ಸುರೇಶ್ ಲಮಾಣಿ
ಲಕ್ಷ್ಮೇಶ್ವರ: ಬಡ ಮಕ್ಕಳ ಬದುಕಿನಲ್ಲಿ ಶಿಕ್ಷಣ ದಿವಿಗೆಯನ್ನು ಹಚ್ಚಬೇಕಾದ ಅಂಗನವಾಡಿ ಕೇಂದ್ರ ಇದ್ದು ಇಲ್ಲದಂತಾಗಿ
ತಾಲೂಕಿನ ಆದರಹಳ್ಳಿ ಗ್ರಾಮದ 2ನೇ ವಾರ್ಡಿನ ಅಂಗನವಾಡಿ ಕೇಂದ್ರ ಇಲ್ಲದೇ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಹಲವು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣ ಕೊಡುತ್ತಾ ಬಂದಿದ್ದಾರೆ. ಹೊಸ ಅಂಗನವಾಡಿ ಕೇಂದ್ರ ನಿರ್ಮಾಣವಾಗಿ ಸುಮಾರು ವರ್ಷಗಳು ಕಳೆದರೂ ಇದುವರೆಗೆ ಅಂಗನವಾಡಿ ಕೇಂದ್ರವನ್ನು ಗುತ್ತಿಗೆದಾರರು ಹಸ್ತಾಂತರ ಮಾಡಿಲ್ಲ ಹಾಗೂ ಗ್ರಾ.ಪಂ.ಚುನಾವಣೆ ನಡೆದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯೂ ಆಗಿದೆ. ಆದರೆ ಅಂಗನವಾಡಿ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ ಎಂದು 2 ವಾರ್ಡಿನ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೋರ ಹಾಕುತ್ತಿದ್ದಾರೆ.
ಮಕ್ಕಳ ಬಾಳಿಗೆ ಬೆಳಕು ಚೆಲ್ಲಬೇಕು
ಆದರಹಳ್ಳಿ ಗ್ರಾಮದ 2 ನೇ ವಾರ್ಡಿನ ಅಂಗನವಾಡಿಯನ್ನು ಹೊಸ ಕಟ್ಟಡ ನಿರ್ಮಾಣವಾದರೂ ಇನ್ನೂ ಬಾಡಿಗೆ ಕಟ್ಟಡದಲ್ಲಿವೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳು ಗ್ರಾಮ ಪಂಚಾಯತಿಯವರು ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಇನ್ನಾದರೂ ಅಧಿಕಾರಿಗಳು ಮಧ್ಯಪ್ರವೇಶಿಸಿ ಮಕ್ಕಳ ಬಾಳಿಗೆ ಬೆಳಕು ಚೆಲ್ಲಬೇಕಾಗಿದೆ.
-ಕಿರಣ ಲಮಾಣಿ (ಗ್ರಾಮಸ್ಥರು)
ಸುಮಾರು ವರ್ಷಗಳಿಂದ ಅಂಗನವಾಡಿ ಕೇಂದ್ರವೂ ಬಾಡಿಗೆ ಕಟ್ಟಡದಲ್ಲಿ ಕಲಿಸುತ್ತಿದ್ದಾರೆ.ಈ ಅಂಗನವಾಡಿಯಲ್ಲಿ ಮಳೆಗಾಲದಲ್ಲಿ ಮಳೆ ಬಂದರೆ ಸೊರುತ್ತಿದೆ ಹಾಗೂ ಕೆಲವು ಗೋಡೆಗಳು ಬಿರುಕು ಬಿಟ್ಟಿವೆ ಸ್ವಲ್ಪ ಹೆಚ್ಚು ಕಡಿಮೆಯಾದರೆ ನಾಳೆ ಯಾರೂ ಹೊಣೆ ಇನ್ನೂ ಮಳೆಗಾಳದಲ್ಲಿ ಮಳೆಯ ಹನಿನಿಂದ ಇಡಿ ಬಾಡಿಗೆ ಕಟ್ಟಡ ಸೊರುತ್ತದೆ ಇಷ್ಟೇಲ್ಲಾ ಅಧಿಕಾರಿಗಳಿಗೆ ಗೊತ್ತಿದ್ದರು ಜಾಣ ಕುರುಡತನ ತೋರುತ್ತಿದ್ದಾರೆ.ಎಂದು ಪಾಲಕರು ತಮ್ಮ ಅಳಲನ್ನು ತೋಡಿಕೊಂಡರು.

ಹಸ್ತಾಂತರದ ನಂತರ ಆರಂಭ
ಆದರಹಳ್ಳಿ ಗ್ರಾಮದ ಎರಡನೇ ವಾರ್ಡಿನ ಅಂಗನವಾಡಿ ಕೇಂದ್ರವನ್ನು ಹಸ್ತಾಂತರ ಕೊಡಿ ಎಂದು ಲಿಖಿತವಾಗಿ ತಿಳಿಸಲಾಗಿದೆ. ಅವರು ಇಲಾಖೆಗೆ ಹಸ್ತಾಂತರಿಸಿದ ಮೇಲೆ ಹೊಸ ಕಟ್ಟಡದಲ್ಲಿ ಅಂಗನವಾಡಿ ಪ್ರಾರಂಭ ಮಾಡಲಾಗುವುದು.
-ಮ್ಯತ್ಯುಂಜಯ (ಸಿಡಿಪಿಓ)
ಇನ್ನೂ ಎರಡನೇ ಅಂಗನವಾಡಿ ಸಿದ್ದವಾಗಿ ಸುಮಾರು ವರ್ಷಗಳೇ ಕಳೆದರು ಗುತ್ತಿಗೆದಾರರು ನಮ್ಮ ಸಣ್ಣ ಪುಟ್ಟ ಬಿಲ್ ಆಗಿಲ್ಲ ಎಂದು ಅಂಗನವಾಡಿ ಕಟ್ಟಡವನ್ನು ಹ್ಯಾಂಡೋವರ್ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.ಇನ್ನೂ ಅಧಿಕಾರಿಗಳಿಗೆ ಕೇಳಿದರೆ ನಮಗೆ ಗೋತ್ತೆಇಲ್ಲವಂತೆ ವರ್ತಿಸುತ್ತಿದ್ದಾರೆ. ಇನ್ನೂ ಗ್ರಾಮ ಪಂಚಾಯತಿಗೆ ಕೇಳಿದರೆ ಅದರ ಬಗ್ಗೆ ಯಾವ ಸದಸ್ಯರಾಗಲಿ ಅಧ್ಯಕ್ಷರಾಗಲಿ ಇದರ ಬಗ್ಗೆ ಚಕಾರವೇ ಎತ್ತುತ್ತಿಲ್ಲ ಎಂದು ಹೀಗಾದರೆ ಹೇಗೆ ನಮ್ಮ ಪುಟ್ಟ ಮಕ್ಕಳ ಜೊತೆಯಲ್ಲಿ ಚಲ್ಲಾಟವಾಡುತ್ತಿದ್ದಾರೆ ಇವರೆಲ್ಲರೂ ಸೇರಿ ಎಂದು ಎರಡನೇ ವಾರ್ಡಿನ ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.