ಬೆಳಗಾವಿ :
ಬಿಪಿಎಲ್ ಪಡಿತರದಾರರಿಗೆ ಆಹಾರ ಭದ್ರತೆ ಯೋಜನೆಯಡಿ ಅಕ್ಕಿಯ ಜೊತೆಗೆ ಜೋಳ, ಹೆಸರುಬೇಳೆ, ತೊಗರಿ ಹಾಗೂ ರಾಗಿ ವಿತರಿಸಲಾಗುತ್ತದೆ ಎಂಬುದಾಗಿ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ತಿಳಿಸಿದ್ದಾರೆ.
ನಗರದಲ್ಲಿ ರವವಾರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಆಹಾರ ಭದ್ರತೆ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ದಾರರಿಗೆ 5 ಕೆಜಿ ಅಕ್ಕಿ ಜೊತೆಗೆ, ಇತರೆ ಧಾನ್ಯ ವಿತರಿಸುವಂತ ಯೋಜನೆ ಇದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದವರಿಗೆ ಅಕ್ಕಿಯ ಜೊತೆಗೆ ಜೋಳ, ತೊಗಲಿ, ಹೆಸರುಬೇಳೆ ವಿತರಿಸಲಾಗುತ್ತದೆ ಎಂದರು.
ಉತ್ತರ ಕರ್ನಾಟಕ ಭಾಗದವರಿಗೆ ಅಕ್ಕಿ ಜೊತೆಗೆ ಜೋಳ, ತೊಗರಿ ಹೆಸರು ಬೇಳೆ ವಿತರಿಸಿದ್ರೇ, ದಕ್ಷಿಣ ಕರ್ನಾಟಕ ಭಾಗದವರಿಗೆ ಅಕ್ಕಿಯ ಜೊತೆಗೆ ರಾಗಿ, ಹೆಸರು, ತೊಗರಿ ವಿತರಿಸಬೇಕು ಎಂಬ ಯೋಜನೆ ಹಾಕಿದ್ದೇವೆ. ಏಪ್ರಿಲ್ 1ರಿಂದ ಈ ಯೋಜನೆ ಜಾರಿಗೆ ತರಲಾಗುತ್ತದೆ ಎಂದು ತಿಳೀಸಿದರು.

Leave a Reply

Your email address will not be published. Required fields are marked *

You May Also Like

ಹಿಜಾಬ್ ಪ್ರಕರಣ: ಅರ್ಜಿದಾರರ ಅರ್ಜಿ ವಜಾ

ಬೆಂಗಳೂರು: ಹಿಜಾಬ್ ಪ್ರಕರಣದ ತಿರ್ಪುನ್ನು ಇಡಿ ದೇಶದ ಜನತೆಯ ಚಿತ್ತ ನ್ಯಾಯಾಲಯದತ್ತ ನೆಟ್ಟಿತ್ತು.ಅದರಲ್ಲೂ ಕರ್ನಾಟಕದ ನ್ಯಾಯಾಲಯವು…

ಕುಡಿದ ಮತ್ತಿನಲ್ಲಿ ಮಹಿಳೆಯ ಜೀವಕ್ಕೆ ಕುತ್ತು ತಂದ ಪೊಲೀಸ್!

ನವದೆಹಲಿ : ಕುಡಿದ ಮತ್ತಿನಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ವೇಗವಾಗಿ ಕಾರು ಚಲಾಯಿಸಿ…

ಲಕ್ಷ್ಮೇಶ್ವರ: ಕಟೀಲ್ ಬಂಜಾರ ಸಮಾಜದ ಕ್ಷಮೆಯಾಚಿಸಬೇಕು

ಬಿಜೆಪಿ ರಾಜಾಧ್ಯಕ್ಷ ನಳಿನಕುಮಾರ ಕಟೀಲ್ ಅವರು ಬಹಿರಂಗವಾಗಿ ಹೇಳಿರುವ ಸದಾಶಿವ ಆಯೋಗದ ಬಗೆಗಿನ ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಬಂಜಾರ ಸಮಾಜದ ಕ್ಷಮೆಯಾಚಿಸಬೇಕೆಂದು ಲಕ್ಷ್ಮೇಶ್ವರ ಘಟಕದ ಬಂಜಾರ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಯಿತು.

ಇನ್ಮುಂದೆ ಕನ್ನಡದಲ್ಲೂ ಇಂಜನೀಯರಿಂಗ್ ಕಲಿಬಹುದಂತೆ!

ಅದೆಷ್ಟೋ ವಿದ್ಯಾರ್ಥಿಗಳಿಗೆ ನಾನು ಡಾಕ್ಟರ್ ಆಗಬೇಕು. ಇಂಜನೀಯರ್ ಆಗಬೇಕು ಎನ್ನುವ ಕನಸಿರುತ್ತೆ. ಆದರೆ ಅದರಲ್ಲಿನ ಇಂಗ್ಲೀಷ ಜ್ಞಾನದ ಕೊರತೆಯಿಂದ ಜನೀಯರಿಂಗ್ ಕಲಿಯಲು ಹಿಂದೇಟು ಹಾಕುವವರೇ ಬಹಳಷ್ಟು ಜನರಿದ್ದರು. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಈ ಸಮಸ್ಯೆ ಹೆಚ್ಚು ಕಂಡು ಬರುತ್ತಿತ್ತು. ಆದರೆ ಇದೀಗ ಇದೊಕ್ಕೊಂದು ಪರಿಹಾರ ಸಿಕ್ಕಿದೆ. ಮಾತೃಭಾಷೆಯಲ್ಲಿಯೂ ಇಂಜನೀಯರಿಂಗ್ ಮಾಡಲು ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ.