ಈ ಅವಮಾನ ಎಂಬ ಮಾನಸಿಕ ಕ್ರಿಯೆ ಮಾನವನ ಜಗತ್ತಿನಲ್ಲಿ ಅದೆಷ್ಟು ಇತಿಹಾಸ ಸೃಷ್ಟಿಸಿದೆ. ಅದೊಂದು ಅವಮಾನದಿಂದಲೆ ಮಹಾಭಾರತ ಸೃಷ್ಟಿಯಾಯಿತು. ಚಾಣಕ್ಯನಿಗೆ ಆದ ಅವಮಾನವೆ ಮೌರ್ಯ ಸಾಮ್ರಾಜ್ಯ ಸೃಷ್ಟಿಯಾಗಲು ಕಾರಣವಾಯಿತು. ಇಂತಹ ಅವಮಾನಗಳೆ ಹೊಸ ಇತಿಹಾಸ ಸೃಷ್ಟಿಯಾಗಲು ಕಾರಣವಾಗುತ್ತವೆ. ಈ ಅವಮಾನವೆ ಆಂಧ್ರಪ್ರದೇಶದ ಈಗಿನ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿಗೆ ಇತಿಹಾಸ ಸೃಷ್ಟಿಸಲು ಕಾರಣವೂ ಆಯಿತು.
ಕ್ರಿಶ 2009ರಲ್ಲಿ ವೈ.ಎಸ್.ರಾಜಶೇಖರ ರೆಡ್ಡಿ, ಆಂಧ್ರದ ಮುಖ್ಯಮಂತ್ರಿಗಳಾಗಿದ್ದರು. ಇವರು ಜನಪರ ಆಡಳಿತ ನಡೆಸಿ, ಜನಪರ ಯೋಜನೆಗಳನ್ನು ಜಾರಿಗೆ ತಂದು ಜನನಾಯಕರಾಗಿದ್ದರು. ಆಂಧ್ರದಲ್ಲಿ ಜನತೆಯ ಆರಾದ್ಯ ದೈವವೂ ಆಗಿದ್ದರು. ಜೊತೆಗೆ ಕಾಂಗ್ರೇಸ್ ಪಕ್ಷದಲ್ಲಿ ಪ್ರಭಾವಿಯಾಗಿದ್ದು, ಕೇಂದ್ರದ ಕಾಂಗ್ರೇಸ್ ನಲ್ಲಿ ಪ್ರಭಾವಶಾಲಿ ನಾಯಕರಾಗಿದ್ದರು. ಆದರೆ ಇವರು 2009ರಲ್ಲಿ ಮರಣ ಹೊಂದಿದರು. ಇವರ ಮರಣದ ನಂತರ, ಬಹುತೇಕ ಶಾಸಕರು ಅವರ ಮಗ ಜಗನ್ ಮೋಹನ ರೆಡ್ಡಿ ಮುಖ್ಯಮಂತ್ರಿ ಮಾಡಲು ಆಸಕ್ತಿ ಹೊಂದಿದ್ದರು. ಆದರೆ ಕಾಂಗ್ರೆಸ್ ಪಕ್ಷದ ಹೈಕಮಾಂಡ ಇದನ್ನು ಒಪ್ಪಿಕೊಳ್ಳಲಿಲ್ಲ. ಬೇರೆಯವರನ್ನು ಮುಖ್ಯಮಂತ್ರಿ ಮಾಡಿದರು.

