ್: ಕೊರೊನಾ ಎರಡನೇ ಅಲೆಯನ್ನು ತಡೆಗಟ್ಟಲು ಜಿಲ್ಲಾಡಳಿತ 5 ದಿನದವರೆಗೂ ಕಠಿಣ ಲಾಕ್ಡೌನ್ ವಿಧಿಸಿದ ಪರಿಣಾಮ, ಸಮೀಪದ ಅಬ್ಬಿಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಪಡಿತರನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಕೈಗೊಂಡರು. ಗ್ರಾಮದಲ್ಲಿನ ಸಂಘದ ಪಡಿತರ ಚೀಟಿ ಇರುವ ಮನೆಮನೆಗೆ ತೆರಳಿ ಗ್ರಾಹಕರ ಪಡಿತರವನ್ನು ಸ್ಥಳದಲ್ಲಿಯೇ ತೂಕ ಮಾಡಿ ಹಂಚಿಕೆ ಮಾಡಲಾಗುತ್ತಿದೆ,ಕಠಿಣ ಲಾಕ್ಡೌನ್ ನಿಂದ ಜನರು ಹೊರಗಡೆ ಬರಲು ಆಗದ ಕಾರಣ ಗ್ರಾಮ ಪಂಚಾಯತಿ ಯವರು ಪಡಿತರವನ್ನು ಮನೆ ಮನೆಗೆ ಹಂಚುತ್ತಿರುವುದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಜ್ಞಾನಗಿರಿಯಲ್ಲಿ ಡಿ.5 ರಂದು ದಿವ್ಯ ದೀಫೋತ್ಸವ

ಸಮೀಪದ ನೀಲಗುಂದ ಗ್ರಾಮದ ಜ್ಞಾನಗಿರಿ ಗುದ್ನೇಶ್ವರ ಮಠದ ದಿವ್ಯ ಚೇತನ ಶಾಲಾ ಆವರಣದಲ್ಲಿ ಡಿ.5 ಶನಿವಾರ ಸಂಜೆ 2 ನೇ ವರ್ಷದ ದಿವ್ಯ ದೀಪೋತ್ಸವ ಕಾರ್ಯಕ್ರಮವನ್ನ ಆಯೋಜಿಸಲಾಗಿದೆ.