ಲಕ್ಷ್ಮೇಶ್ವರ: ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವುದು ಅಧಿಕಾರಿಗಳಿಗೆ ಗೊತ್ತಿದೆಯಂತೆ, ಆದರೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತಾರಂತೆ. ಇದು ಕೇವಲ ಒಂದು ವಿಚಾರದ್ದಲ್ಲ. ಈ ವಿಷಯವಾಗಿ ಲಕ್ಷ್ಮೇಶ್ವರ ಹಾಗು ಶಿರಹಟ್ಟಿಯಲ್ಲಿನ ಬಹುತೇಕ ಅಧಿಕಾರಿಗಳು ನಡೆದಿರುವ ಅಕ್ರಮದ ಬಗ್ಗೆ ನೀಡುವ ಸಿದ್ಧ ಉತ್ತರ ಒಂದೇ.

ತಾಲೂಕಿನಾದ್ಯಂತ ಅಕ್ರಮ ಮರಳು ಗಣಿಗಾರಿಕೆ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ದಿನನಿತ್ಯವೂ ಅನೇಕ ಟ್ರ್ಯಾಕ್ಟರ್ ಹಾಗೂ ಟ್ರಕ್ ಗಳಿಂದ ಹಗಲು ರಾತ್ರಿ ಎನ್ನದೇ ಮರಳು ತುಂಬುತ್ತಿದ್ದಾರೆ. ಈ ಮರಳುಗಳ್ಳರಿಗೆ ಯಾರ ಭಯವೂ ಇಲ್ಲವಂತೆ ಅಷ್ಟೊಂದು ಭರವಸೆಯಿಂದ ಮರಳನ್ನು ಲೋಟಿ ಮಾಡುತ್ತಿದ್ದಾರೆ. ಆದರಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಲ್ಲಿ ಹಾಗೂ ಬೆಟ್ಟ ಗುಡ್ಡಗಳ ಕೆಳಗೆ ಜವಳು ಪ್ರದೇಶದಲ್ಲಿ ಮರಳನ್ನು ತೆಗೆಯುತ್ತಿದ್ದಾರೆ. ನಂತರ ಮೋಟರ ಹಚ್ಚಿ ಮರಳನ್ನು ತೊಳೆಯುತ್ತಾರೆ. ಇಷ್ಟೆಲ್ಲಾ ಇದ್ದರೂ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿಕೊಂಡು ಕುಳಿತು ಕೊಂಡಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮ ಅಷ್ಟೇ ಅಲ್ಲದೆ ಸೂರಣಗಿ, ಆದರಹಳ್ಳಿ ಮಲ್ಲಾಪೂರ, ಅಮರಾಪೂರ ಹುಲ್ಲೂರ ಅಕ್ಕಿಗುಂದ ಗ್ರಾಮ ಸೇರಿದಂತೆ ಇನ್ನೂ ಅನೇಕ ಕಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ. ಆದಾಗ್ಯೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನುವುದು ಸ್ಥಳೀಯರ ಅಸಮಾಧಾನ.

ಅಕ್ರಮ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತೇನೆ. ಆದರೆ ಅಕ್ರಮ ಮರಳು ಗಣಿಗಾರಿಕೆ ವಿಚಾರದಲ್ಲಿ ಕಾಟಾಚಾರಕ್ಕೆ ಕೆಲ ಲಾರಿಗಳ ಮೇಲೆ ಕೇಸ್ ದಾಖಲಿಸುವುದು ಬಿಟ್ಟರೇ ಅಧಿಕಾರಿಗಳು ಇನ್ನೇನು ಮಾಡುತ್ತಿದ್ದಾರೆ ಎಂಬುದು ಲಕ್ಷ್ಮೇಶ್ವರ ತಾಲೂಕಿನ ಜನರ ಅಸಮಾಧಾನ.

ಗಮನಕ್ಕಿದೆ ಕ್ರಮ ಕೈಗೊಳ್ಳುತ್ತೇನೆ ಆದರಹಳ್ಳಿ ಗ್ರಾಮದಲ್ಲಿ ಜವಳು ಪ್ರದೇಶದಲ್ಲಿ ಮರಳು ತೆಗೆಯುತ್ತಿರುವುದು ನನ್ನ ಗಮನಕ್ಕೆ ಇದೆ. ಹಾಗೂ ಕೆಲ ತಿಂಗಳ ಹಿಂದೆ ಗಾಡಿಗಳನ್ನು ಸಿಜ್ ಮಾಡಿದ್ದೆ. ಈಗಲೂ ಮರಳು ತೆಗೆಯುತ್ತಿದ್ದರೆ, ಸ್ಥಳಕ್ಕೆ ಹೋಗಿ ಪರಿಶೀಲಿಸಿ ಕಾನೂನು ಕ್ರಮ ಜರುಗಿಸಲಾಗುವುವುದು.