ಓದರ್ಪು ಯಾತ್ರೆ
ಜಗನ್ ಮೋಹನ ರೆಡ್ಡಿ ತಮ್ಮ ತಂದೆ ಮರಣ ಹೊಂದಿದಾಗ, ಕೃತಜ್ಞತೆ ಸಲ್ಲಿಸಿದ ಜನರಿಗೆ ಕೃತಜ್ಞತೆ ಸಲ್ಲಿಸಲು ಓದರ್ಪು ಯಾತ್ರೆ ಪ್ರಾರಂಭಿಸಿದರು. ತಂದೆ ವೈ.ಎಸ್. ರಾಜಶೇಖರ ರೆಡ್ಡಿಯವರ ನಿಧನಾನಂತರ ಆತ್ಮಹತ್ಯೆ ಮಾಡಿಕೊಂಡ ಜನತೆಯನ್ನು ಭೇಟಿ ಮಾಡಿ ಸಾಂತ್ವನ ಹೇಳುವುದು ಓದರ್ಪು ಯಾತ್ರೆಯ ಉದ್ದೇಶವಾಗಿತ್ತು. ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವವು ಯಾತ್ರೆಯನ್ನು ನಿಲ್ಲಿಸುವಂತೆ ನಿರ್ದೇಶಿಸಿತ್ತು, ಇದನ್ನು ನಿರಾಕರಿಸಿದ ಕಾರಣ, ಜಗನ್ಮೋಹನ್ ಮತ್ತು ಪಕ್ಷದ ಮಧ್ಯೆ ಬಿರುಕು ಮುಡಿತು.

ವೈಎಸ್‌ಆರ್ ಕಾಂಗ್ರೇಸ್ ಸ್ಥಾಪನೆ
ಜಗನ್ ಮೋಹನ ರೆಡ್ಡಿ, ಅವರ ತಾಯಿ ವಿಜಯಲಕ್ಷ್ಮಿ, ತಂಗಿ ಶರ್ಮಿಳಾರನ್ನು ಕರೆಸಿದ ಕಾಂಗ್ರೇಸ್ ಕೇಂದ್ರ ನಾಯಕತ್ವ ಇವರಿಗೆ ಕಠೋರ ಮಾತುಗಳಿಂದ ಟೀಕಿಸಿತು. ಓದರ್ಪು ಯಾತ್ರೆ ನಿಲ್ಲಿಸಿ, ಕಾಂಗ್ರೇಸ್‌ಗೆ ಆಗುವ ಹಾನಿ ನಿಲ್ಲಿಸಿ ಎಂದು ಕಠೋರ ಮಾತುಗಳನ್ನಾಡಿತು. ಅಲ್ಲದೆ ಘಂಟೆ ಗಂಟೆಲೆ ಕಾಯಿಸಿ ಸೌಜನ್ಯವನ್ನು ತೋರದೆ ತಾಯಿ, ತಂಗಿ ಮತ್ತು ತಮಗೆ ಮಾಡಿದ ಈ ಅವಮಾನಕ್ಕೆ ಸ್ವಾಭಿಮಾನಿಯಾದ ಜಗನ್ ಮೋಹನ್ ರೆಡ್ಡಿಯ ಸ್ವಾಭಿಮಾನಕ್ಕೆ ಧಕ್ಕೆ ಆದಂತಾಯಿತು. ಹೈಕಮಾಂಡ ಎಚ್ಚರಿಕೆಗೆ ಜಗನ್ ಒಪ್ಪಲಿಲ್ಲ. ಈ ಕಾರಣದಿಂದ ಜಗನ್ ರನ್ನು ಪಕ್ಷದಲ್ಲಿ ನಿರ್ಬಂಧಿಸಲಾಯಿತು. ಕಡೆಗಣಿಸಲಾಯಿತು. ಈ ಕಾರಣಕ್ಕೆ, ಕ್ರಿ ಶ 2011 ರಲ್ಲಿ ವೈಎಸ್‌ಆರ್ ಕಾಂಗ್ರೇಸ್ ಸ್ಥಾಪಿಸಿದರು. ಇದಕ್ಕೆ ಪ್ರತೀಕಾರ ಎನ್ನುವಂತೆಯೋ ಏನೋ ಜಗನ್ ಮೋಹನ ರೆಡ್ಡಿ ಮೇಲೆ ಅಕ್ರಮ ಆಸ್ತಿ ಪ್ರಕರಣವನ್ನು ಹಾಕಲಾಯಿತು. ಸುಮಾರು 18 ತಿಂಗಳ ಜೈಲುವಾಸ ಅನುಭವಿಸಿದ ಅವರು ಮಾನಸಿಕವಾಗಿ ಮತ್ತಷ್ಟು ಪ್ರಭಲರಾದರು.
ಜೈಲಿನಿಂದ ಬಿಡುಗಡೆಯ ನಂತರ ಸುಮಾರು 8 ವರ್ಷಗಳ ಕಾಲ ಆಂಧ್ರದಾದ್ಯಾoತ ಕಾಲಿಗೆ ಚಕ್ರ ಕಟ್ಟಿಕೊಂಡತೆ ತಿರುಗಿ ಪಕ್ಷ ಸಂಘಟಿಸಿದರು. ತಮ್ಮ ತಂದೆಯ ಬೆಂಬಲಿಗರನ್ನು ಕಾರ್ಯಕರ್ತರನ್ನು ಸಂಪರ್ಕಿಸಿ ಪಕ್ಷ ಸಂಘಟಿಸಿದರು. 9 ವರ್ಷಗಳ ಹಿಂದೆ ಆದ ಅವಮಾನ ಅವರಲ್ಲಿ ಪ್ರತೀಕಾರವಾಗಿ ಪರಿಣಮಿಸಿತ್ತು.

