ಪ್ರತಿ ಅಗುಳಿನ ಮೇಲೆಯೂ ತಿನ್ನುವವರ ಹೆಸರು ಬರೆದಿರುತ್ತದೆ ಎಂಬುದು ನಮ್ಮ ಹಿರಿಯರ ಮಾತು ಅಕ್ಷರಶಃ ನಿಜ. ಅಂತೆಯೇ ಇದನ್ನು ತಮ್ಮಗೆಲ್ಲರಿಗೂ ಇನ್ನೊಮ್ಮೆ ನೆನಪಿಸುತ್ತಾ, ಇತ್ತೀಚಿನ ದಿನಗಳಲ್ಲಿ ಹಸಿವು ಇರುವ ಯಾವ ಜೀವಿಗೂ ಆಹಾರದ ಪ್ರಾಮುಖ್ಯತೆಯ ಬಗ್ಗೆ ಹೇಳಿಕೊಡುವ ಅವಶ್ಯಕತೆ ಇರುವುದಿಲ್ಲ.

ಯಾಕೆಂದರೆ ಪ್ರತಿ ಜೀವಿಯ ಜೀವನಾಧಾರವೇ ಅದರ ಹೊಟ್ಟೆಯ ಹಸಿವು, ಆಹಾರ ಇಲ್ಲದೇ ಹೋದರೆ ಪ್ರಾಣ ಪಕ್ಷಿಯೇ ಹಾರಿಹೋಗುವುದಂತು ಗ್ಯಾರಂಟಿ ಎನ್ನುವದಂತು ದಿಟ್ಟ ಎನ್ನುವ ವಿಚಾರಗಳನ್ನು ತಮ್ಮ ಮುಂದೆ ಹಂಚಿಕೊಳ್ಳುತ್ತ, ಇಂದಿನ ದಿನಮಾನಗಳಲ್ಲಿ ಮನುಷ್ಯರಿಗೆ ಆಹಾರ ಅವಶ್ಯಕತೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1945 ರಲ್ಲಿ ವಿಶ್ವಸಂಸ್ಥೆಯ ಕೃಷಿ ವಿಭಾಗದ ಸ್ಥಾಪನೆಯ ಸವಿ ನೆನಪಿಗಾಗಿ ಅ.16 ರ ಈ ದಿನವನ್ನು ಹಸಿವಿನ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಯಿತು. 1981 ರ ನಂತರ ಈ ದಿನವನ್ನು ವ್ಯಾಪಕವಾಗಿ ವಿಶ್ವ ಆಹಾರ ದಿನವನ್ನಾಗಿ ವಿಶ್ವಾದ್ಯಾಂತ ಆಚರಣೆ ಮಾಡುವ ಮೂಲಕ ಜಾರಿಗೆ ತರಲಾಯಿತು. ಅಂದರೆ ಅ.16 ರಂದು ವಿಶ್ವಾದ್ಯಾಂತ ವಿಶ್ವ ಆಹಾರ ದಿನವನ್ನಾಗಿ ನಾವೆಲ್ಲರೂ ಸೇರಿ ಆಚರಣೆ ಮಾಡುತ್ತಿದ್ದೇವೆ. ಆದಕಾರಣ ಈ ದಿನದ ನಿಮಿತ್ತ ಭಕ್ಷ್ಯ ಭೋಜನವನ್ನು ಸವಿದು, ಆಹಾರ ಸಂಸ್ಕೃತಿಯನ್ನು ಸಂಭ್ರಮದಿಂದ ನೆನಪಿಸಿ, ತಿಂದು ತೇಗಲು ಈ ದಿನವನ್ನು ಆಚರಿಸಲು ಕರೆ ಕೊಡಲಾಗಿದೆ ಎಂದು ಭಾವಿಸಿದ್ದರೆ. ಅದು ನೂರಕ್ಕೆ ನೂರರಷ್ಟು ತಪ್ಪು. ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ಕುರಿತು ಜಾಗೃತಿ, ಅಭಿಯಾನ ಜೊತೆಗೆ ಹಸಿವಿನಿಂದ ಸಾಯುವವರ ನೋವಿನ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ, ತಲುಪಿಸುವ ಏಕೈಕ ಉದ್ದೇಶದ ಜೊತೆಗೆ ಆಹಾರ ಸಮಸ್ಯೆ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮತ್ತು ಪೌಷ್ಟಿಕ ಆಹಾರ ಮಹತ್ವದ ಬಗ್ಗೆ ಜನತೆಗೆ ಜನಜಾಗೃತಿ ಅಭಿಯಾನ, ಗೋಷ್ಠಿ, ವಿಚಾರ ಸಂಕೀರ್ಣ ಹಾಗೂ ಇನ್ನಿತರ ಕಾರ್ಯಕ್ರಮಗಳ ಮೂಲಕ ತಿಳಿ ಹೇಳಲು ಆಹಾರ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಇನ್ನು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರದ ಸಮಸ್ಯೆ ತೀವ್ರವಾಗಿದ್ದು, ಸಾಮಾಜಿಕ, ಆರ್ಥಿಕ ಅಂಶಗಳು ಆಹಾರ ಮುಖ್ಯ ಕಾರಣಗಳಾಗಿವೆ. ಇದು ಅಭಿವೃದ್ಧಿಯ ದೃಷ್ಟಿಯಿಂದಲೂ ಹಿನ್ನಡೆ ಉಂಟುಮಾಡುತ್ತಿದೆ. ಹಾಗಾಗಿ ಈಗಿನ ದಿನಗಳಲ್ಲಿ ಒಟ್ಟು ವಿಶ್ವ ಜನಸಂಖ್ಯೆಯ ಅಂದರೆ ಸುಮಾರು 760-770 ಕೋಟಿ ಜನಸಂಖ್ಯೆಯಲ್ಲಿ 125-130 ಕೋಟಿಗೂ ಹೆಚ್ಚು ಜನ ತಾವು ಬಯಸುವ ಆಹಾರ ಸೇವಿಸಲು ಸಾಧ್ಯವಾಗುತ್ತಿಲ್ಲ. ಸುಮಾರು 28-30 ಕೋಟಿಗೂ ಹೆಚ್ಚು ಜನಸಂಖ್ಯೆಗೆ ಕನಿಷ್ಠ ಪ್ರಮಾಣದ ಊಟ ಸಿಗುತ್ತಿಲ್ಲ ಎನ್ನುವ ವಾಸ್ತವದ ವಿಚಾರವನ್ನು ಮುಂದೆ ವ್ಯಕ್ತಪಡಿಸುತ್ತಾ, ಜೊತೆಗೆ ಹಸಿವಿನ ಹಾಹಾಕಾರದ ಕಾರಣದಿಂದಾಗಿ ಹಾಗೂ ಅಪೌಷ್ಟಿಕತೆಯಿಂದ ನರಳುತ್ತಿರುವವರು ಕೋಟಿ ಕೋಟಿ ಜನರು, ನಮ್ಮ ನಡುವೆ ದಿನನಿತ್ಯ ಸಾವು – ನೋವಿನ ನಡುವೆ ಬದುಕುತ್ತಿರುವ ಸನ್ನಿವೇಶಗಳು ಸಹ ಕಾಣುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ದೇಶದ ಆಹಾರ ಸಮಸ್ಯೆಯ ಸ್ಥಿತಿ ಗತಿ ಬಗೆ ಇಲ್ಲಿ ವಿವರಿಸುವ ಸಣ್ಣ ಪ್ರಯತ್ನ ಮಾಡಲಾಗಿದೆ.

