ಗದಗ: ಗದಗ ಬೆಟಗೇರಿ ನಗರದ ವಿವಿಧ ವಾರ್ಡುಗಳಲ್ಲಿರುವ ಮಳೆಗಾಲದಲ್ಲಿ ಮಳೆ ನೀರಿನಿಂದ ತುಂಬಿ ಹರಿಯುವ ನಾಲಾ ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಮುಂಜಾಗೃತಾ ಕ್ರಮವಾಗಿ ಆಡಳಿತಾಧಿಕಾರಿಗಳ ನಿರ್ದೇಶನದಂತೆ ಜೂನ್ 3 ರಂದು ಪರಿಸರ ಅಭಿಯಂತರರು, ಹಿರಿಯ ಆರೋಗ್ಯ ನಿರೀಕ್ಷಕರು, ಆಯಾ ವಾರ್ಡುಗಳ ಸೂಪರ್‌ವೈಸರ್‌ಗಳ ಸಭೆ ಕರೆದು ಸಭೆಯಲ್ಲಿ ನಗರದ ಮುಖ್ಯ ನಾಲಾಗಳು ದೊಡ್ಡ ಚರಂಡಿಗಳು ಮತ್ತು ಮುಖ್ಯ ರಸ್ತೆಯ ಚರಂಡಿಗಳು ಹಾಗೂ ವಿವಿಧ ವಾರ್ಡಗಳಲ್ಲಿ ಮಳೆಯಿಂದ ತುಂಬಿ ಹರಿಯುವ ಚರಂಡಿಗಳನ್ನು ಸ್ವಚ್ಛತೆ ಮಾಡಿಸುವ ಕುರಿತು ಚರ್ಚಿಸಲಾಯಿತು.
ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಸಂಪೂರ್ಣವಾಗಿ ಹೂಳು ತುಂಬಿಕೊoಡಿರುವ ರಾಜ ಕಾಲುವೆ ಮತ್ತು ಚರಂಡಿಗಳನ್ನು ಗುರುತಿಸಿ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು ಈಗಾಗಲೇ ಮಳೆಗಾಲ ಆರಂಭವಾಗಿರುವುದರಿoದ ಮಳೆಯ ನೀರು ಸರಾಗವಾಗಿ ಹರಿದು ಹೋಗುವಂತೆ ಹೂಳು ತುಂಬಿಕೊoಡಿರುವ ಸರಾಫ್ ಬಜಾರ್, ಬ್ಯಾಂಕ್ ರೋಡ, ಪೊಲೀಸ ಸ್ಟೇಶನ್ ಹಿಂದೆ ಬೇವಿನಕಟ್ಟಿ ನಾಲಾ, ತುಳಜಾ ಭವಾನಿ ಗುಡಿಯ ಮುಂದೆ ಇರುವ ಮುಖ್ಯ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ನಗರದ ಕೆಲವು ವಾರ್ಡುಗಳಲ್ಲಿ ಈಗಾಗಲೇ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದ್ದು ಇನ್ನುಳಿದ ಮುಖ್ಯ ಚರಂಡಿಗಳನ್ನು ಸ್ವಚ್ಛಗೊಳಿಸಲು ಕ್ರಿಯಾ ಯೋಜನೆ ತಯಾರಿಸಿದ್ದು ಅದರಂತೆ ನಗರದ ವಿವಿಧ ರಸ್ತೆಯ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಲು ನಗರಸಭೆ ಪೌರಾಯುಕ್ತರು ಸೂಚಿಸಿದರು. ಯಾವುದೇ ಕಾಲಕ್ಕೆ ಚರಂಡಿಗಳಲ್ಲಿ ಮಳೆ ನೀರು ತುಂಬಿ ಮನೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಹಾಗೂ ಕ್ರಮ ಜರುಗಿಸಲು ಗದಗ ಬೆಟಗೇರಿ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.
ಕ್ರಿಯಾ ಯೋಜನೆಯ ಪ್ರಕಾರ ಜೂ.30 ರವರೆಗೆ ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯಲ್ಲಿ ಮಳೆ ನೀರು ನುಗ್ಗುವ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಹಾಗೂ ಮನೆಗಳಿಗೆ ನೀರು ನುಗ್ಗದಂತೆ ಸ್ವಚ್ಛಗೊಳಿಸಲು ಕೆಳಕಂಡ ದಿನಾಂಕಗಳAದು ಕಾರ್ಯ ಕೈಗೊಳ್ಳಲಾಗುವುದು. ಜೂನ್ 6 ರಿಂದ 7 ರವರೆಗೆ ವಾರ್ಡ ನಂ. 1 & 2, ಜೂನ್ 8 ರಿಂದ 9 ರವರೆಗೆ ವಾರ್ಡ ನಂ. 3 & 4, ಜೂನ 8 ರಿಂದ 10 ರವರೆಗೆ ವಾರ್ಡ ನಂ. 5 & 7, ಜೂನ್ 6 ಮತ್ತು 7 ರವರೆಗೆ ವಾರ್ಡ ನಂ. 8 & 9, ಜೂನ್ 6 ರಿಂದ 7 ರವರೆಗೆ 6 & 10 ರವರೆಗೆ, ಜೂನ್ 6 ರಿಂದ 8 ರವರೆಗೆ ವಾರ್ಡ ನಂ. 11 & 12, ಜೂನ್ 8 ರಿಂದ 10 ರವರೆಗೆ ವಾರ್ಡ ನಂ. 27,28,29 ಗಳನ್ನು ಸ್ವಚ್ಛ ಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು.
ಅದೇ ರೀತಿಯಾಗಿ ಜೂನ್ 6 ರಿಂದ 8 ರವರೆಗೆ ಹಾಗೂ ಜೂನ್ 9 ರಿಂದ 10 ರವರೆಗೆ ವಾರ್ಡ ನಂ.26 ರಲ್ಲಿ, ಜೂನ್ 6 ರಿಂದ 9 ರವರೆಗೆ ಹಾಗೂ 9 ರಿಂದ 10 ರವರೆಗೆ ವಾರ್ಡ ನಂ. 20,31,33 ರಲ್ಲಿ, ಜೂನ್ 6 ರಿಂದ 7 ರವರೆಗೆ ಹಾಗೂ ಜೂನ್ 8, 9 ಹಾಗೂ 10 ರಂದು ವಾರ್ಡ ನಂ. 16 ರಲ್ಲಿ, ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.