ಒತ್ತಡ ನಿವಾರಣೆಗೆ ಸಂಗೀತ

ಮಾನವ ಸಂಘ ಜೀವಿ ಸಮಾಜದಲ್ಲಿದ್ದುಕೊಂಡು ಹೊಂದಿಕೊAಡು ಜೀವನ ಸಾಗಿಸುತ್ತಿದ್ದಾನೆ. ಈ ಜೀವನ ಸಾಗಿಸುವುದಕ್ಕಾಗಿ ದಿನಂಪ್ರತಿ ದೇಹ ಮತ್ತು ಬುದ್ಧಿಯನ್ನು ದಂಡಿಸಿ ದುಡಿಯುತ್ತಲೇ ಇದ್ದಾನೆ. ಈ ದಣಿದ ದೇಹ ಮತ್ತು ಬುದ್ಧಿಗೆ ವಿಶ್ರಾಂತಿ ನೀಡಲು ಅವನು ಮೊರೆ ಹೋಗುವುದು ಮನರಂಜನೆಯನ್ನು. ಈ ಮನರಂಜನೆಗಳಲ್ಲಿ ಸಂಗೀತವು ಒಂದು. ಸಂಗೀತವು ಪ್ರತಿ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವೆAದರೆ ತಪ್ಪಾಗಲಾರದು. ಜನನದಿಂದ ಮರಣದವರೆಗು ಸಂಗೀತ ಮಾನವನೊಂದಿಗೆ ಅವಿನಾಭಾವ ಸಂಬAಧ ಹೊಂದಿದೆ. ಮಗು ಗರ್ಭದಲ್ಲಿರುವಾಗಲೇ ಅದು ಸಂಗೀತದೊAದಿಗೆ ಸಂಬAಧ ಹೊಂದುತ್ತದೆ. ಮುಂದೆ ಅದು ಮಣ್ಣಲ್ಲಿ ಮಣ್ಣಾಗುವವರೆಗು ಸಾಗುತ್ತದೆ.