ಭಾರತದಲ್ಲಿ ಹಸಿವಿನಿಂದ ಸಾಯುತ್ತಿರುವವರ ಸಂಖ್ಯೆ ಅಪರೂಪ ಇರಬಹುದು.ಆದರೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಮತ್ತು ವಯೋವೃದ್ದರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.ಇವರ ಬಗ್ಗೆ ಯೋಚನೆ ಮಾಡುವುದು ಒಂದು ಸಮಸ್ಯೆ ಆದರೆ ಇನ್ನೊಂದು ಕಡೆಯಲ್ಲಿ ಉಳ್ಳುವರರ ಶ್ರೀಮಂತಿಕೆಯಿಂದ ಸಾಕಷ್ಟು ಆಹಾರ ಪದಾರ್ಥಗಳು ದಿನನಿತ್ಯ ಚರಂಡಿಗೆ ಬಿದ್ದು ಹಾಳಾಗುತ್ತಿವೆ. ಹಾಗೆ ಹಾಳು ಮಾಡುವ ಕೈಗಳಿಗೆ ಕಡಿವಾಣ ಹಾಕುವುದಕ್ಕೆ ಅಂದರೆ ಮೂಗು ದಾರ ಹಾಕುವ ಪದ್ದತಿಯೂ ಸಹ ಕ್ಷೀಣಿಸುತ್ತಿದೆ ಎಂದರೆ ಎಂತಹ ಆಪತ್ತು ಕಾಲ ಬಂದAತಾಗಿ ಎನ್ನಬಹುದಾಗಿದೆ. ಇನ್ನು

