ಕರೋನಾ ಮಾನವನ ಮೇಲೆ ಬೀರುವ ಪ್ರಭಾವವನ್ನು ವಿಶ್ವ ಕಣ್ಣಾರೆ ಕಂಡಿದೆ. ಇನ್ನು ರೂಪಾಂತರಿ ಕೊರೋನಾ ವೈರಸ್ ಕೊಡುತ್ತಿರುವ ಕಾಟವೂ ಅಷ್ಟಿಷ್ಟಲ್ಲ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದು ಸರಕಾರಕ್ಕೆ ಆತಂಕ ಸೃಷ್ಟಿಸಿದೆ.ಮತ್ತೊಂದೆಡೆ ಕೊರೋನಾ ವೈರಸ್ ಮನುಷ್ಯನ ದೇಹದ ಮೇಲೆ ಅದರಲ್ಲಿಯೂ ಮಕ್ಕಳು, ಯುವಕರ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಮತ್ತೊಂದಿಷ್ಟು ಅಧ್ಯಯನಗಳು ನಡೆದಿವೆ.

ಕರೋನಾ ಔಷಧವನ್ನು ಸಂಶೋಧಿಸಿದ್ದು, ಕೊರೋನಾ ರೋಗಿಗಳನ್ನು ಸಾವಿನಿಂದ ಪಾರು ಮಾಡಲು ನೆರವಾಗಲಿದೆ. ಈ ಔಷಧ ಬಳಕೆಗೆ ರಾಷ್ಟಿçÃಯ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಅಮೆರಿಕ, ಜರ್ಮನಿ, ರಷ್ಯಾ, ಚೀನಾ ಮತ್ತು ಭಾರತದ ಕಂಪನಿಗಳು ಕೊರೋನಾ ವೈರಸ್ ಲಸಿಕೆ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿವೆ. ಕೋವಿಡ್‌ವಾಸಿ ಮಾಡಬಲ್ಲ ಔಷಧಗಳನ್ನು ಸಂಶೋಧಿಸಿದ್ದು, ಕರೋನಾ ಹೋರಾಟಕ್ಕೆ ಮತ್ತಷ್ಟು ಭರವಸೆ ಮೂಡಿಸಿದೆ.

ಈ ರೋಗದ ಪರಿಣಾಮಗಳ ಬಗ್ಗೆ ದಿನಕ್ಕೊಂದು ಹೊಸ ಮಾಹಿತಿ ಲಭ್ಯವಾಗುತ್ತಿವೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೂ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ, ಕೈಗಳ ಸ್ವಚ್ಛತೆ ಕಾಪಾಡಿಕೊಂಡರೆ ಒಳ್ಳೇಯದು ಎಂದು ಹೇಳುತ್ತಿದೆ. ಈ ಕರೋನಾ ಕೇವಲ ಮಾನವನ ದೇಹಾರೋಗ್ಯದ ಮೇಲೆ ಪರಿಣಾಮ ಬೀರದೆ ಸಾಮಾಜಿಕ ವ್ಯವಸ್ಥೆ ಮೇಲೂ ಪರಿಣಾಮ ಬೀರುತ್ತಿದೆ.

ಸಾಮಾಜಿಕ ವ್ಯವಸ್ಥೆ ಮೇಲೆ ಪರಿಣಾಮ:

ಸಾಮಾಜಿಕ ವ್ಯವಸ್ಥೆ ಎನ್ನುವುದು ಸಮಾಜದ ಒಳಗಿನ ವ್ಯಕ್ತಿಗಳು ಮತ್ತು , ಆ ವ್ಯಕ್ತಿಗಳು ಸಮಾಜದಲ್ಲಿ ನಿರ್ವಹಿಸುವ ಪಾತ್ರವೇ ಸಾಮಾಜಿಕ ವ್ಯವಸ್ಥೆಯಾಗಿದೆ. ಮನುಷ್ಯ ಸಂಘ ಜೀವಿ. ನಮ್ಮ ವ್ಯಕ್ತಿತ್ವದ ಮೇಲೆ ಸಮಾಜವು ಬಹಳವಾಗಿ ಪರಿಣಾಮ ಬೀರುತ್ತದೆ. ನಮ್ಮ ವ್ಯಕ್ತಿತ್ವವೂ ಕೂಡಾ ಸಮಾಜದ ಮೇಲೆ ಪರಿಣಾಮ ಬೀರುತ್ತದೆ.

ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದು, ಇತರರಿಗೆ ಸಹಾಯ ಮಾಡುವುದು, ಊರಿನ ಉತ್ಸವಗಳಲ್ಲಿ ಪಾಲ್ಗೊಳ್ಳುವುದು, ಇತರ ಸಂಘಸಂಸ್ಥೆಗಳ ಜೊತೆಗೆ, ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡುವದು. ಹೀಗೆ ಅನೇಕ ಸಮಾಜಿಕ ಕೆಲಸಗಳಲ್ಲಿ ತನ್ನನ್ನು ತಾನು ಮಾನವ ತೊಡಗಿಸಿ ಕೊಂಡಿರುತ್ತಾನೆ.

ಆದರೆ ಕರೋನಾದದಿಂದಾಗಿ ಮನುಷ್ಯನ ಸಾಮಾಜಿಕ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸಿ ಸಾಮಾಜಿಕ ಸಮಸ್ಯಗಳಿಗೆ ಕಾರಣವಾಗಿದೆ. ಕರೋನಾ ಭಯ, ಸರಕಾರದ ನಿಬಂಧನೆಗಳು, ಲಾಕ್‌ಡೌನ್ ಮುಂತಾದ ಕಾರಣಗಳಿಂದಾಗಿ ಮಾನವನನ್ನು ಅಸಾಮಾಜಿಕ ಮಾನವನನ್ನಾಗಿ ಮಾಡುತ್ತಿದೆ. ಕರೋನಾ ದಿಂದ ಮನೆಯಿಂದ ಹೊರಗೆ ಬರದಿರುವದು, ಸಾಮಾಜಿಕ ಅಂತರ ಕಾಯ್ದಕೊಳ್ಳುವದು, ಮದುವೆಗೆ ಸೀಮಿತ ಜನ ಭಾಗವಹಿಸುವದು, ಶವಸಂಸ್ಕಾರಕ್ಕೆ ಸೀಮಿತ ಜನ ಪಾಲ್ಗೊಳ್ಳುವುದು, ಜಾತ್ರೆ, ಹಬ್ಬ, ಉತ್ಸವ, ಸಿನೇಮಾ, ನಾಟಕ, ಕ್ರೀಡಾ ಚಟುವಟಿಕೆಗಳಂತಹ ಸಾಮಾಜಿಕ ಕಾರ್ಯಗಳು ನಡೆಯದೆ ಮಾನವ ಇವುಗಳಿಂದ ದೂರವಾಗಿ ಅಸಾಮಾಜಿಕ ಮಾನವನಾಗುತ್ತಾ ಸಾಗುತ್ತಿದ್ದಾನೆ. ಇಂತಹ ಕಾರ್ಯಗಳಿಂದ ಸಮಾಜದಲ್ಲೇ ಇದ್ದರೂ, ಸಮಾಜದಿಂದ ಸ್ವಲ್ಪ ಹೊರಗೆ ಉಳಿದು ಬಿಡುತ್ತಿದ್ದಾನೆ. ಸಾಮಾಜಿಕ ಚಟುವಟಿಕೆಗಳಲ್ಲಿ ಅಷ್ಟಾಗಿ ಭಾಗವಹಿಸುವುದಿಲ್ಲ.

