ಆಹಾರದ ಅವಶ್ಯಕತೆ

ಪ್ರತಿ ಜೀವಿಯ ಜೀವನಾಧಾರವೇ ಅದರ ಹೊಟ್ಟೆಯ ಹಸಿವು, ಆಹಾರ ಇಲ್ಲದೇ ಹೋದರೆ ಪ್ರಾಣ ಪಕ್ಷಿಯೇ ಹಾರಿಹೋಗುವುದಂತು ಗ್ಯಾರಂಟಿ ಎನ್ನುವದಂತು ದಿಟ್ಟ ಎನ್ನುವ ವಿಚಾರಗಳನ್ನು ತಮ್ಮ ಮುಂದೆ ಹಂಚಿಕೊಳ್ಳುತ್ತ, ಇಂದಿನ ದಿನಮಾನಗಳಲ್ಲಿ ಮನುಷ್ಯರಿಗೆ ಆಹಾರ ಅವಶ್ಯಕತೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 1945 ರಲ್ಲಿ ವಿಶ್ವಸಂಸ್ಥೆಯ ಕೃಷಿ ವಿಭಾಗದ ಸ್ಥಾಪನೆಯ ಸವಿ ನೆನಪಿಗಾಗಿ ಅ.16 ರ ಈ ದಿನವನ್ನು ಹಸಿವಿನ ವಿರುದ್ಧ ಹೋರಾಟಕ್ಕಾಗಿ ಆರಂಭಿಸಲಾಯಿತು. 1981 ರ ನಂತರ ಈ ದಿನವನ್ನು ವ್ಯಾಪಕವಾಗಿ ವಿಶ್ವ ಆಹಾರ ದಿನವನ್ನಾಗಿ ವಿಶ್ವಾದ್ಯಾಂತ ಆಚರಣೆ ಮಾಡುವ ಮೂಲಕ ಜಾರಿಗೆ ತರಲಾಯಿತು. ಅಂದರೆ ಅ.16 ರಂದು ವಿಶ್ವಾದ್ಯಾಂತ ವಿಶ್ವ ಆಹಾರ ದಿನವನ್ನಾಗಿ ನಾವೆಲ್ಲರೂ ಸೇರಿ ಆಚರಣೆ ಮಾಡುತ್ತಿದ್ದೇವೆ. ಆದಕಾರಣ ಈ ದಿನದ ನಿಮಿತ್ತ ಭಕ್ಷ್ಯ ಭೋಜನವನ್ನು ಸವಿದು, ಆಹಾರ ಸಂಸ್ಕೃತಿಯನ್ನು ಸಂಭ್ರಮದಿಂದ ನೆನಪಿಸಿ, ತಿಂದು ತೇಗಲು ಈ ದಿನವನ್ನು ಆಚರಿಸಲು ಕರೆ ಕೊಡಲಾಗಿದೆ ಎಂದು ಭಾವಿಸಿದ್ದರೆ. ಅದು ನೂರಕ್ಕೆ ನೂರರಷ್ಟು ತಪ್ಪು. ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ಕುರಿತು ಜಾಗೃತಿ, ಅಭಿಯಾನ ಜೊತೆಗೆ ಹಸಿವಿನಿಂದ ಸಾಯುವವರ ನೋವಿನ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ, ತಲುಪಿಸುವ ಏಕೈಕ ಉದ್ದೇಶದ ಜೊತೆಗೆ ಆಹಾರ ಸಮಸ್ಯೆ ಕುರಿತು ವ್ಯಾಪಕವಾಗಿ ಅರಿವು ಮೂಡಿಸುವ ನಿಟ್ಟಿನಲ್ಲಿ ಮತ್ತು ಪೌಷ್ಟಿಕ ಆಹಾರ ಮಹತ್ವದ ಬಗ್ಗೆ ಜನತೆಗೆ ಜನಜಾಗೃತಿ ಅಭಿಯಾನ, ಗೋಷ್ಠಿ, ವಿಚಾರ ಸಂಕೀರ್ಣ ಹಾಗೂ ಇನ್ನಿತರ ಕಾರ್ಯಕ್ರಮಗಳ ಮೂಲಕ ತಿಳಿ ಹೇಳಲು ಆಹಾರ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ಹಸಿವು ತಾಳದೆ ಸತ್ತ ನಾಯಿಯನ್ನೇ ತಿಂದ ವ್ಯಕ್ತಿ!

ಹಸಿವು ತಾಳಲಾರದೆ ವ್ಯಕ್ತಿಯೋರ್ವ ರಸ್ತೆಯಲ್ಲಿ ಅಪಘಾತವಾಗಿ ಸತ್ತು ಬಿದ್ದಿದ್ದ ನಾಯಿಯನ್ನು ತಿನ್ನುತ್ತಿರುವ ವಿಡಿಯೋ ವೈರಲ್ ಆಗಿದೆ.