ಪ್ರತಿನಿತ್ಯ ತಾವು ಇಷ್ಟಪಟ್ಟು ತಿನ್ನಲು ಬಯಸುವ ಆಹಾರದ ಆಯ್ಕೆಯ ಸ್ವಾತಂತ್ರ‍್ಯ ಇರುವವರು ಬಹುಶಃ ಶ್ರೀಮಂತ ಹಾಗೂ ರಾಜಕೀಯ ಅಲ್ಲದೆ ಉನ್ನತ ವರ್ಗದ ಅಧಿಕಾರಗಳು ಮಾತ್ರ ಎನ್ನಬಹುದು ಹಾಗೂ ಅವರಿಗೆ ಮಾತ್ರ ಸಾಧ್ಯವಾಗುತ್ತಿರಬಹುದು.ಉಳಿದವರು ಬಹುತೇಕ ಹಬ್ಬ ಅಥವಾ ಸಮಾರಂಭಗಳನ್ನು ಹೊರತುಪಡಿಸಿ ಬೇರೆ ಸಮಯದಲ್ಲಿ ಅವರಿಗೆ ಇಷ್ಟವಾದ ಆಹಾರ ಪದಾರ್ಥಗಳು ದೊರೆಯುವುದು ಅಸಾಧ್ಯವಾಗಿದೆ.ಹೀಗಾಗಿ ಕಡು ಬಡವರು ಇಂದಿನ ದಿನಗಳಲ್ಲಿ ಆಸೆ ಪಟ್ಟ ಆಹಾರ, ತಿಂಡಿ ತಿನ್ನಿಸು ತಿನ್ನುವುದು ಬಲು ಅಪರೂಪವೇ ಎನ್ನಬಹುದಾಗಿದೆ ಬಂಧುಗಳೆ.

ಹಾಗಾದರೆ ಆಹಾರ ಸಮಸ್ಯೆಗೆ ಕಾರಣ ಯಾರು? ಪ್ರಕೃತಿಯೇ ಆಹಾರದ ಕೊರತೆಗೆ ಕಾರಣವೇ ? ಇಲ್ಲ ನಮ್ಮ ಆಹಾರದ ಬೇಡಿಕೆ ಪೂರೈಸಲು ಅದಕ್ಕೆ ಸಾಧ್ಯವಾಗುತ್ತಿಲ್ಲವೇ? ಇವೆಲ್ಲ ಪ್ರಶ್ನೆಗಳು ನಮ್ಮ ಮುಂದೆ ಬಂದು ನಿಲ್ಲುತ್ತವೆ ಅಲ್ಲವೇ?.ಈ ಕ್ಷಣದಲ್ಲಿ ವಿಶ್ವದ ಪ್ರತಿ ಮನುಷ್ಯರಿಗೂ ಅವಶ್ಯಕತೆಯಷ್ಟು ಆಹಾರ ಪೂರೈಸುವ ಸಾಮರ್ಥ್ಯ ಪ್ರಕೃತಿಗೆ ಖಂಡಿತ ಇದೆ. ಆದರೆ ಉತ್ಪಾದನೆ, ಸಂಗ್ರಹ, ಪೂರೈಕೆ, ಹಂಚಿಕೆ, ಸದುಪಯೋಗ ಇವುಗಳ ನಡುವೆ ಸಮನ್ವಯ ಸಾಧ್ಯವಾಗದೆ ಎಂದಿನAತೆ ಉಳ್ಳವರ ದುರಹಂಕಾರಕ್ಕೆ, ದುರ್ಬಲರು ಆಹಾರವಿಲ್ಲದಂತೆ ಪರದಾಡುವ ಪರಿಸ್ಥಿತಿ ಸಧ್ಯ ನಿರ್ಮಾಣವಾಗಿದೆ ಎಂದರೆ ತಪ್ಪಾಗಕ್ಕಿಲ್ಲ. ಆದಕಾರಣ ಇಂದಿನ ದಿನಮಾನಗಳಲ್ಲಿ ಆಹಾರದ ಕೊರತೆ ಹೆಚ್ಚಾಗಿ ಕಾಡುತ್ತಿದೆ ಎನ್ನಬಹುದು.

