ಗದಗ: ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಲಾಕ್ ಡೌನ್ ಸಮಯವನ್ನೇ ಬಂಡವಾಳ ಮಾಡಿಕೊಂಡು ಕಳ್ಳಭಟ್ಟಿ ಮಾರುತ್ತಿದ್ದ ಆರೋಪಿ ಬಂಧಿಸಿದ್ದಾರೆ.

ಗದಗ ಸಮೀಪದ ಮಲ್ಲಸಮುದ್ರ ಗ್ರಾಮದ ಹೊರವಲಯದಲ್ಲಿ ನಡೆಯುತ್ತಿದ್ದ ಕಳ್ಳಭಟ್ಟಿ ದಂಧೆಯ ಖಚಿತ ಮಾಹಿತಿ ಪಡೆದು ಎಸ್ಪಿ ಯತೀಶ್ ಎನ್, ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ಕಳ್ಳಭಟ್ಟಿ ಸಂಗ್ರಹಿಸಿದ್ದ ಆರೋಪಿ ರಾಜು ಮಾಂತೇಶ್ ಚೌವ್ಹಾಣ್ ನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿ ರಾಜು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಗ್ರಾಮದಿಂದ ಹೆಂಡ ತಂದು ಮಾರುತ್ತಿದ್ದ ಎನ್ನಲಾಗಿದ್ದು, ಮಲ್ಲಸಮುದ್ರ ಗ್ರಾಮದ ಪಾಳು ಮನೆಯಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಸಿಕ್ಕಿ ಬಿದ್ದಿದ್ದಾನೆ. ದಾಳಿ ವೇಳೆ ಆರೋಪಿಯಿಂದ 10 ಲೀಟರ್ ಕಳ್ಳಭಟ್ಟಿ ಸಾರಾಯಿ, ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಗ್ರಾಮಾಂತರ ಪಿಎಸ್ ಐ ರವಿಕುಮಾರ್ ಕಪ್ಪತ್ತನವರ್ ಸೇರಿದಂತೆ ಸಿಬ್ಬಂದಿಯಿಂದ ದಾಳಿ ನಡೆದಿದೆ.

Leave a Reply

Your email address will not be published. Required fields are marked *

You May Also Like

ಮುಳಗುಂದ ಅರ್ಬನ್ ಬ್ಯಾಂಕ ಚುನಾವಣೆ : ಅವಿರೋಧ ಆಯ್ಕೆ

ಮುಳಗುಂದ : ಇಲ್ಲಿನ ದಿ.ಮುಳಗುಂದ ಅರ್ಬನ್ ಸೌಹಾರ್ದ ಕೋ-ಆಪ್ ಬ್ಯಾಂಕನ ನಿರ್ದೇಶಕ ಮಂಡಳಿಯ ಉಳಿದ ಅವಧಿಗೆ…

ಲಕ್ಷ್ಮೇಶ್ವರ ತಾಲೂಕಿನಾದ್ಯಂತ ಜವಳು ಮಣ್ಣಿಗೆ ಮರಳು ರೂಪ ಕೊಟ್ಟು ಅಕ್ರಮ!

ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಅಧಿಕಾರಿಗಳಿಗೆ ಗೊತ್ತಿದೆಯಂತೆ, ಆದರೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತಾರಂತೆ. ಇದು ಕೇವಲ ಒಂದು ವಿಚಾರದ್ದಲ್ಲ.

ಶಾಸಕರಿಗಿಂತ ಹಿಂಬಾಲಕನದ್ದೆ ಆವಾಜ್…! ಬಸವಂತರಾಯ್ ವಿರುದ್ಧ ಜನರ ಆಕ್ರೋಶ

ರಾಯಚೂರು: ಮಸ್ಕಿ ವಿಧಾನಸಭೆ ಕ್ಷೇತ್ರದ ಅನರ್ಹ ಶಾಸಕ ಪ್ರತಾಪಗೌಡ ಪಾಟೀಲ ಅವರ ಹಿಂಬಾಲಕ ಬಸವಂತರಾಯ್ ಕುರಿ…

ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ಅಲ್ಪಾವಧಿ ಕೃಷಿ ಸಾಲ

ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ರೈತ ಸಮುದಾಯಕ್ಕೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ…