ಹುಬ್ಬಳ್ಳಿ: ಸಿಎಂ ಯಡಿಯೂರಪ್ಪ ಸಮರ್ಥರಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಈಗ ಖಾಲಿ‌ ಇಲ್ಲ. ಯಡಿಯೂರಪ್ಪ ನವರು ಒಳ್ಳೆಯ ಕೆಲಸ‌ ಮಾಡುತ್ತಿದ್ದಾರೆ. ವಯಸ್ಸಿನ ಕಾರಣ ಹೇಳಿ‌ ಅವರನ್ನು ಕೆಳಗಿಳಿಸುವುದು ಸೂಕ್ತವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಪ್ರತಿಕ್ರಿಯಿಸಿದರು.
ಅವರು ಈ ಕುರಿತು ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಸಮರ್ಥರು ಇದ್ದಾರೋ‌ ಇಲ್ಲೊ ಅನ್ನೊದಕ್ಕಿಂತ, ಇದ್ದವರು ಸಮರ್ಥರಿದ್ದಾರೋ ಇಲ್ಲವೊ, ಅವರನ್ನು ಮುಂದುವರೆಸಬೇಕೋ, ಬೇಡವೋ ಎನ್ನುವ ಪ್ರಶ್ನೆಯಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಕಾಂಗ್ರೆಸ್ ನಲ್ಲಿ ಸಮರ್ಥರ ಸಂಖ್ಯೆ ಜಾಸ್ತಿ‌ ಇದೆ. ಅದಕ್ಕೆ ಅವರು ಬಡಿದಾಡುತ್ತಿದ್ದಾರೆ. ಅವರು ಬಡಿದಾಡುತ್ತಲೇ ಇರಲಿ ಎಂದು ವ್ಯಂಗ್ಯವಾಡಿದರು.
ನಮ್ಮ ಆದ್ಯತೆ, ಏನೇ ಇದ್ದರು ಕೊರೊನಾ ನಿಯಂತ್ರಿಸುವುದು.
ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ನಾನು ಕೇಂದ್ರ ಸಚಿವನಾಗಿರುವುದರಿಂದ ರಾಜ್ಯದ ಹಲವಾರು ಜನ ಭೇಟಿಯಾಗ್ತಾರೆ. ಕೇಂದ್ರದಿಂದ ಆಗಬೇಕಿರುವ ಕೆಲಸದ ಬಗ್ಗೆ ಕೇಳಿಕೊಂಡು ಬರ್ತಾರೆ ಎಂದರು.

Leave a Reply

Your email address will not be published.

You May Also Like

ಮಹಿಳೆಯಿಂದ ಕಾಂಗ್ರೆಸ್ ಮುಖಂಡನಿಗೆ ಥಳಿತ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಉತ್ತರ ಪ್ರದೇಶದ ಜಲೌನ್ ಜಿಲ್ಲಾಧ್ಯಕ್ಷ ಅನುಜ್ ಮಿಶ್ರಾ ಎಂಬ ವ್ಯಕ್ತಿಯ ಮೇಲೆಯೇ ಹಲ್ಲೆ ನಡೆದಿದೆ.

ನಮ್ಮ ಸಂಸ್ಕೃತಿ ಅನುಸರಿಸಿ : ಪ್ರಹ್ಲಾದ ಹೊಸಳ್ಳಿ

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ದೇಶದ ಧರ್ಮ, ಸಂಸ್ಕೃತಿಯನ್ನು ಅನುಸರಿಸಿ, ಯುವ ಜನತೆ ಒಕ್ಕಟ್ಟಿನಿಂದ ಸಮಾಜಕ್ಕೆ ಗೌರವ ತರುವಂತಹ ಕಾರ್ಯಚಟುವಟಿಕೆಗಳನ್ನು ಮಾಡಬೇಕೆಂದು ತಾಲೂಕ ಪಂಚಾಯತ ಮಾಜಿ ಸದಸ್ಯ ಪ್ರಹ್ಲಾದ ಹೊಸಳ್ಳಿ ಹೇಳಿದರು.

ಅಂಕಗಳಿಕೆಯ ವಿಷಯ ಜ್ಞಾನದಿಂದ ಮಾತ್ರ ಶಿಕ್ಷಣ ಪರಿಪೂರ್ಣವಾಗುವುದಿಲ್ಲ

ಸ್ಕೌಟ್ಸ್ ಮತ್ತು ಗೈಡ್ಸಗಳು ಸನ್ನಡತೆ, ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವದಂಥ ಶಿಕ್ಷಣ ಪಡೆದು ಭಾರತೀಯ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದು ಸ್ಕೌಟ್ಸ್ ಮತ್ತು ಗೈಡ್ಸ ತಾಲೂಕಾಧ್ಯಕ್ಷ ಶೀಥಲ ಬಾಗಮಾರ ಹೇಳಿದರು.

ಪಾದಯಾತ್ರೆ ಕೈಗೊಂಡ ಅಪ್ಪು ಅಭಿಮಾನಿಗೆ ಸನ್ಮಾನ

ವರದಿ : ವಿಠಲ‌ ಕೆಳೂತ್ ಮಸ್ಕಿ: ಬೆಂಗಳೂರುನಲ್ಲಿನ ಪುನೀತ ರಾಜಕುಮಾರ ಸಮಾಧಿವರೆಗೆ ಪಾದಯಾತ್ರೆ ನಡೆಸಿರುವ ಅಪ್ಪು…