ಕ್ರಮಬದ್ಧವಲ್ಲದ ಅವೈಜ್ಞಾನಿಕ ಕೃಷಿ ವಿಧಾನದಿಂದ ಒಂದಷ್ಟು, ಸಾಗಾಣಿಕೆ ಮತ್ತು ಸಂಗ್ರಹದ ವ್ಯವಸ್ಥೆಯಿಲ್ಲದೆ ಇನ್ನೊಂದಿಷ್ಟು, ಮಾರುಕಟ್ಟೆಯ ದುರಾಸೆ ಮತ್ತು ಅವ್ಯವಸ್ಥೆಗೆ ಮತ್ತೊಂದಿಷ್ಟು ಇದರ ಜೊತೆಗೆ ಮನುಷ್ಯರ ನಿರ್ಲಕ್ಷ್ಯ ಮತ್ತು ದುರಹಂಕಾಕ್ಕೆ ಸಾಕಷ್ಟು ಆಹಾರ ವ್ಯರ್ಥವಾಗುತ್ತಿದೆ ಎಂದರೆ ಅಶೊಕ್ತಿಯಂತು ಅಲ್ಲವೇ ಅಲ್ಲ. ಒಂದು ಅಂದಾಜಿನಂತೆ ಭಾರತ ದೇಶದಲ್ಲಿ ನಡೆಯುವ

ಮದುವೆ ಮುಂತಾದ ಸಾರ್ವಜನಿಕ ಸಮಾರಂಭಗಳು ಮುಗಿದ ಮೇಲೆ ಊಟದ ನಂತರ ಎಲೆ ಅಥವಾ ತಟ್ಟೆಯಲ್ಲಿ ಸುಮಾರು ಶೇಕಡಾ 20-30 ರಷ್ಟು ಆಹಾರವು ವ್ಯರ್ಥವಾಗಿ ಉಳಿಯುತ್ತದೆ ಮತ್ತು ಅದನ್ನು ಕಸದ ಬುಟ್ಟಿಗೆ ಸುರಿಯಲಾಗುತ್ತದೆ ಎಂಬುದು ನಮ್ಮೆಗೆಲ್ಲರಿಗೂ ತಿಳಿದ ವಿಚಾರವಲ್ಲದೇ ಮತ್ತೇನೂ ಅಲ್ಲ, ಹೌದು ತಾನೇ. ಇನ್ನು ಹೋಟೆಲು ಮತ್ತು ಖಾಸಗಿಯಾಗಿ ಮನೆಗಳಲ್ಲಿ ವ್ಯರ್ಥವಾಗುವ ಆಹಾರಕ್ಕೆ ಸರಿಯಾಗಿ ಲೆಕ್ಕವೇ ಸಿಗುವುದಿಲ್ಲ. ಹೀಗೆ ನಾನಾ ರೀತಿಯಲ್ಲಿ ನಾವೆಲ್ಲರೂ ಆಹಾರ ಪದಾರ್ಥಗಳನ್ನು ಹಾಳು ಮಾಡುತ್ತಾ,ಆಹಾರ ಸಮಸ್ಯೆಗೆ ಪ್ರಮುಖವಾಗಿ ಕಾರಣವಾಗಿದ್ದೇವೆ.

ಆದರೆ ನಾವು ತಿನ್ನುವ ಒಂದು ಹೊತ್ತಿನ ಸಾಧಾರಣ ಊಟ ತಯಾರಾಗಲು ಬಿತ್ತನೆಯಿಂದ ಅಡುಗೆ ಮನೆಯವರೆಗೆ ಎಷ್ಟೊಂದು ಪ್ರಕೃತಿಯ ವಸ್ತುಗಳು ಉಪಯೋಗಿಸಬೇಕು, ಅದು ಬೆಳೆಯಲು ಎಷ್ಟು ಸಮಯ ಬೇಕು, ಅದಕ್ಕಾಗಿ ಎಷ್ಟೊಂದು ಮಾನವರ ಶ್ರಮ ಬೇಕು ಎಂಬುದು

ಅರಿವು ಸಹ ನಮ್ಮಲ್ಲಿ ಇರದೇ ಇರುವುದು ಅತ್ಯಂತ ನೋವಿನ ದುರಂತ ಎನ್ನಬಹುದು. ಇನ್ನೂ ಎಷ್ಟೊಂದು ಸಂಪನ್ಮೂಲಗಳು ಹೇರಳವಾಗಿ ಉಪಯೋಗವಾಗಿರುತ್ತದೆ ಎಂಬುದನ್ನು ಒಮ್ಮೆ ಯೋಚಿಸಿ ನೋಡುವುದು ಅವಶ್ಯಕತೆ ಇದೆ. ಅಂದಾಗಲೇ ನಮಗೆ ಅನ್ನದ ಹಸಿವಿನ ಮಹತ್ವ ಅರ್ಥವಾಗುತ್ತದೆ.

