ಗದಗ: ಕೊರೊನಾದ ಸಂಕಷ್ಟದ ದಿನಗಳು ಕೇವಲ ಬಡ ಜನರಿಗಷ್ಟೆ ಅಲ್ಲದೇ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾರಣದಿಂದ ತೀವ್ರ ಸಂಕಷ್ಟಕ್ಕೀಡು ಮಾಡಿದೆ. ಅದರಲ್ಲೂ ತುತ್ತಿನ ಚೀಲ ತುಂಬಿಕೊಳ್ಳಲು ದಿನದ ದುಡಿಮೆಯನ್ನೇ ನಂಬಿಕೊಂಡಿರುವವರ ಪಾಡಂತೂ ಹೇಳತೀರದು. ಇದೆಲ್ಲದಕ್ಕಿಂತ ಮುಖ್ಯವಾಗಿ ಅದೆಷ್ಟೋ ವೃದ್ಧರು, ವಿಕಲಚೇತನರು, ವಿದವೆಯರು ಮಾಶಾಸನವನ್ನೇ ನಂಬಿ ಬದುಕು ಸಾಗಿಸುತ್ತಿದ್ದಾರೆ. ಅಂತಹವರ ಪಾಡಂತೂ ಹೇಳತೀರದು. ಗದಗ ನಗರದಲ್ಲಿ ವೃದ್ಧೆಯೊಬ್ಬರು ಮಾಶಾಸನ ಪಡೆಯಲು ಎರಡು ಕಿಲೋಮೀಟರ್ ವರೆಗೆ ನಡೆದುಕೊಂಡು ಬಂದ ಘಟನೆ ನಡೆಯಿತು.
ಇಲ್ಲಿನ ಭಜಂತ್ರಿ ನಗರದ ಅಜ್ಜಿ ಯಲ್ಲವ್ವ ಭಜಂತ್ರಿ, ಮಾಶಾಸನ ಪಡೆಯಲು ನಡೆದು ಬಂದ ಅಜ್ಜಿಯ ಮಾತು ಕೇಳಿದರೆ ಕರಳು ಚುರ್ ಎನ್ನುತ್ತೆ. ಅಯ್ಯೋ ವಿಧಿಯೇ ಈ ಕೊರೊನಾದಿಂದ ಈ ಕಣ್ಣುಗಳಿಂದ ಇನ್ನು ಏನೇನು ನೋಡಬೇಕು ಎಂದೆನಿಸದೇ ಇರಲಾರದು. ಈಗಾಗಲೇ ಲಾಕ್ ಡೌನ್ ನಿಂದ ಅಜ್ಜಿ ಆರ್ಥಿಕವಾಗಿ ತೀರಾ ಸಂಕಷ್ಟಕ್ಕೀಡಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ವಾಹನ ವ್ಯವಸ್ಥೆ ಇಲ್ಲದ ಕಾರಣ ಅಜ್ಜಿಯೊಬ್ಬರು ಪೋಸ್ಟ್ ಆಫೀಸಿಗೆ ಎರಡು ಕಿ.ಮೀ ನಡೆದುಕೊಂಡೇ ಬಂದಿದ್ದು ಮಾತ್ರ ಇಂಥ ಅದೆಷ್ಟೋ ಜನರ ಸಂಕಷ್ಟ ಒಂದು ಕ್ಷಣ ಕಣ್ಣ ಮುಂದೆ ಕಟ್ಟಿತು.
ನಗರದ ಹಳೇ ಡಿಸಿ ಆಫೀಸ್ ಸರ್ಕಲ್ ಬಳಿ ಪೊಲೀಸರು ಅಜ್ಜಿಯನ್ನು ವಿಚಾರಿಸಿದಾಗ ಈ ವಿಚಾರ ಬೆಳಕಿಗೆ ಬಂದಿತು. ಅಜ್ಜಿ ಹೊರ ಬಂದ ಕಾರಣ ಕೇಳಿದ ಪೊಲೀಸರು, ಪೋಸ್ಟ್ ಆಫೀಸ್ ಬಂದ್ ಇರುವ ಬಗ್ಗೆ ತಿಳಿಸಿದರು. ಪಾಪ ಅಜ್ಜಿ ಬಂದ ದಾರಿಗೆ ಸುಂಕುವಿಲ್ಲ ಎನ್ನವಂತೆ ಮನೆಗೆ ಮರಳಿದರು.
ಪಾಪ ಒಂದೆಡೆ ಅಜ್ಜಿಗೆ ಕಿವಿ ಕೇಳುವುದಿಲ್ಲ, ಮತ್ತೊಂದೆಡೆ ದಿನದೂಡಲು ಕೈ ಬರಿದಾಗಿವೆ. ಮಗದೊಂದೆಡೆ ಲಾಕ್ ಡೌನ್ ಇಂಥ ಅದೆಷ್ಟೋ ಅಜ್ಜ, ಅಜ್ಜಿಯರು, ತಾಯಂದಿರು, ವಿಧವೆಯರು, ವಿಕಲಚೇತನರು ಈ ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥವರಿಗೆ ಕೊರೊನಾ ಶಾಪವಾಗಿದೆ.

