ರೋಣ: ನಗರದ ಬಸ್ ನಿಲ್ದಾಣದ ಹತ್ತಿರ ಬೀಡು ಬಿಟ್ಟಿರುವ ಕೋತಿಗಳಿಗೆ ಬಾಳೆ ಹಣ್ಣು ನೀಡುವ ಮೂಲಕ ಎಎಸ್ಐ ಒಬ್ಬರೂ ಮಾನವೀಯತೆ ಮೆರೆದ ಘಟನೆ ರೋಣದಲ್ಲಿ ನಡೆದಿದೆ.

ಲಾಕ್ ಡೌನ್ ನಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಯಿದ್ದವರೇ ಸಂಕಷ್ಟದಲ್ಲಿರುವಾಗ ಇನ್ನು ಮೂಕ ಪ್ರಾಣಿಗಳ ವೇದನೆ ಹೇಳತೀರದು. ರೋಣ ಪಟ್ಟಣದ ಬಸ್ ನಿಲ್ದಾಣದ ಬಳಿ ನೀರು ಆಹಾರವಿಲ್ಲದೇ ನಿತ್ರಾಣವಾಗಿರುವ ಕೋತಿಗಳಿಗೆ ಆಹಾರ ನೀಡುವ ಮೂಲಕ ಇಲ್ಲಿನ ಎಎಸ್ಐ ಸರ್ವಿ ಕೋತಿಗಳ ಹಸಿವಿಗೆ ಮಿಡಿದಿದ್ದಾರೆ. ಈ ಮೂಲಕ ಖಾಕಿಯೊಳಗಿನ ಅಂತಕರಣದ ಮನಸ್ಸು ಜನರ ಮೆಚ್ಚುಗೆಗೆ ಕಾರಣವಾಗಿದೆ.

ರೋಣ ಠಾಣೆಯ ಎಎಸ್ಐ ಸರ್ವಿ ಕೋತಿಗಳಿಗೆ ಬಾಳೆ ಹಣ್ಣು, ಬಿಸ್ಕೀಟ್, ನೀರಿನ ಬಾಟಲಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕರೊನಾ ಸಂಕಷ್ಟದ ಕಾಲದಲ್ಲಿಯೂ ಒತ್ತಡದ ಕೆಲಸದ ಮಧ್ಯದಲ್ಲಿಯೂ ಇಂತಹ ಜನಪರ, ಜೀವಪರ ಕಾರ್ಯಗಳಿಗೆ ಮೀಡಿಯುತ್ತಿರುವ ಈ ಪೊಲೀಸಪ್ಪನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಅನೇಕ ಸಂಘ ಸಂಸ್ಥೆಯವರು ಅದೆಷ್ಡೋ ಕಡೆಗಳಲ್ಲಿ ಹಸಿದ ಹೊಟ್ಟೆಗೆ ಅನ್ನ ನೀಡಿ ಮಾನವೀಯತೆ ಪ್ರದರ್ಶಿಸಿದ್ದಾರೆ. ಆದರೆ ಇಲ್ಲಿ ಪ್ರಾಣಿಗಳ ಮೇಲೆ ದಯೇ ತೋರಿಸುವ ಮೂಲಕ ಎ.ಎಸ್.ಐ ಸರ್ವಿ ಅವರು ಕಾಳಜಿ ತೋರಿದ್ದು ವಿಶೇಷವಾಗಿದೆ.

Leave a Reply

Your email address will not be published. Required fields are marked *

You May Also Like

ಕಾಂಗ್ರೆಸ್ ಸೇರಲು ವರ್ತೂರು ಪ್ರಕಾಶ್ ತೀರ್ಮಾನ

ಬೆಂಬಲಿಗರು ಹಾಗೂ ಕಾರ್ಯಕರ್ತರ ಒತ್ತಾಯದಂತೆ ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದು, ಈಗಾಗಲೇ ಆ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದೇನೆ. ಸದ್ಯದಲ್ಲೇ ಅಂತಿಮ ನಿರ್ಧಾರವಾಗಲಿದೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದರು.

ಹಾನಗಲ್ ಬೈ ಎಲಕ್ಷನ್ ನಲ್ಲಿ ಕಾಂಗ್ರಸ್ ಗೆ ಜಯ

ಹಾನಗಲ್: ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 7598 ಮತಗಳ ಅಂತರದಿಂದ ಗೆಲುವು.ಅಂತಿಮವಾಗಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ…

ಶಿಕ್ಷಕ ಶಾಂತಕುಮಾರ ಭಜಂತ್ರಿಗೆ ಭಾರತ ಸೇವಾ ರತ್ನ ಪ್ರಶಸ್ತಿ ಪ್ರಧಾನ

ಗದಗ: ತಾಲೂಕಿನ ಲಿಂಗಧಾಳ ಸರಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕರು ಹಾಗೂ ಕನ್ನಡ ಜಾನಪದ ಪರಿಷತ್…

ಮೊದಲನೇ ಹಂತದ ಚುನಾವಣೆ ಮಪತ್ರಗಳ ಸಲ್ಲಿಕೆ ಅವಧಿ ಮುಕ್ತಾಯ: ಗದಗ ಜಿಲ್ಲೆಯಲ್ಲಿ ಸಲ್ಲಿಕೆಯಾದ ಮತಪತ್ರಗಳ ವಿವರ

ಮೊದಲ ಹಂತದ ಗ್ರಾಮ ಪಂಚಾಯತ ಚುನಾವಣೆಗೆ ಅಭ್ಯರ್ಥಿಗಳಿಂದ ನಾಮಪತ್ರಗಳ ಸ್ವೀಕರಿಸುವ ಅವಧಿ ಡಿ.11 ರಂದು ಮುಕ್ತಾಯವಾಗಿದ್ದು, ಒಟ್ಟು 801 ಸ್ಥಾನಗಳಿಗೆ 1212 ಮಹಿಳೆಯರು ಸೇರಿದಂತೆ ಒಟ್ಟಾರೆ 2802 ನಾಮಪತ್ರಗಳ ಸಲ್ಲಿಕೆಯಾಗಿವೆ.