ಮೇಲ್ನೋಟಕ್ಕೆ 60 ರೂಪಾಯಿಗೆ ಒಂದು ಊಟ ಸಿಗಬಹುದು. 60 ರೂ ಗಳು ಸಂಪಾದನೆಯೂ ಕೆಲವರಿಗೆ ಸುಲಭ ಇರಬಹುದು. ಆದರೆ ಅದರಲ್ಲಿ ನಾವು ಉಪಯೋಗಿಸುವ ಆಹಾರ ಮಾತ್ರ ತುಂಬಾ ಮಹತ್ವದ ಮೌಲ್ಯವುಳ್ಳದ್ದು ಸ್ನೇಹಿತರೆ, ಅದನ್ನು ಮರೆತು ಆಹಾರ ಪೋಲು ಮಾಡುವುದು ಅಂದರೆ ಒಬ್ಬರ ಆಹಾರ ಕಸಿದುಕೊಂಡAತೆ ಎಂಬುದು ನೆನಪಿರಲಿ.

ಸದ್ಯ ಆಹಾರದ ಕೊರತೆಯಿಂದ ಆಗುತ್ತಿರುವ ಸಮಸ್ಯೆಯ ಪ್ರಕಾರ, ಒಂದು ವರದಿ ಹೀಗಿದೆ ದೇಶದಲ್ಲಿ 20 ಕೋಟಿಗೂ ಅಧಿಕ ಜನರು ಹಸಿವಿನಿಂದ ಬಳಲುತ್ತಿದ್ದಾರೆ. 5 ವರ್ಷದೊಳಗಿನ ಶೇ.20.8ರಷ್ಟು ಮಕ್ಕಳು ಆಹಾರದ ಕೊರತೆಯಿಂದ ಕಡಿಮೆ ತೂಕ ಹೊಂದಿದ್ದಾರೆ. ಹಾಗೆ ಶೇ.37.9 ರಷ್ಟು 5 ವರ್ಷದೊಳಗಿನ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದೆ. ಹಾಗೂ ಶೇ.51.4ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆ ಅಧಿಕವಾಗಿ ಕಾಡುತ್ತಿದೆ.ಇವುಗಳಲ್ಲದೆ ಬಹಳ ಜನರಿಗೆ ಬೇಕಾಗುವಷ್ಟು ಸತ್ವಯುತ ಮತ್ತು ಪೌಷ್ಟಿಕಾಂಶ ಯುಕ್ತ ಆಹಾರ ಸಧ್ಯ ಲಭಿಸುತ್ತಿಲ್ಲ. ಜೊತೆಗೆ ಸುಮಾರು ಜನರಿಗೆ 2050ರ ವೇಳೆಗೆ ಆರೋಗ್ಯಕರ ಆಹಾರದ ಕೊರತೆ ಉಂಟಾಗಲಿದೆ ಎಂಬ ಮಾಹಿತಿ. ಇನ್ನು ಕೋಟ್ಯಂತರ ಮಕ್ಕಳು ಸೇರಿದಂತೆ ಹಿರಿಯರು ಅಪೌಷ್ಟಿಕಾಂಶದಿಂದ ಬಳಲುತ್ತಿರುವವರು ಇದ್ದಾರೆ. ಹೀಗೆ ಹತ್ತು ಹಲವು ಸಮಸ್ಯೆಗಳು ನಮ್ಮ ಆಹಾರದ ಬಳಕೆಯಲ್ಲಿ ಎದ್ದು ಕಾಣುತ್ತದೆ.

ಆಹಾರ ಸಮಸ್ಯೆ ತಡೆಗಟ್ಟುವ ವಿಧಾನ/ಅಭಿಯಾನ

ಕೃಷಿ ಅಭಿವೃದ್ಧಿ ಮೂಲಕ ಜಗತ್ತಿನಾದ್ಯಂತ ಹಸಿವು ಮುಕ್ತ ಸಮಾಜ ನಿರ್ಮಾಣ ಮತ್ತು ಬಡತನ ನಿರ್ಮೂಲನೆ ಮಾಡಲು ಮುಂದಾಗುವುದು ಸೇರಿದಂತೆ ನಾವೆಲ್ಲರೂ ಮೊದಲು ನಮ್ಮ ಮನೆಯಿಂದಲೇ ಆಹಾರ ಪೋಲಾಗದಂತೆ ತಡೆಯುವ ಮೂಲಕ ನಮ್ಮ ದೇಶದಲ್ಲಿ ಎಲ್ಲಿಯೂ ಆಹಾರ ಹಾಳಾಗದಂತೆ ನೋಡಿಕೊಳ್ಳುವುದು ದೇಶದ ಪ್ರತಿಯೊಬ್ಬ ನಾಗರಿಕರ ಆದ್ಯ ಕರ್ತವ್ಯವಾಗಿದೆ.