ಅವರಿಗೆ ಅವರಾಯ್ತು, ಅವರ ಸಂಸಾರವಾಯ್ತು, ಅವರ ಚಿಂತೆಗಳಾಯ್ತು, ಅವರ ಸಮಸ್ಯೆಗಳಾಯ್ತು. ಇತರರಿಗೆ ಏನಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ತಮ್ಮ ಪಾಡಿಗೆ ತಾವು ಇರುತ್ತಾರೆ. ಈ ರೀತಿ ಅಸಾಮಾಜಿಕರಣಕ್ಕೆ ಕರೋನಾ ವೈರಸ್ ಕಾರಣವಾಗಿದೆ. ಮಾನವ ಮೂಲತಃ ಸಂಘ ಜೀವಿ’ ಈ ಸಂಘ ಜೀವನಕ್ಕೆ ಕರೋನಾ ಕೊಡಲಿ ಪೆಟ್ಟು ನೀಡಿದೆ. ಪರಸ್ಪರರನ್ನು ನಂಬದ, ಮುಟ್ಟದ, ಸ್ಥಿತಿಗೆ ನಾವು ಹೋಗುತ್ತಿದ್ದೇವೆ. ಇದು ಪರಸ್ಪರ ಸಾಮೂಹಿಕ ಬಹಿಷ್ಕಾರವಾಗಿದೆ. ಕೆಲವು ಜನ ಬಡವರು ಕರೋನಾ ದಿಂದ ಮೃತರಾದವರ ಸಂಬಂಧಿಗಳು ಹಣ ಕಟ್ಟಿ ಶವ ತರಲು ಸಾಧ್ಯವಾಗದೆ ಖಾಸಗಿ ಆಸ್ಪತ್ರೆಯಲ್ಲಿಯೇ ಕೈಮುಗಿದು ಬರುವಂತೆ ಮಾಡಿದೆ. ಇದರರಿಂದಾಗಿ ಕರೋನಾ ಸಾಮಾಜಿಕ ವ್ಯವಸ್ಥೆಗೂ ವೈರಸ್ ಆಗಿ ಪರಿಣಾಮಿಸಿದೆ. ಅಷ್ಟೆ ಅಲ್ಲದೆ,ಈ ಕರೋನಾ ಮಾನವನ ಸಾಮಾಜಿಕ ವ್ಯವಸ್ಥೆ ಅಷ್ಟೆ ಅಲ್ಲದೆ, ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ.

ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ:

ಕರೋನಾ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಕರೋನಾ ಆರ್ಭಟಿಸುತ್ತಿದೆ. ಜನರ ಸಾವು ಸಾಮಾನ್ಯವಾಗಿಬಿಟ್ಟಿದೆ. ಸ್ಮಶಾನಗಳಲ್ಲಿ ದೊಡ್ಡ ದೊಡ್ಡ ಕ್ಯೂ ಕಾಣಿಸುತ್ತಿದೆ. ಪರಿಸ್ಥಿತಿ ರಣಭೀಕರ ಅನ್ನಿಸುತ್ತಿದೆ. ಈ ನಡುವೆಯೇ ಕರ್ನಾಟಕ ಸೇರಿ ಹಲವು ರಾಜ್ಯಗಳು ಫುಲ್ ಲಾಕ್ ಡೌನ್ ಘೋಷಣೆ ಮಾಡಿಬಿಟ್ಟಿವೆ. ಜನರು ಮನೆಯೊಳಗೆ ಇರಬೇಕಾಗಿದೆ. ಉದ್ಯೋಗ ಇಲ್ಲದೆ ಕುಳಿತುಕೊಳ್ಳ ಬೇಕಾಗಿದೆ. ವ್ಯಾಪಾರ ವಹಿವಾಟಿಗೆ ದೊಡ್ಡ ಹೊಡೆತ ಬಿದ್ದಿದೆ. ಆರ್ಥಿಕ ಸ್ಥಿತಿ ನೆಲ ಕಚ್ಚಿದೆ. ಜನರು ಮತ್ತು ಸರಕಾರ ವರಮಾನದ ಕೊರತೆ ಎದುರಿಸುತ್ತಿವೆ. ಅಭಿವೃಧ್ಧಿ ಕಾರ್ಯಗಳು ಸೂನ್ಯವಾಗಿದೆ. ದೇಶವು ಎರಡು ವರ್ಷಗಳ ಹಿಂದೆ ಹೇಗಿತ್ತೊ ಹಾಗೆ ಅಭಿವೃದ್ಧಿಯಲ್ಲಿ ನಿಂತಿದೆ. ಆರ್ಥಿಕ ವ್ಯವಸ್ಥೆ ನಿಂತ ನೀರಾಗಿದೆ.

