ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ವೈದ್ಯಕೀಯ ಆಮ್ಲಜನಕದ ದಾಸ್ತಾನು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳವು ದೆಹಲಿಗೆ ಸಹಾಯ ಹಸ್ತ ಚಾಚಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಮಲಯಾಳಿ ಸಂಘಟನೆಗಳ ಮನವಿಗಳಿಗೆ ಸ್ಪಂದಿಸಿ ನೆರವು ನೀಡಲು ಕೇರಳ ಸರ್ಕಾರ ಸಿದ್ಧತೆ ನಡೆಸಿದೆ.

ದೆಹಲಿಗೆ ಆಮ್ಲಜನಕ ಒದಗಿಸಲು ಕೇರಳವು ಸಿದ್ಧವಿದ್ದರೂ, ಅದನ್ನು ದೆಹಲಿಗೆ ಸಾಗಿಸುವುದು ನಮ್ಮ ಮುಂದಿರುವ ಸವಾಲಾಗಿದೆ. ಆಮ್ಲಜನಕ ಸಾಗಣೆ ಕುರಿತು ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ದೇವ್ ಅವರೊಂದಿಗೆ ಚರ್ಚೆ ನಡೆಸಲಿದೆ ಎಂದು ಮುಖ್ಯ ಕಾರ್ಯದರ್ಶಿ ವಿಪಿ ಜಾಯ್ ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಂದ ಪತ್ರ ಸ್ವೀಕರಿಸಿದ ನಂತರ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೆಹಲಿಗೆ ಆಮ್ಲಜನಕ ಒದಗಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *

You May Also Like

ILI ಲಕ್ಷಣ ವಿರುವವರು ಕೂಡಲೇ ಕೋವಿಡ್ ತಪಾಸಣೆ ಮಾಡಿಸಿಕೊಳ್ಳಿ- ಸಚಿವ ಡಾ.ಕೆ.ಸುಧಾಕರ್

ನಗರದಲ್ಲಿ ಹೆಚ್ಚುತ್ತಿರುವ ಕೊರೋನ ಪ್ರಕರಣಗಳ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.

ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

2020-21 ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಶಿರಹಟ್ಟಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡಲಾಯಿತು.

ಸ್ವಚ್ಛ ಪರಿಸರದ ಜಾಗೃತಿ ನಮ್ಮ ಆದ್ಯತೆಯಾಗಲಿ

ಉತ್ತರಪ್ರಭ ಇಂಡಿ: ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿ ಇರುವುದರಿಂದ ಹೆಚ್ಚು ಹೆಚ್ಚು…

ಮದ್ಯೆದಂಗಡಿ ಪ್ರಾರಂಭಕ್ಕೆ ಲಂಬಾಣಿ ಸಂಘಟನೆ ವಿರೋಧ

ಒಂದು ಕಾಲ ಘಟ್ಟದಲ್ಲಿ ಲಂಬಾಣಿ ಸಮಾಜ ಭಟ್ಟಿ ಸಾರಾಯಿ ಮಾರಾಟ ಮಾಡಿಯೇ ತಮ್ಮ ಬದುಕು ಕಟ್ಟಿಕೊಂಡಿತ್ತು. ಆದರೆ ಇದೀಗ ಸಮಾಜದಲ್ಲಿ ಜಾಗೃತಿ ಮೂಡಿದೆ ಎನ್ನುವುದಕ್ಕೆ ಯುವಕರ ಕಾರ್ಯ ಇದಕ್ಕೆ ಉದಾಹರಣೆಯಾಗಿದೆ.