ಶ್ರೀಮಂತರಿಗೆ ಆಹಾರದ ಅವಶ್ಯಕತೆ ಬಗ್ಗೆ ಅರಿವು ಇರುವುದಿಲ್ಲ. ಅದಕ್ಕಾಗಿ ಅವರಿಗೆ ಅರಿವು ಮೂಡಿಸುವ ಕೆಲಸ ಮಾಡುವುದು ಸಧ್ಯ ಅನಿವಾರ್ಯತೆ ಎದುರಾಗಿದೆ ಆ ದಿಸೆಯಲ್ಲಿ ಹೆಜ್ಜೆ ಹಾಕುವುದು, ನಮ್ಮೆಲ್ಲರ ಮೊದಲ ಆದ್ಯತೆಯ ಕೆಲಸವಾಗಬೇಕು, ಅದೇ ರೀತಿ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಪೋಲಾಗುವ ಆಹಾರವನ್ನು ವ್ಯರ್ಥ ಮಾಡದಂತೆ ಮುನ್ನೆಚ್ಚರಿಕೆ ಮೂಲಕ ಅವರಿಗೆಲ್ಲಾ ಮನವರಿಕೆ ಮಾಡಿಕೊಡುವ ಕೆಲಸ ಮಾಡಬೇಕು. ಹೋಟಲಗಳಲ್ಲಿ ಹಾಳಾಗುವ ಅಪಾರ ಪ್ರಮಾಣದ ಆಹಾರ, ಬಡವರ ಹಸಿವನ್ನು ನೀಗಿಸಲು ಮುಂದಾಗಬೇಕು, ಮುಂದಾಗುವುದು ಒಳ್ಳೆಯದು. ಅದೇ ರೀತಿ ನಾವೆಲ್ಲರೂ ಆಹಾರವನ್ನು ಪೋಲು ಮಾಡದೇ ಸಮರ್ಪಕ ಬಳಕೆ ಮಾಡಲು ಒಂದು ಅಚಲ ನಿರ್ಧಾರ ಕೈಗೊಳ್ಳುವುದು ಅತ್ಯುತ್ತಮ.ಹಾಗೆಯೇ ಇಂದಿನಿAದ ವೈಯಕ್ತಿಕ ಮಟ್ಟದಲ್ಲಿ ನಾವು ಸಹ ಆಹಾರವನ್ನು ವ್ಯರ್ಥ ಮಾಡದಂತೆ ಸಾಧ್ಯವಾದಷ್ಟು ಪ್ರಯತ್ನ ಮಾಡೋಣ. ಇದಲ್ಲದೇ ಹಸಿದವನೇ ಬಲ್ಲ ಅನ್ನದ ಮೌಲ್ಯ, ತಿನ್ನುವ ಹಕ್ಕು ಅವನಿಗೆ ಖಂಡಿತಾ ಇದೆ, ಆದರೆ ಬಿಸಾಡುವ ಹಕ್ಕು ನಮಗಿಲ್ಲ. ಊಟ ಚಿನ್ನಕ್ಕಿಂತ ಮುಖ್ಯ ನಮ್ಮ ಆಹಾರ, ಆಹಾರವೇ ನಮ್ಮ ದೇವರು, ಆಹಾರವೇ ನಮ್ಮ ಜೀವಾಳ, ಎಂಬ ಹೀಗೆ ಹಲವು ಘೋಷ ವಾಕ್ಯಗಳೊಂದಿಗೆ ಆಹಾರದ ದುರುಪಯೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಶೀಘ್ರವಾಗಿ ಆಗಬೇಕಾಗಿದೆ. ಹಾಗೆ ಎಷ್ಟು ಸಾಧ್ಯವೋ ಅಷ್ಟು ಆಹಾರವನ್ನು ಉಳಿಸುವ ಪ್ರತಿಜ್ಞೆ ಸರ್ವರೂ ಸೇರಿ ಮಾಡುವುದು ಲೇಸು ಮತ್ತು ಸಮಂಜಸ ಹಾಗೆ ನಮ್ಮ ದೇಶದ ಹಾಗೂ ಪ್ರಪಂಚದ ಯಾರೊಬ್ಬರು ಹಸಿವು ಹಾಗೂ ಬಡತನದಿಂದ ಸಾಯಬಾರದು. ಎಲ್ಲರಿಗೂ ಆಹಾರ ಸಿಗುವಂತಹ ವ್ಯವಸ್ಥೆ ನಿರ್ಮಾಣವಾಗಬೇಕು. ವಿವಿಧ ಬಗೆಯ ಹೊಸ ಮಾಹಿತಿ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು ಜನರಿಗೆ ಆಹಾರ ಪದಾರ್ಥಗಳು ವ್ಯರ್ಥ ಮಾಡದಂತೆ ಅಭಿಯಾನ ಹಮ್ಮಿಕೊಳ್ಳುವುದು ಇಂದಿನ ದಿನಗಳಲ್ಲಿ ಹೆಚ್ಚು ಅವಶ್ಯಕತೆ ಇದೆ, ಹಾಗೂ ಇದು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಮತ್ತು ಮಾಡಬಲ್ಲದು.ಅಲ್ಲದೆ ನಮ್ಮ ಸುತ್ತ ಮುತ್ತ ಯಾರಾದರೂ ಆಹಾರ ವ್ಯರ್ಥ ಮಾಡುತ್ತಿದ್ದರೆ ಪ್ರೀತಿಯಿಂದ ಅವರಿಗೆ ಮನವಿ ಮಾಡಿಕೊಂಡು ಆಹಾರದ ಅವಶ್ಯಕತೆ ಬಗೆ ಹಾಗೂ ಆಹಾರ ಪೋಲು ಮಾಡದಂತೆ ಜಾಗೃತಿ ಮೂಡಿಸೋಣ.