Leave a Reply

Your email address will not be published. Required fields are marked *

You May Also Like

ಮೊರಾರ್ಜಿ ವಸತಿ ಶಾಲೆಯಲ್ಲಿ 10 ವಿದ್ಯಾರ್ಥಿಗಳಿಗೆ ಕೋವಿಡ್ ಧೃಡ

ಮುಳಗುಂದ : ಇಲ್ಲಿನ ಯಳವತ್ತಿ ರಸ್ತೆಗೆ ಹೊಂದಿಕೊಂಡಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 10 ವಿದ್ಯಾರ್ಥಿಗಳು…

ಕಂಟೆನ್ಮೆಂಟ್ ಜೋನ್ ಹಾಗೂ ಬಫರ್ ವಲಯಗಳ ಬಗ್ಗೆ ಪರಿಷ್ಕೃತ ಮಾರ್ಗಸೂಚಿ

ರಾಜ್ಯದಲ್ಲಿ ಕೋವಿಡ್-19 ವಿಕಸಿಸುತ್ತಿರುವ ಸಂದರ್ಭದಲ್ಲಿ, ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ಅಕ್ಕ-ಪಕ್ಕದಲ್ಲಿರುವ/ಹತ್ತಿರದಲ್ಲಿಯೇ ಇರುವ ಮನೆಗಳು ಅಥವಾ ಅಪಾರ್ಟ್ಮೆಂಟ್/ ವಸತಿ ಸಮುಚ್ಛಯಗಳಲ್ಲಿ ವರದಿಯಾಗುತ್ತಿವೆ. ಇದರಿಂದ ಕಂಟೇನ್ಮೆಂಟ್ ವಲಯಗಳ ಸಂಖ್ಯೆಯು ಮಿತಿ ಮೀರಿದ್ದು, ಪ್ರಾಧಿಕಾರಿಗಳಿಗೆ ಸರ್ವೇಕ್ಷಣಾ ಚಟುವಟಿಕೆಗಳನ್ನು ಸುಲಭವಾಗಿ ಕೈಗೊಳ್ಳಲು ಅಡ್ಡಿಯಾಗುವುದೇ ಅಲ್ಲದೇ, ಪರಿಧಿ ವಲಯ ನಿಯಂತ್ರಣವನ್ನೂ ಸಹ ಖಚಿತಪಡಿಸಿಕೊಳ್ಳುವುದು ಕಷ್ಟಸಾಧ್ಯವಾಗಿದೆ.

ಸೋಂಕಿತರ ಸಂಖ್ಯೆಯಲ್ಲಿ 4 ನೆ ಸ್ಥಾನದಲ್ಲಿ ಕರ್ನಾಟಕ : ರಿಕವರಿಗಿಂತ ಆಕ್ಟಿವ್ ಕೇಸ್ ಹೆಚ್ಚು

ಸೋಂಕಿತರ ಸಂಖ್ಯೆ (ಕೇಸ್ ಲೋಡ್) ಆಧಾರದ ಪಟ್ಟಿಯಲ್ಲಿ ಕರ್ನಾಟಕ ಈಗ ಗುಜರಾತ್ ದಾಟಿ 4ನೆ ಸ್ಥಾನಕ್ಕೆ…