ಪ್ರಜಾ ಸಂಕಲ್ಪ ಯಾತ್ರೆ
ಕ್ರಿಶ 2004ರಲ್ಲಿ ರಾಜಶೇಖರ ರೆಡ್ಡಿ ಹಾಗೂ 2014ರಲ್ಲಿ ಚಂದ್ರಬಾಬು ನಾಯ್ಡುರವರು ಕೈಗೊಂಡು ಅಧಿಕಾರದ ಗದ್ದುಗೆಗೆ ಏರಲು ಸಹಾಯಕವಾದ ಯಾತ್ರೆಗಳಂತೆ, ಜಗನ್ ಮೋಹನ ರೆಡ್ಡಿ ಕೂಡಾ ‘ಆಂಧ್ರದ 13 ಜಿಲ್ಲೆ ಒಳಗೊಂಡAತೆ 341 ದಿನಗಳ ಯಾತ್ರೆ ಕೈಗೊಂಡರು ಈ ಯಾತ್ರೆ ನವೆಂಬರ್ 6, 2017 ರಂದು ಪ್ರಾರಂಭಿಸಲಾಯಿತು. ಜಗನ್ ಮೋಹನ ರೆಡ್ಡಿ 3648 ಕಿ.ಮೀ. ಮಾರ್ಗದ ” ಪ್ರಜಾ ಸಂಕಲ್ಪ ಯಾತ್ರೆ” ಎಂಬ ಹೆಸರಿನ ಪಾದಯಾತ್ರೆ ಆರಂಭಿಸಿದರು. ಈ ಪಾದಯಾತ್ರೆ ಜಗನ್ ಮೋಹನ ರೆಡ್ಡಿಯನ್ನು ಜನನಾಯಕನನ್ನಾಗಿಸಿತು. ಈ ಯಾತ್ರೆಯಿಂದ ಜನಬೆಂಬಲ ಹಾಗೂ ಜನರ ಸಮಸ್ಯೆಗಳನ್ನು ಸಮೀಪದಿಂದ ಅನುಭವಿಸುವಂತಾಯಿತು. ಕಾರ್ಯಕರ್ತರಲ್ಲಿ ಹುರುಪು-ಚೈತನ್ಯ ಮೂಡಿಸಿತು. 2019 ಚುನಾವಣೆಗೂ ಮೊದಲೆ ನಡೆದ ಈ ಯಾತ್ರೆ ಚುನಾವಣ ಪ್ರಚಾರ ಯಾತ್ರೆಯಂತೆ ಪ್ರಭಾವ ಬೀರಿತು.

ಮಹಾ ಸಂಗ್ರಾಮ
ಏಪ್ರಿಲ್ ಮತ್ತು ಮೇ 2019 ರಲ್ಲಿ ನಡೆದ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆ ಚುನಾವಣೆಯಲ್ಲಿ ಆಂಧ್ರಪ್ರದೇಶದ ಒಟ್ಟು 175 ವಿಧಾನಸಭಾ ಸ್ಥಾನಗಳಲ್ಲಿ 151 ಸ್ಥಾನಗಳನ್ನು ಮತ್ತು 25 ಲೋಕಸಭಾ ಕ್ಷೇತ್ರಗಳಲ್ಲಿ 22 ಸ್ಥಾನಗಳನ್ನು ವೈಎಸ್‌ಆರ್ ಕಾಂಗ್ರೇಸ್ ಗೆದ್ದು ಅಭೂತಪೂರ್ವ ಸಾಧನೆ ಮಾಡಿತು. ಶತಮಾನ, ಅರ್ಧ ಶತಮಾನಗಳಷ್ಟು ಇತಿಹಾಸ ಹೊಂದಿದ ಪಕ್ಷ ಮತ್ತು ನಾಯಕರನ್ನು ಧೂಳಿಪಟ ಮಾಡಿ’ ಅಧಿಕಾರ ಪಡೆದದ್ದು ಕಡಿಮೆ ಸಾಧನೆ ಅಲ್ಲ. 2019 ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್ ಮತ್ತು ಬಿಜೆಪಿಗಳಿಗೆ ಖಾತೆ ತೆರೆಯಲೂ ಅವಕಾಶ ನೀಡಲಿಲ್ಲ,
ಚುನಾವಣ ಪ್ರಣಾಳಿಕೆಯಲ್ಲಿ ನೀಡಿದ ಜನಪರ ಯೋಜನೆಗಳಾದ “ನವರತ್ನ ಯೋಜನೆ ” ಜನರೊಂದಿಗಿನ ಒಡನಾಟ, ಸರಳ ಜೀವನ, ಗೆಲ್ಲಬೇಕೆಂಬ ಛಲ, “ಬೇಕು ಜಗನ್, ಬರಬೇಕು ಜಗನ್” (ರಾವಾಲಿ ಜಗನ್,ಕಾವಾಲಿ ಜಗನ್) ಘೋಷಣೆ. ಟಿಡಿಪಿ ಆಡಳಿತ ವಿರೋಧಿ ಅಲೆ’ ಬ್ರಷ್ಟಾಚಾರ. ರಾಜಶೇಖರ ರೆಡ್ಡಿ ಮೇಲಿನ ನಂಬಿಕೆ & ವಿಶ್ವಾಸ. ಇವೆಲ್ಲದರ ಪರಿಣಾಮದಿಂದ ಬಹುಮತ ಪಡೆದ ವೈಎಸ್‌ಆರ್ ಕಾಂಗ್ರೇಸ್ ಪಕ್ಷದ ಮುಖ್ಯಮಂತ್ರಿಯಾಗಿ ಮೇ 30, 2019 ರಂದು ಅಧಿಕಾರ ಸ್ವೀಕರಿಸಿದರು