 ಸಂಗಮೇಶ ಎನ್ ಜವಾದಿ, ಕೊಡಂಬಲ

ಕೊನೆಯ ಮಾತು

ಸರ್ಕಾರಗಳ ಮಟ್ಟದಲ್ಲಿ ಆಹಾರದ ಕೊರತೆ ನೀಗಿಸಲು ಸಾಕಷ್ಟು ಸುಧಾರಣೆ ಮಾಡಬೇಕಾದ ಅವಶ್ಯಕತೆ ಇದ್ದೆ ಇದೆ.ಏಕೆಂದರೆ ಆಹಾರ ರಾಷ್ಟ್ರೀಯ ಸಂಪನ್ಮೂಲ.ಅದನ್ನು ಶ್ರೀಮಂತರ, ದುರಹಂಕಾರಿಗಳ, ಭ್ರಷ್ಟರ ತೆವಲುಗಳಿಗಾಗಿ ವ್ಯರ್ಥವಾಗಲು ಬಿಡಬಾರದು.ಅದಕ್ಕಾಗಿ ನಿಯಂತ್ರಣ ವ್ಯವಸ್ಥೆ ತುಂಬಾ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.ಅಂದಹಾಗೆ ಈಗ ಆಹಾರವೇ ವಿಷವಾಗುವ ಕಲಬೆರಕೆ ಹಂತಕ್ಕೆ ತಲುಪಿದೆ ಮತ್ತು ತಲುಪುತ್ತಿದ್ದೇವೆ ಎಂಬ ಭಾವನೆ ಸಹ ಕೆಲ ದಿನಗಳಿಂದ ಮೂಡುತ್ತಿದೆ.ಇದು ಸತ್ಯವಾದರೆ, ಇದನ್ನು ದೇಶದ್ರೋಹವೆಂದು ಪರಿಗಣಿಸಿ, ಕಠಿಣ ಕ್ರಮ ಕೈಗೊಳ್ಳಬೇಕು.ಆರೋಗ್ಯವಂತ ಹಾಗೂ ಹಸಿವು ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಇದು ಅವಶ್ಯಕತೆ ಇದೆ.ಜೊತೆ ಜೊತೆಗೆ ಜಗತ್ತಿನ ಪ್ರತಿಯೊಬ್ಬ ಮನುಷ್ಯನಿಗೆ ಬದುಕಲು ಆಹಾರ ಅತ್ಯವಶಕತೆ ಇದೆ ಎಂಬುದು ಮನವರಿಕೆ ಮಾಡಿಕೊಡುವುದು ಬಹಳ ಪ್ರಾಮುಖ್ಯತೆ ಇದೆ. ಅಲ್ಲದೆ ಭೂಮಿಯ ಮೇಲಿನ ಪ್ರತಿಯೊಬ್ಬರಿಗೂ ತಮಗೆ ಬೇಕಾದಷ್ಟು ಆಹಾರ ಪಡೆಯುವ ಹಕ್ಕಿದೆ.ಆದರೆ ನಾವು ತಿನ್ನುವ ಆಹಾರವನ್ನು ಹಾಳು ಮಾಡಿ ಚೆಲ್ಲದೆ ಅದನ್ನು ಅವಶ್ಯಕತೆಗೆ ತಕ್ಕಂತೆ ಬಳಸುವ ಮೂಲಕ ಮಾನವೀಯತೆಯನ್ನು ಸರ್ವರಲ್ಲಿಯೊ ಬಿತ್ತುವ ಕೆಲಸ ಮಾಡಬೇಕಾಗಿದೆ. ಹಾಗೂ ಪ್ರಪಂಚದ ಮಾನವರೆಲ್ಲಾ ಒಂದಾಗಿ ಯಾರೊಬ್ಬರು ಹಸಿವಿನಿಂದ ಸಾಯಬಾರದು ಎಂಬ ಧೋರಣೆ ಸರ್ವರೂ ಅಳವಡಿಸಿಕೊಂಡಾಗ ಮಾತ್ರ ಆಹಾರದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯ.