–   ಉಮೇಶ, ಗಣಿ ಮತ್ತು ಭೂವಿಜ್ಞಾನ ಅಧಿಕಾರಿ ಲಕ್ಷ್ಮೇಶ್ವರ-ಶಿರಹಟ್ಟಿ

ಇತ್ತಿಚೆಗಷ್ಟೆ ಕಲ್ಲುಗಣಿಗಾರಿಕೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಅಧಿಕಾರಿಗಳು ಹೇಳಿದ್ದು  ಇದೇ. ಆದರೆ ಗಮನಕ್ಕೆ ಬಂದ ಮೇಲೂ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರಾ.? ಹಾಗಾದರೆ ಎಷ್ಟು ಪ್ರಕರಣಗಳನ್ನು ದಾಖಲಿಸಿದ್ದಾರೆ ಎನ್ನುವ ಜನಸಾಮಾನ್ಯರ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ.

ಅಧಿಕಾರಿಗಳ ವರ್ತನೆ ಕುರಿತು ಇಷ್ಟೆಲ್ಲ ಪಿಠಿಕೆ ಕೊಡಲು ಕಾರಣ, ಮರಳು ಗಣಿಗಾರಿಕೆ ವಿಚಾರ.

ಹೌದು, ಈಗಾಗಲೇ ಅಕ್ರಮ ಮರಳು ಗಣಿಗಾರಿಕೆ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದಾಗಲೂ ಪ್ರಯೋಜನ ಶೂನ್ಯ. ಇದೀಗ ಆದ್ರಳ್ಳಿಯಲ್ಲಿನ ಅಕ್ರಮ ಮರಳು ಗಣಿಗಾರಿಕೆ ಸರದಿ.

ಆದ್ರಳ್ಳಿಯಲ್ಲಿ ಆರಾಮಾಗಿ ಮರಳು ತಗಿಬಹುದು

ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಸದ್ದು ಇಲ್ಲದೇ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಮರಳು ದಂಧೆ ವಿಚಾರ ಅಧಿಕಾರಿಗಳಿಗೆ ಗೊತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎನ್ನುವುದು ಸ್ಥಳೀಯರ ಅಸಮಾಧಾನ.

ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕದಿದ್ರೆ ಕಾನೂನು ಹೋರಾಟ. ಈಗಾಗಲೇ ಲಕ್ಷ್ಮೇಶ್ವರ-ಶಿರಹಟ್ಟಿ ತಾಲೂಕಿನಲ್ಲಿ ಅಕ್ರಮ ಮರಳು ಹಾಗು ಕಲ್ಲುಗಣಿಗಾರಿಕೆ ವಿಚಾರ ನಿರಂತರ ಸದ್ದು ಮಾಡುತ್ತಲೇ ಇದೆ. ಮುಖ್ಯವಾಗಿ ಹೊಳೆಇಟಗಿ ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ಹಗಲು ದರೋಡೆ ನಡೆದಿದೆ. ಪ್ರಭಾವಿಗಳೇ ನೇರವಾಗಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಕ್ರಮದ ಹೆಸರಲ್ಲಿ ಅಕ್ರಮ ಮರಳು ಗಣಿಗಾರಿಕೆ ವ್ಯಾಪಕವಾಗಿದೆ. ತೆಪ್ಪದಲ್ಲೆ ಮರಳು ತೆಗೆದು ನದಿ ಒಡಲು ಬಗೆಯಲಾಗುತ್ತಿದೆ. ಗಣಿ ಇಲಾಖೆಗೆ ಎರಡೂ ತಾಲೂಕಿಗೆ ಒಬ್ಬರೇ ಅಧಿಕಾರಿಗಳಿರುವುದರಿಂದ ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ. ಇಲ್ಲವಾದಲ್ಲಿ ಈ ವಿಚಾರವಾಗಿ ಕಾನೂನು ಹೋರಾಟಕ್ಕೂ ಸಿದ್ಧ ಎಂದು ಕೆಲವು ಪರಿಸರ ಪ್ರೇಮಿಗಳು ಎಚ್ಚರಿಸಿದ್ದಾರೆ.

ಜವಳನ್ಯಾಗ್ ಅಕ್ರಮ ದಂಧೆ

ಲಕ್ಷ್ಮೇಶ್ವರ ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಜವಳು ಪ್ರದೇಶದ ಬೆಟ್ಟಗಳ ಕೆಳಗೆ ರೈತರ ಜಮೀನುಗಳಲ್ಲಿ ಮರಳನ್ನು ಮರಳುಗಳ್ಳರು ಹಗಲು ರಾತ್ರಿ ಎನ್ನದೇ ಬಗೆಯುತ್ತಿದ್ದಾರೆ. ಇಲ್ಲಿಯ ಮರಳು ಅಷ್ಟೊಂದು ಗುಣಮಟ್ಟದಿಂದ ಕೊಡಿಲ್ಲ. ಮಣ್ಣು ಮಿಶ್ರಿತ ಮರಳು ಇದೆ. ಇದನ್ನೇ ಮರಳುಗಳ್ಳರು ಈ ಮರಳನ್ನು ಟ್ರ್ಯಾಕ್ಟರ್ ಮೂಲಕ ತುಂಬಿಕೊAಡು ಪಂಪ್ ಸೆಟ್ ನಿಂದ ಮೋಟರ್ ಹಚ್ಚಿ ತೊಳೆಯುತ್ತಾರೆ. ತೊಳೆದ ನಂತರ ಒಂದು ಕಡೆ ಸಂಗ್ರಹಿಸಿ ಮಾರಾಟ ಮಾಡುತ್ತಾರೆ. ತೊಳೆದ ಮರಳು ಸಂಪೂರ್ಣ ಮಣ್ಣು ಹೋಗಿ ಬರಿ ಬೆಳ್ಳಗೆಯ ಹಳ್ಳದ ಮರಳಂತೆ ಕಾಣುತ್ತದೆ.