ಪದಗ್ರಹಣ
ಮೆ.30, 2019 ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೂ ವಿಶಿಷ್ಟ ಇತಿಹಾಸ ಆಂಧ್ರದಲ್ಲಿ ನಿರ್ಮಿಸಿದರು. ಈ ಮೊದಲು ಅಧಿಕಾರದಲ್ಲಿದ್ದ ಚಂದ್ರಬಾಬು ರವರು ಇಬ್ಬರು ಉಪ ಮುಖ್ಯಮಂತ್ರಿ ಮಾಡಿದ್ದರೆ, ಜಗನ್ ಮೋಹನ ರೆಡ್ಡಿ ರವರು 5 ಜನ ಉಪಮುಖ್ಯಮಂತ್ರಿ ಮಾಡಿದರು. ಈ 5 ಜನ ಉಪಮುಖ್ಯಮಂತ್ರಿಗಳು 5 ಸಮುದಾಯಗಳಿಗೆ ಸೇರಿದವರಾಗಿದ್ದು ವಿಶೇಷವಾಗಿದೆ. ಅಲ್ಲದೆ 25 ಜನರ ಮಂತ್ರಿಮAಡಲ ರಚಿಸಿದ್ದಾರೆ. ಇವರೆಲ್ಲರ ಈ ಅಧಿಕಾರ 30 ತಿಂಗಳುಗಳಿಗೆ ಸೀಮಿತ ಗೊಳಿಸಿದ್ದಾರೆ. ಇದಾದ ನಂತರ ಈಗಿನ ಮಂತ್ರಿಗಳು & ಉಪಮುಖ್ಯಮಂತ್ರಿಗಳನ್ನು ಕಡಿಮೆ ಮಾಡಿ ಮತ್ತೊಬ್ಬರಿಗೆ ಅವಕಾಶ ನೀಡಲು ಬದ್ಧರಾಗಿದ್ದಾರೆ. ಅವಮಾನದಿಂದ ಅಧಿಕಾರಕ್ಕೆ ಏರುವವರೆಗಿನ ಹೋರಾಟ ಅವರ್ಣನೀಯವಾದದ್ದು, ಆಂಧ್ರದಲ್ಲಿ ಒಂದು ಕಾಲದಲ್ಲಿ ಪ್ರಭಾವಶಾಲಿ ಯಾಗಿದ್ದ ಕಾಂಗ್ರೆಸ್ ಪಕ್ಷವನ್ನು ಕಳೆದ 8-10 ವರ್ಷಗಳ ಕಠಿಣ ಪರಿಶ್ರಮ, ಗುರಿ ಕಡೆಗಿನ ಹೋರಾಟ’ ಸ್ವಾಭಿಮಾನಕ್ಕೆ ಆದ ಪೆಟ್ಟು, ಪ್ರತೀಕಾರದಿಂದಾಗಿ ಜಗನ್ ಇಂದು ಕಾಂಗ್ರೇಸ್ ಅನ್ನು ಹೇಳಹೆಸರಿಲ್ಲದಂತೆ ಧೂಳಿಪಟ ವಾಗಿಸಿದ್ದಾರೆ. ಇಂದು ಆಂಧ್ರದಲ್ಲಿ ಕಾಂಗ್ರೇಸ್ ಪಕ್ಷ ರಾಜ್ಯದ ವಿಭಜನೆ ಮತ್ತು ಜಗನ್ ರವರ ಹೋರಾಟದಿಂದ ಒಂದೂ ಸ್ಥಾನ ಗೆಲ್ಲದಂತಾಗಿರುವುದು ಸೋಜಿಗ. ಇದೆ ಮೇ 30ಕ್ಕೆ ವಾಯ್.ಎಸ್ ಜಗಮೋಹನ ರೆಡ್ಡಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿವೆ. ಇಲ್ಲಿಯವರೆಗೆ ಜನೋಪಕಾರಿ ಕಾರ್ಯದಿಂದ ಜನನಾಯಕನ ಸ್ಥಾನದಲ್ಲಿಯೇ ಇದ್ದಾರೆ. ಆದರೆ, ಯಾವುದೇ ನಾಯಕ ನಾಯಕನಾಗೇ ಉಳಿಯಬೇಕಾದರೆ ಸಿಂಹಾವಲೋಕನ ಮಾಡಿಕೊಳ್ಳಲೇ ಬೇಕು ಅಂದಾಗ ನಾಯಕ ಮಹಾ ನಾಯಕನಾಗೋದು.
ಇತಿಹಾಸವನ್ನು ಗಮನಿಸಿದಾಗ ಪ್ರತಿಯೊಂದು ಅವಮಾನಕ್ಕೆ ಪ್ರತೀಕವಾಗಿ ಒಂದು ಸಂಗ್ರಾಮ ನಡೆದಿದೆ. ಪ್ರತಿ ‘ಸಂಗ್ರಾಮದಲ್ಲಿ ಒಬ್ಬ ನಾಯಕನು ಉದ್ಬವಿಸಿರುವುದನ್ನು ಇತಿಹಾಸದಲ್ಲಿ ಗಮನಿಸಿರುತ್ತಲೇ ಇರುತ್ತೇವೆ.
ಅಲ್ಲವೆ?

