ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಷನ್) ಕರ್ನಾಟಕ ಚಾಪ್ಟರ್ ಮಾಜಿ ಅಧ್ಯಕ್ಷ ಡಾ. ರವೀಂದ್ರ ಅವರು ಶುಕ್ರವಾರ ಈ ವಿಡಿಯೋ ಬಿಡುಗಡೆ ಮಾಡಿದ್ದು, ಕಳೆದ ಸೋಮವಾರ ಪರೀಕ್ಷೆಗೆಂದು ಗಂಟಲು ದ್ರವ ಕಳಿಸಿದ್ದರು. ನಾಲ್ಕು ದಿನದ ನಂತರವೂ ಫಲಿತಾಂಶ ಬಾರದ್ದರ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅವರು, ವೈದ್ಯಲೋಕದ ನಿಕಟ ಸಂಪರ್ಕವಿರುವ ನಾನೇ ಹಲವು ಸಲ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದರೂ ಫಲಿತಾಂಶ ಲಭ್ಯವಾಗಲಿಲ್ಲ. ಇನ್ನು ಜನಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದ್ದಾರೆ.

ಆದಷ್ಟು ಬೇಗ ಟೆಸ್ಟ ಫಲಿತಾಂಶ ನೀಡದೇ ಇದ್ದರೆ, ಆ ವ್ಯಕ್ತಿ ಆ ಅವಧಿಯಲ್ಲಿ ನೂರಾರು ಜನರನ್ನು ಸಂಪರ್ಕಿಸಿದ ಅಂತ ಇಟ್ಟುಕೊಳ್ಳಿ. ನಂತರ ಆತನ ವರದಿ ಪಾಸಿಟಿವ್ ಬಂದರೆ ಏನು ಗತಿ ಎಂದು ಸರ್ಕಾರಕ್ಕೆ ಪ್ರಶ್ನಿಸಿರುವ ಡಾ. ರವೀಂದ್ರ, ಸರ್ಕಾರ ಕೂಡಲೇ ತುರ್ತಾಗಿ ಫಲಿತಾಂಶ ನೀಡುವ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.

ಖಾಸಗಿ ಆಸ್ಪತ್ರೆ, ಲ್ಯಾಬ್ಗಳಿಗೆ ಟೆಸ್ಟ ಮಾಡಲು ಅವಕಾಶ ನೀಡಬೇಕು, ಆದರೆ ಸರ್ಕಾರವೇ ಜನರ ಟೆಸ್ಟಿಂಗ್ ಫೀಸ್ ತುಂಬಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕೋವಿಡ್ ಕರ್ತವ್ಯ ನಿರತ ವೈದ್ಯರೊಬ್ಬರು ಮೃತಪಟ್ಟಾಗ ಅವರ ಕುಟುಂಬಕ್ಕೆ  ಪರಿಹಾರ ಕೊಡಲು ಸಾಧ್ಯವಿಲ್ಲ ಎಂದ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಪಂಕಜಕುಮಾರ್ ಪಾಂಡೆಯವರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ ರವೀಂದ್ರ.

ಪಿಪಿಇ ಕಿಟ್ ಖರೀದಿಯಲ್ಲೂ ಹಣ ಮಾಡುವ ರಾಜಕಾರಣಿಗಳು, ಅಧಿಕಾರಿಗಳು ಮನುಷ್ಯರೇ ಅಲ್ಲ, ಕಚಡಾ ತಿಂದು ಬದುಕುವವರು ಎಂದು ಹರಿ ಹಾಯ್ದಿದ್ದಾರೆ.

ಶಿಕ್ಷಣ, ಆರೋಗ್ಯದ ಮೇಲೆ ಕಡಿಮೆ ತೆರಿಗೆ ವಿಧಿಸುವ ಬದಲು ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಕೇಂದ್ರ ಸರ್ಕಾರವನ್ನೂ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ವಿಡಿಯೋ ನೋಡಿ, ಕೇಳಿ.

ಕೊರೊನಾ ಟೆಸ್ಟ್ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆದ ಡಾ.ರವೀಂದ್ರ ಅವರ ವಿಡಿಯೋ
Leave a Reply

Your email address will not be published. Required fields are marked *

You May Also Like

ಹ್ಯಾಂಡ್ ಸಾನಿಟೈಸರ್ ಸ್ಪೋಟವಾಗುವುದು ನಿಜನಾ..?

ಆಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಸ್ವಯಂಪ್ರೇರಿತ ದಹನಕ್ಕೆ ಸಮರ್ಥವಾಗಿರುವುದಿಲ್ಲ ಎಂದು ತಿಳಿದುಬಂದಿದೆ.

ಧನ ಸಹಾಯಕ್ಕಾಗಿ ಅರ್ಜಿ ಆಹ್ವಾನ

ಗದಗ: ಕೋವಿಡ್-19ರ 2ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತಿತರೆ ಚಟುವಟಿಕೆಗಳಿಗೆ ನಿರ್ಬಂಧಗಳನ್ನು ವಿಧಿಸಿರುವುದರಿಂದ ಆಟೋ ರಿಕ್ಷಾ, ಟ್ಯಾಕ್ಸಿ ಮತ್ತು ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಷರತ್ತಿಗೊಳಪಟ್ಟು 3000 ರೂ.ಗಳ ಪರಿಹಾರ ಧನವನ್ನು ನೀಡಲು ಸರ್ಕಾರ ಆದೇಶಿಸಲಾಗಿದೆ.

ಕೊರೋನಾ ಕಾವ್ಯ-1

ಕೊರೋನಾ ಕಾವ್ಯ ಸರಣಿಗೆ ಕವನ ಬರೆದವರು ಮುತ್ತು.ಹೆಚ್.ಬಿ(ಶಿಕ್ಷಕರು), ಪ್ರಸ್ತುತ ಕೊಪ್ಪಳ ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮುತ್ತು, ಭವಿಷ್ಯದ ಭರವಸೆಯ ಶಿಕ್ಷಕ ಮತ್ತು ಬರಹಗಾರ. ಅವರಲ್ಲಿನ ಜನಪರ ಮತ್ತು ಜೀವಪರ ಕಾಳಜಿಯೇ ಈ ಕಾವ್ಯದಲ್ಲಿ ಅಕ್ಷರ ರೂಪದಲ್ಲಿ ಹೊರಹೊಮ್ಮಿದೆ.

ಸೂರಿಲ್ಲದೆ ಬೀದಿಗೆ ಬಂದ ಬದುಕು : ಪರಿಹಾರದ ನೀರಿಕ್ಷೆಯಲ್ಲಿ ಬಡ ಕುಟುಂಬ

ಉತ್ತರಪ್ರಭ ಸುದ್ದಿ ಲಕ್ಷ್ಮೇಶ್ವರ: ಪಟ್ಟಣದ ಬಸ್ತಿಕೆರೆಯ ಓಣಿಯ ನಿವಾಸಿ ಬಸವರಾಜ ನಿಂಗಪ್ಪ ಮಡಿವಾಳರ ಎಂಬ ವ್ಯಕ್ತಿಗೆ…