ಲಾಕ್ ಡೌನ್ ನಿಂದ ದೊಡ್ಡ ಸವಾಲು ಏನೆಂದರೆ, ಲಾಕ್ ಡೌನ್ ಬಳಿಕ ಆರ್ಥಿಕತೆ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ ಎಂಬುದು. ಸರ್ಕಾರ ಮತ್ತು ಆರ್ ಬಿಐ ಕಂಡುಕೊಳ್ಳ ಬೇಕಾಗಿದೆ. ಸರಕಾರ ಕಳೆದ ವರ್ಷ ಆರ್ಥಿಕ ವ್ಯವಸ್ಥೆ ಚೇತರಿಕೆಗೆ ಹಲವಾರು ಸುಧಾರಣ ಕ್ರಮ ಕೈಗೊಂಡಿದ್ದರೂ ಆರ್ಥಿಕತೆ ಪಾತಾಳಕ್ಕೆ ಇಳಿದು ಋಣಾತ್ಮಕವಾಗಿತ್ತು. ಈ ವರ್ಷವೂ ಮತ್ತದೇ ಸನ್ನಿವೇಶ ಎದುರಾಗಿದೆ. ಸರಕಾರದಿಂದ ಏನಾದರೂ ಜನತೆ ಕಲ್ಯಾಣಕ್ಕಾಗಿ ಆರ್ಥಿಕ ಪ್ಯಾಕೇಜ್ ಘೋಷಣೆ ಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಸಧ್ಯ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಈ ಹೊತ್ತಿನಲ್ಲಿ ಕೆಲವೊಂದು ಪರಿಹಾರ ಕ್ರಮಗಳನ್ನು ಸರ್ಕಾರ ಪ್ರಕಟಿಸಲೇ ಬೇಕಾಗುತ್ತದೆ. ಇಲ್ಲದೇ ಹೋದರೆ ಜನ ಮತ್ತಷ್ಟು ಕಷ್ಟ ಅನುಭವಿಸ ಬೇಕಾಗುತ್ತದೆ. ಲಾಕ್ ಡೌನ ಸನ್ನಿವೇಶದಲ್ಲಿ ಜನರ ವರಮಾನ ಕಡಿಮೆ ಇರುವುದರಿಂದ ಜನರ ಸಾಲ ಮರುಪಾವತಿ ಕಷ್ಟವಾಗಬಹುದು. ಅದಕ್ಕೊಂದು ಪರಿಹಾರದ ಅಗತ್ಯವಿದೆ.

ಕೊವಿಡ್ ಲಾಕ್ ಡೌನ್ ನಿಂದಾಗಿ ಕೈಗಾರಿಕೊದ್ಯಮ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತದೆ. ಅದರಲ್ಲೂ ಸಣ್ಣ ಕೈಗಾರಿಕೆಗಳ, ಚಿಲ್ಲರೆ ವಲಯ ತೊಂದರೆಗೆ ನಿಲುಕುತ್ತವೆ. ಶ್ರಮಿಕ ವರ್ಗ, ಸೇವಾ ವಲಯದ ಮೇಲೆ ಲಾಕ್ ಡೌನ್ ಗಂಭೀರ ಪರಿಣಾಮ ಬೀರುತ್ತಿದೆ. ಕೋವಿಡ್ ನಿಂದ ಆರ್ಥಿಕ ವ್ಯವಸ್ಥೆ ಮತ್ತೆ ಮತ್ತೆ ಕುಸಿಯುತ್ತ ಸಾಗುತ್ತದೆ. ಮೂಲ ಸ್ಥಿತಿಗೆ ಬರಬೇಕಾದರೆ, ಹಲವು ವರ್ಷಗಳೇ ಬೇಕಾಗುತ್ತದೆ.

ಕೈಗಾರಿಕೆಗಳು ಬಂದ್ ಆದಲ್ಲಿ ಕಾರ್ಮಿಕರ ಬೇಡಿಕೆ ಕಡಿಮೆ ಆಗುತ್ತದೆ. ಇದರಿಂದ ನಿರುದ್ಯೋಗ ಉಂಟಾಗುತ್ತದೆ. ನಿರುದ್ಯೋಗ ಆದಲ್ಲಿ ಜನರ ಆದಾಯ ಕಡಿಮೆ ಆಗಿ ಅವರು ಬೇಡಿಕೆ ಕಡಿಮೆ ಮಾಡುತ್ತಾರೆ. ಬೇಡಿಕೆ ಕಡಿಮೆ ಆದಲ್ಲಿ ಬೆಲೆ ಕಡಿಮೆ ಆಗುವದರಿಂದ, ಕೈಗಾರಿಕಾ ಉತ್ಪನ್ನಗಳಿಗೆ ಬೇಡಿಕೆ ಕಡಿಮೆಯಾಗಿ, ಕೈಗಾರಿಕೆಗಳಿಗೆ ಮತ್ತೆ ಹಾನಿ ಆಗುತ್ತದೆ. ಆಗ ಮತ್ತೆ ಕೈಗಾರಿಕೆಗಳಿಗೆ ಲಾಭ ಕಡಿಮೆಯಾಗಿ ಹೊಡೆತ ಬೀಳುತ್ತದೆ.

ಒಂದು ದೇಶದ ಕೈಗಾರಿಕೆಗಳನ್ನು ರಕ್ಷಿಸಲು ಸರಕಾರ ಹಸ್ತಕ್ಷೇಪ ಮಾಡಲೇ ಬೇಕು. ಇಲ್ಲದಿದ್ದರೆ, ನಿರುದ್ಯೋಗ ಮತ್ತು ಆರ್ಥಿಕ ಕುಸಿತ ಹೆಚ್ಚಾಗುತ್ತಲೆ ಹೋಗುತ್ತದೆ. ಕೊರೋನಾ ವೈರಸ್ ಮನುಷ್ಯನ ದೇಹದ ಮೇಲೆ ಅದರಲ್ಲಿಯೂ ಮಕ್ಕಳು, ಯುವಕರ ಮೇಲೆ ದುಪ್ಪರಿಣಾಮ ಬಿರುತ್ತಿದೆ. ಈ ಕರೋನಾ ಮಾನವನ ದೇಹದ ಜೊತೆಗೆ ಜೊತೆಗೆ ಮಾನವನ ಸಾಮಾಜಿಕ ವ್ಯವಸ್ಥೆ ಮತ್ತು ಆರ್ಥಿಕ ವ್ಯವಸ್ಥೆಗಳ ಮೇಲಿನ ವೈರಸ ಕೂಡಾ ಆಗಿದೆ. ಮತ್ತು ಭೀಕರ ಪರಿಣಾಮ ಬೀರಿದೆ. ಮಾನವನ ಆರೋಗ್ಯದ ಜೊತೆಗೆ ಅದೇ ಮಾನವನ ಸಂಘ ಜೀವನ ಮತ್ತು ಆರ್ಥಿಕ ಜೀವನದ ಮೇಲೂ ಈ ಮಹಾಮಾರಿ ಪರಿಣಾಮ ಬೀರಿದ್ದಂತೂ ಸತ್ಯ. ಅಲ್ಲವೆ?

 -ಬಸವರಾಜ್ ಪಲ್ಲೇದ, ಉಪನ್ಯಾಸಕರು ಅಬ್ಬಿಗೇರಿ

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ಮಾನದಂಡ ಸಡಿಲಿಕೆಯಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆಯಾ?

ಲಾಕ್‌ಡೌನ್ ಮಾನದಂಡಗಳನ್ನು ಸಡಿಲಿಸಿದ ನಂತರ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆಯಲ್ಲಿ ಏರಿಕೆಯಾಗಿದೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಲು, ಆರೋಗ್ಯ ಇಲಾಖೆ ಎಲ್ಲ ನಾಗರಿಕರ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 512ಕ್ಕೆ ಏರಿಕೆ

ಕೊರೋನಾ ಸೊಂಕಿಗೆ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ರಾಜ್ಯ-ದೇಶ-ರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಅಪ್ಡೇಟ್ ಮಾಹಿತಿ..

ಸಂತ ಶ್ರೀ ಸೇವಾಲಾಲ್ ಜಯಂತಿಯನ್ನು ಗಜೇಂದ್ರಗಡ ತಾಲೂಕು ಅಮರಗಟ್ಟಿ ತಾಂಡಾದಲ್ಲಿ ಆಚರಿಸಲಾಯಿತು

ಗದಗ: ಸೇವಾಲಾಲ್ ಮಹಾರಾಜರ ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ಹಾಗೂ ತೇರನ್ನು ಎಳೆಯುವ ಮುಖಾಂತರ ವಿಶೇಷ ಸೇವಾಲಾಲ…

ಗದಗ ಜಿಲ್ಲೆ ರೈತರಿಗೆ ಉಪಯುಕ್ತ ಮಾಹಿತಿ: ಮೊಬೈಲ್ ನಲ್ಲೆ ಸಿಗಲಿದೆ ಮಳೆ, ಬೆಳೆ ವಿವರ

ಗದಗ: ಕೃಷಿ ಹಾಗೂ ಹವಾಮಾನ ಸಂಬಂಧಿತ ಆ್ಯಪ್‌ಗಳುಇತ್ತೀಚಿಗೆ ಹವಾಮಾನ ವೈಪರೀತ್ಯದಿಂದಾಗಿ ಕೃಷಿ ಉತ್ಪಾದನೆ ಕುಂಠಿತಗೊಂಡಿದೆ. ಬರ,…