ಬಸವರಾಜ ಪಲ್ಲೇದ, ಉಪನ್ಯಾಸಕರು ಅಬ್ಬಿಗೇರಿ,
Leave a Reply

Your email address will not be published.

You May Also Like

ಮೋದಿ ಸರ್ಕಾರಕ್ಕೆ ಒಂದು ವರ್ಷ: ದೇಶವಾಸಿಗಳಿಗೆ ಪ್ರಧಾನಿ ಪತ್ರ

ಕೇಂದ್ರದ ನರೇಂದ್ರ ಮೋದಿ ನರೆತೃತ್ವದ ಸರ್ಕಾರ ಒಂದು ವರ್ಷ ಅವಧಿ ಪೂರ್ಣಗೊಳಿಸಿದೆ. ಈ ಹಿನ್ನೆಲೆ ಪ್ರಧಾನಿ…

ಹಠಯೋಗಿ ಶ್ರೀ ಕೋಡಿಕೊಪ್ಪದ ಹುಚ್ಚೀರಪ್ಪಜ್ಜನವರು

ಕನ್ನಡ ನಾಡಿನ ಪುಣ್ಯವೋ ಏನೋ ಅನೇಕ ಜನ ತಪಸ್ವಿಗಳು, ಯೋಗಿಗಳು, ಶರಣರು, ಸಿದ್ಧರು, ಹಠಯೋಗಿಗಳು ಮೊದಲಾದ ಮಹಾಮಹಿಮರು ಉದಯಿಸಿ

ಲಾಕ್ ಡೌನ್ ಫ್ಲಾಪ್:ಸೋಂಕು ಸೊರಗಲಿಲ್ಲ, ಎಕಾನಮಿ ಏಳಲಿಲ್ಲ!

ಬೆಂಗಳೂರು: ಲಾಕ್ ಡೌನ್ ಉದ್ದೇಶ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವುದು. ವಾಣಿಜ್ಯ ಸೇರಿದಂತೆ ಎಲ್ಲ ಆರ್ಥಿಕ ಚಟುವಟಿಕೆಗಳು…

ಆನ್‍ ಲೈನ್ ಪರೀಕ್ಷೆಗಳು ಬೇಡ: ಶಿಕ್ಷಣದಲ್ಲಿ ಡಿಜಿಟಲ್ ವಿಭಜನೆ ಬರಬಾರದು

ವಿದ್ಯಾರ್ಥಿಗಳಿಗೆ ಇಂಟರ್ನೆಟ್‍ ಲಭ್ಯತೆ ಇರುವುದಿಲ್ಲ ಮತ್ತು ಅವರು ಆನ್‍ ಲೈನ್‍ ಶಿಕ್ಷಣ/ ಪರೀಕ್ಷೆಗಳಲ್ಲಿ ಭಾಗವಹಿಸುವುದು ಸಾಧ್ಯವಾಗುವುದಿಲ್ಲ ಎಸ್ಎಫ್ಐ ಕೇಂದ್ರ ಸಮಿತಿ ತಿಸ್ಕರಿಸಿದೆ.