Leave a Reply

Your email address will not be published. Required fields are marked *

You May Also Like

ಹೃದ್ರೋಗಕ್ಕೆ ಗುಣಮಟ್ಟದ ಚಿಕಿತ್ಸೆಗೆ ಸರ್ಕಾರದ ನೀಲಿನಕ್ಷೆ: ಸಚಿವ ಡಾ.ಕೆ.ಸುಧಾಕರ್

ಜಯದೇವ ಹೃದ್ರೋಗ ಚಿಕಿತ್ಸೆ ಮತ್ತು ಸಂಶೋಧನಾ ಕೇಂದ್ರಗಳ ಮೂಲ ಸೌಲಭ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ನೂರರ ಗಡಿದಾಟಿದ ಕೊರೊನಾ ಪ್ರಕರಣಗಳು

ಗದಗ : ಜಿಲ್ಲೆಯಲ್ಲಿ ದಿನದ ಲೆಕ್ಕದಲ್ಲಿ ಪತ್ತೆಯಾಗುತ್ತಿರುವ ಕೋವಿಡ್-19 ಸೋಂಕಿನ ಪ್ರಕರಣಗಳು ನೂರರ ಗಡಿಯ ಆಸುಪಾಸಿನಲ್ಲೇ…

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಆಧಾರಿತ ಪಾಡ್ ಗೆ ಸುಧಾಕರ್ ಚಾಲನೆ

ವೆವ್ರ ಸಂಸ್ಥೆ ಮತ್ತು ಪೋರ್ಚುಗೀಸ್ ನ ಇನೋವೇವ್ ಗ್ರೂಪ್ ಸಹಯೋಗದಲ್ಲಿ ಆರಂಭಿಸಿರುವ ಹೆಲ್ತ್ ಕೇರ್ ಪಾಡ್ ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಚಾಲನೆ ನೀಡಿದರು. ನಗರದಲ್ಲಿ ಆನ್ ಲೈನ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ವೆವ್ರ ಪಾಡ್ ಸೌಲಭ್ಯವನ್ನು ಉದ್ಘಾಟಿಸಿದರು.

ಆಸ್ಪತ್ರೆ ಬೆಡ್ ಮ್ಯಾಲೆ ತಾಳಿ ಕಟ್ಟಿ ಮದ್ವಿ ಮಾಡಿಕೊಂಡು ಮಾನವೀಯತೆ ಮೆರೆದ ವರ

ಮದ್ವಿ ಅನ್ನೋದು ಸ್ವರ್ಗದಾಗ ನಿಶ್ಚಯ ಅನ್ನೋದು ಕೇಳಿವಿ. ಆದ್ರ ಅದೆಷ್ಟೋ ಮದ್ವಿ ಇನ್ನೇನು ತಾಳಿ ಕಟ್ ಬೇಕು ಅನ್ನೋ ಹೊತ್ನ್ಯಾಗ ನಿಂತಿರೋ ಉದಾಹರಣೆಗಳು ಭಾಳ್ ಅದಾವು.