ಲಕ್ನೋ: ಅಪ್ರಾಪ್ತ ಬಾಲಕಿ ತನ್ನ ಪ್ರಿಯಕರನ ಜೊತೆ ಸೆಕ್ಸ್ ಮಾಡುತ್ತಿರುವುದನ್ನು ಸಾಕು ಅಜ್ಜಿ ನೋಡಿದ್ದಾರೆ ಎಂಬ ಕಾರಣಕ್ಕೆ ಕೊಲೆ ಮಾಡಿರುವ ಘಟನೆ ನಡೆದಿದೆ.
ನಿವೃತ್ತ ರೈಲ್ವೆ ನೌಕರರ ಪತ್ನಿ ಮುಮ್ತಾಜ್ (63) ಕೊಲೆಯಾಗಿದ್ದ ವೃದ್ಧೆ. ಪ್ರೇಮ್ ನಗರ ಪೊಲೀಸ್ ಠಾಣೆ ಪ್ರದೇಶದಲ್ಲಿ ಜೂನ್ 11ರಂದು ಈ ಘಟನೆ ನಡೆದಿತ್ತು. ಈ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಮೃತ ವೃದ್ಧೆಯ ಅಪ್ರಾಪ್ತ ಮೊಮ್ಮಗಳು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಆರೋಪಿ ಬಾಲಕಿಯ ತಂದೆ ಮೃತಪಟ್ಟಿದ್ದರು. ಅಲ್ಲದೇ, ತಾಯಿ ಬೇರೆಯವರ ಜೊತೆ ಓಡಿ ಹೋಗಿದ್ದಳು. ಹೀಗಾಗಿ ಅಪ್ರಾಪ್ತೆಯನ್ನು ಅಜ್ಜ – ಅಜ್ಜಿ ಸಾಕುತ್ತಿದ್ದರು. ಆದರೆ, ಈ ಬಾಲಕಿ ತರುಣ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಪ್ರತಿದಿನ ರಾತ್ರಿ ಮನೆಯಲ್ಲಿಯೇ ಭೇಟಿಯಾಗುತ್ತಿದ್ದರು. ಅಪ್ರಾಪ್ತೆ ಹುಡುಗಿ ತನ್ನ ಅಜ್ಜ-ಅಜ್ಜಿಗೆ ಊಟದಲ್ಲಿ ನಿದ್ದೆ ಮಾತ್ರ ಹಾಕುತ್ತಿದ್ದಳು. ಅದನ್ನು ತಿಂದು ಇಬ್ಬರು ನಿದ್ದೆ ಮಾಡುತ್ತಿದ್ದರು. ಆಗ ತನ್ನ ಪ್ರಿಯಕರ ತರುಣ್ ಫೋನ್ ಮಾಡಿ ಮನೆಗೆ ಕರೆಸಿಕೊಳ್ಳುತ್ತಿದ್ದಳು.
ಕೆಲವು ತಿಂಗಳಗಳ ಕಾಲ ಇದೇ ರೀತಿ ಆರೋಪಿಗಳಿಬ್ಬರು ಭೇಟಿ ಮಾಡುತ್ತಿದ್ದರು. ಆರೋಪಿ ತರುಣ್ ನಿದ್ದೆ ಮಾತ್ರೆಗಳನ್ನು ತಂದು ಕೊಟ್ಟಿದ್ದನು ಎಂಬುದು ಪೊಲೀಸ್ ವಿಚಾರಣೆಯಲ್ಲಿ ತಿಳಿದು ಬಂದಿದೆ.
ಒಂದು ದಿನ ಮುಮ್ತಾಜ್ ಕಡಿಮೆ ಆಹಾರವನ್ನು ಸೇವಿಸಿದ್ದರು. ಹೀಗಾಗಿ ಮುಮ್ತಾಜ್ ಸರಿಯಾಗಿ ನಿದ್ದೆ ಮಾಡಿಲ್ಲ. ಆದರೆ ಎಂದಿನಂತೆ ಮೊಮ್ಮಗಳು ಪ್ರಿಯಕರ ತರುಣ್ಗೆ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ನಂತರ ಬೆಡ್ ರೂಮಿನಲ್ಲಿ ಇಬ್ಬರು ಸೆಕ್ಸ್ ಮಾಡುತ್ತಿದ್ದರು. ಅಜ್ಜಿಗೆ ಎಚ್ಚರವಾಗಿ ರೂಮಿಗೆ ಹೋಗಿ ನೋಡಿದ್ದಾರೆ. ಆಗ ಇಬ್ಬರು ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಇದರಿಂದ ಭಯಗೊಂಡು ಇಬ್ಬರು ಅಜ್ಜಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
[6/21, 12:18 PM