ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ವೈದ್ಯಕೀಯ ಆಮ್ಲಜನಕದ ದಾಸ್ತಾನು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕೇರಳವು ದೆಹಲಿಗೆ ಸಹಾಯ ಹಸ್ತ ಚಾಚಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮತ್ತು ಮಲಯಾಳಿ ಸಂಘಟನೆಗಳ ಮನವಿಗಳಿಗೆ ಸ್ಪಂದಿಸಿ ನೆರವು ನೀಡಲು ಕೇರಳ ಸರ್ಕಾರ ಸಿದ್ಧತೆ ನಡೆಸಿದೆ.

ದೆಹಲಿಗೆ ಆಮ್ಲಜನಕ ಒದಗಿಸಲು ಕೇರಳವು ಸಿದ್ಧವಿದ್ದರೂ, ಅದನ್ನು ದೆಹಲಿಗೆ ಸಾಗಿಸುವುದು ನಮ್ಮ ಮುಂದಿರುವ ಸವಾಲಾಗಿದೆ. ಆಮ್ಲಜನಕ ಸಾಗಣೆ ಕುರಿತು ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ಕುಮಾರ್ ದೇವ್ ಅವರೊಂದಿಗೆ ಚರ್ಚೆ ನಡೆಸಲಿದೆ ಎಂದು ಮುಖ್ಯ ಕಾರ್ಯದರ್ಶಿ ವಿಪಿ ಜಾಯ್ ಹೇಳಿದರು.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಂದ ಪತ್ರ ಸ್ವೀಕರಿಸಿದ ನಂತರ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ದೆಹಲಿಗೆ ಆಮ್ಲಜನಕ ಒದಗಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಮುಖ್ಯ ಕಾರ್ಯದರ್ಶಿ ಸೇರಿದಂತೆ ಅಧಿಕಾರಿಗಳಿಗೆ ಸೂಚಿಸಿದರು.

Leave a Reply

Your email address will not be published. Required fields are marked *

You May Also Like

ಮೀಸಲಾತಿ ಪಟ್ಟಿ: ಕಾರಜೋಳ ಹೇಳಿಕೆ ಸ್ವಾಗತಿಸಿದ ಇಮ್ಮಡಿ ಶ್ರೀ

ಚಿತ್ರದುರ್ಗ: ಭೋವಿ, ಲಂಬಾಣಿ, ಕೊರಮ, ಕೊರಚ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿಲ್ಲ ಹಾಗೂ ಬಿಡುವುದಿಲ್ಲ…

ನಗರ ಸಭೆ ಚುನಾವಣೆ: 35 ನೇ ವಾರ್ಡ ಬಿಜೆಪಿ ಪಾಲಿಗೆ

ಗದಗ ಬೇಟಗೇರಿ:ನಗರ ಸಭೆ 35ನೇ ವಾರ್ಡನ ಮತ  ಎಣಿಕೆ ಮುಕ್ತಾಯ , 35ನೇ  ವಾರ್ಡನಲ್ಲಿ ಬಿಜೆಪಿಗೆ…

ಮುಂಡರಗಿ ಅರಣ್ಯ ಅಧಿಕಾರಿಗಳನ್ನು ವಜಾಗೊಳಿಸಲು ಬೃಹತ್ ಪ್ರತಿಭಟನೆ – ರವಿಕಾಂತ ಅಂಗಡಿ

ಮುಂಡರಗಿ: ಬಗರಹುಕುಂ ಸಾಗುವಳಿದಾರರು ಪೂರ್ವಜರ ಕಾಲದಿಂದ ತಮ್ಮ ಉಪಜೀವನಕ್ಕಾಗಿ ಉಳುಮೆ ಮಾಡುತ್ತಾ ಬಂದಿದ್ದಾರೆ ಅವರನ್ನು ಮುಂಡರಗಿ…

ಎನ್.ಆರ್.ಡಿ.ಡಬ್ಲೂ.ಪಿ ಯೋಜನೆ 210 ಕಾರ್ಮಿಕರು ಬೀದಿಗೆ : ಆದೇಶವಿದ್ರು ಸರ್ಕಾರ ಗಪ್ ಚುಪ್!

ಕಾರ್ಮಿಕರನ್ನು ಕೆಲಸದಿಂದ ತೆಗೆಯದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಆದೇಶ ನೀಡುತ್ತದೆ. ಆದರೆ ಸರ್ಕಾರಿ ವ್ಯವಸ್ಥೆಯಲ್ಲಿಯೇ 210 ಕಾರ್ಮಿಕರನ್ನು ಸದ್ದಿಲ್ಲದೇ ಇಲಾಖೆಯೊಂದು ಬೀದಿಗೆ ತಳ್ಳಿದೆ. ಕಾರ್ಮಿಕ ಪರ ಆದೇಶ ನೀಡಿದ ಸರ್ಕಾರ ಮಾತ್ರ ಗಪ್ ಚುಪ್ ಆಗಿದೆ.