ಟ್ರಿಪ್ ಗೆ 4000!

ಈ ಮರಳನ್ನು ಒಂದು ಟ್ರ್ಯಾಕ್ಟರ್ ಗೆ 3000 ರಿಂದ 4000 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಈ ಮರಳನ್ನೆ ಹಳ್ಳದ ಮರಳೆಂದು ಮಾರಾಟ ಮಾಡುತ್ತಾರೆ ಎನ್ನಲಾಗಿದೆ. ಇದು ಕಟ್ಟಡ ಕಾಮಗಾರಿಗೆ ಎಷ್ಟು ಯೋಗ್ಯ.? ಎನ್ನುವುದು ಮಾತ್ರ ಗೊತ್ತಿಲ್ಲ. ಇಷ್ಟೆಲ್ಲ ಅಕ್ರಮ ದಂಧೆ ರಾಜಾರೋಶವಾಗಿ ನಡೆಯುತ್ತಿದೆ. ಇನ್ನಾದರೂ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡುವ ಅಧಿಕಾರಿಗಳು ಕೇವಲ ಭರವಸೆ ನೀಡದೆ ಕ್ರಮಕ್ಕೆ ಮುಂದಾಗುತ್ತಾರಾ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You May Also Like

ಡಾ.ಸಂಕನಗೌಡರ ಸಾಹಿತ್ಯದಿಂದ ಸಮಾಜ ಸುಧಾರಣೆ

ಸಾಮಾನ್ಯವಾಗಿ ವೈದ್ಯ, ವಕೀಲ, ಪೋಲೀಸ ಮೊದಲಾದ ಒತ್ತಡಭರಿತ ವೃತ್ತಿಯಲ್ಲಿ ಇರುವವರು ಕಥೆ, ಕಾದಂಬರಿ, ಕವಿತೆ, ನಾಟಕ, ಸಂಗೀತ, ಸಾಹಿತ್ಯ ಮೊದಲಾದವುಗಳಿಂದ ದೂರವಿರುತ್ತಾರೆ. ದೈನಂದಿನ ವೃತ್ತಿಯ ಒತ್ತಡ ಹಾಗೂ ಮತ್ತಿತರ ಕಾರಣಗಳಿಂದ ಸಾಹಿತ್ಯಾಭ್ಯಾಸದಿಂದ ದೂರವಿರುತ್ತಾರೆ ಅಥವಾ ಸಾಹಿತ್ಯವನ್ನು ಕಡೆಗಣಿಸಿರುತ್ತಾರೆ.

ಗದಗ-ಬೆಟಗೇರಿ ನಗರಸಭೆ: ಮಾರ್ಚ 2ಕ್ಕೆ ಅಧ್ಯಕ್ಷ ಸ್ಥಾನದ ತೀರ್ಪು ಸಾಧ್ಯತೆ, ಉಪಾಧ್ಯಕ್ಷ ಸ್ಥಾನಕ್ಕೆ ಹೈ ಕೋರ್ಟ ಗ್ರೀನ್ ಸಿಗ್ನಲ್

ಉತ್ತರಪ್ರಭ ಸುದ್ದಿಗದಗ: ಗದಗ ಬೆಟಗೇರಿ ನಗರ ಸಭೆಯ ಅಧ್ಯಕ್ಷರಾಗಿ ಬಿಜೇಪಿಯ ಉಷಾ ಮಹೇಶ ದಾಸರ ಆಯ್ಕೆಯಾಗಿದ್ದರು…

ರಾಜ್ಯದಲ್ಲಿನ ಎರಡು ಕ್ಷೇತ್ರಗಳಿಗೆ ಇಂದು ಮತದಾನ!

ಬೆಂಗಳೂರು : ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ.

ಪೊಲೀಸ್ ಸಬ್ ಇನ್ಸ್ಪೆಕ್ಟರ್ 545 ಹುದ್ದೆಗಳಿಗೆ ಅರ್ಜಿ ಅಹ್ವಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಅಡಿಯಲ್ಲಿ ಖಾಲಿ ಇರುವ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿವಿಲ್ ಹುದ್ದೆಗೆ ಕರ್ನಾಟಕ ರಾಜ್ಯ ಪೊಲೀಸ್ (ಕೆಪಿಎಸ್) ಅರ್ಜಿ ಆಹ್ವಾನಿಸಿದೆ.