ಶಿರಹಟ್ಟಿ: ಸ್ಥಳೀಯ ಪಪಂ ವ್ಯಾಪ್ತಿಯಲ್ಲಿ ಕೇವಲ 2 ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಪಂಚಾಯ್ತಿಯ ಜನಸಂಖ್ಯೆಗನುಗುಣವಾಗಿ 4-5 ಶುದ್ದ ಕುಡಿಯುವ ನೀರಿನ ಘಟಕಗಳು ಅವಶ್ಯಕತೆ ಇದೆ. ಅವುಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರವೇ ವತಿಯಿಂದ ಶುಕ್ರವಾರ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ರಫೀಕ ಕೆರಿಮನಿ, ಪ್ರಸ್ತುತ ಬೇಸಿಗೆಕಾಲ ಇರುವುದರಿಂದ ಸಾರ್ವಜನಿಕರಿಗೆ ನೀರಿನ ಸಮಸ್ಯೆ ತಂಬಾ ಆಗುತ್ತಿದೆ. ಇರುವ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗದ ನಿರ್ವಹಣೆ ಇಲ್ಲದೆ ಸಮರ್ಪಕ ನೀರು ಸಾರ್ವಜನಿಕರಿಗೆ ದೊರೆಯದಂತಾಗಿದೆ. ಸ್ಥಳೀಯ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ ಮುಂದಾಗಿದ್ದು, ಅದಕ್ಕನುಗುಣವಾಗಿ ಸೂಕ್ತ ಸ್ಥಳ ಹಾಗೂ ನಿರ್ವಹಣೆಯ ಕುರಿತು ಅವರನ್ನು ಸಂಪರ್ಕಿಸಿ ಘಟಕ ಸ್ಥಾಪಿಸಿದರೆ ಸಾರ್ವಜನಿಕರಿಗೆ ಕೊಂಚ ನೀರಿನ ಬವಣೆ ನೀಗುತ್ತದೆ.

ಅಲ್ಲದೆ ಪಂಚಾಯ್ತಿ ವತಿಯಿಂದ ಇನ್ನು ಕೆಲವು ನೀರಿನ ಘಟಕ ಸ್ಥಾಪನೆಯಾಗಬೇಕಿದೆ. ನೀರಿನ ಸಮಸ್ಯೆಗೆ ಬೇಗ ಪರಿಹಾರ ಕಂಡುಕೊಳ್ಳದೇ ಹೋದರೆ ಉಗ್ರವಾದ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕರವೇ ಜಿಲ್ಲಾಧ್ಯಕ್ಷ ದಾವಲಸಾಬ ಮುಳಗುಂದ ಮಾತನಾಡಿದರು. ವೆಂಕಟೇಶ್ವರ ಬೇಲೂರು, ಸಹದೇವ್ ಕೋಟಿ, ಇಲಿಯಾಸ್ ಮೀರಾ ನವರ್, ಮನ್ಸೂರು ಮಕಾಂದಾರ್, ಈರಣ್ಣ ಬಾಗೇವಾಡಿ, ಖಾದರ್ ಟಪಾಲ್, ಸಾಯಿರಾಬಾನು ಒಂಟಿ, ಯೋಗಿತಾ ದೇಸಾಯಿಪಟ್ಟಿ, ಶೋಭಾ ಬಳೆಗಾರ, ರೇಖಾ ಮಧುಕರ್, ಶಾಂಭವಿ ಹಿರೇಮಠ್, ವಿಜಯಕ್ಕ ತಳವಾರ್ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಕಾರ್ಮಿಕರ ಮುಷ್ಕರ ಹಿನ್ನೆಲೆ ಲಕ್ಷ್ಮೇಶ್ವರದಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ವಿರೊಧ ನೀತಿ ಖಂಡಿಸಿ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ವಿವಿಧ ಕಾರ್ಮಿಕ ಹಾಗೂ ರೈತಪರ ಮತ್ತು ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ದೇವಾಂಗ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಸ್ಥಾಪನೆಗೆ ಒತ್ತಾಯ

ರಾಜ್ಯದಲ್ಲಿ ದೇವಾಂಗ ಸಮಾಜ ಅತ್ಯಂತ ಆರ್ಥಿಕವಾಗಿ ರಾಜಕೀಯ ಹಾಗು ಶೈಕ್ಷಣಿಕವಾಗಿ ಮತ್ತು ಸಮಾಜಿಕವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ದೇವಾಂಗ ಅಭಿವೃದ್ಧಿ ಮಂಡಳಿ ಅಥವಾ ನಿಗಮವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ

ಪಾಪ.. ಕೊಪ್ಪಳದಲ್ಲಿ ಭಿಕ್ಷೆಯೇ ಬದುಕಾಗಿಸಿಕೊಂಡವರ ಗತಿ ಏನು..?

ಕೊಪ್ಪಳ: ಮುಂಬೈಯಿಂದ ಪಿ-1173 ಸೋಂಕಿತ ಪ್ರಯಾಣಿಸಿದ್ದ ಬಸ್ ನಲ್ಲಿ 9 ಜನ ಭಿಕ್ಷುಕರು ಪ್ರಯಾಣಿಸಿದ್ದರಂತೆ. ಈ…