ನವದೆಹಲಿ: ಅತಿಯಾದ ಮದ್ಯಪಾನದಿಂದ  ಮೃತಪಟ್ಟಿದ್ದರಿಂದ ವಿಮೆ ಪರಿಹಾರದ ಕ್ಲೇಮ್ ಮಾನ್ಯವಲ್ಲ ಎಂದು ನ್ಯಾಯಾಲಯ ಹೇಳಿದೆ.

ಮದ್ಯಪಾನ ಮಾಡಿ ಮೃತಪಟ್ಟವರಿಗೆ ವಿಮೆ ಪರಿಹಾರ ಸಿಗಲ್ಲ, ಅಪಘಾತದಲ್ಲಿ ಗಾಯಗೊಂಡವರಿಗೆ ಮಾತ್ರ ಪರಿಹಾರ ನೀಡಲು ವಿಮೆ ಕಂಪನಿ ಬದ್ಧವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಅಪಘಾತದಿಂದ ಸಾವು ಸಂಭವಿಸಿದ ಕಾರಣ ವಿಮೆ ಪರಿಹಾರ ನೀಡಬೇಕಿಲ್ಲ ಎಂದು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಆಯೋಗ ತೀರ್ಪು ನೀಡಿದ್ದು ಇದನ್ನು ಸುಪ್ರೀಂಕೋರ್ಟ್ ನಲ್ಲಿ ನರ್ಮದಾ ದೇವಿ ಅವರು ಪ್ರಶ್ನಿಸಿದ್ದು, ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಆಯೋಗದ ಆದೇಶವನ್ನು ಎತ್ತಿ ಹಿಡಿದಿದೆ.

ಹಿಮಾಚಲ ಪ್ರದೇಶದ ಅರಣ್ಯ ನಿಗಮದ ಸಿಬ್ಬಂದಿ 1997 ರಂದು ಅಕ್ಟೋಬರ್ ನಲ್ಲಿ ಅತಿಯಾದ ಮದ್ಯ ಸೇವನೆಯಿಂದ ಉಸಿರುಗಟ್ಟಿ ಮೃತಪಟ್ಟಿದ್ದರು. ಈ ಬಗ್ಗೆ ಸಂಬಂಧಿ ನರ್ಮದಾ ದೇವಿ ಪರಿಹಾರಕ್ಕೆ ಕೋರ್ಟ್ ಮೊರೆ ಹೋಗಿದ್ದರು.

Leave a Reply

Your email address will not be published. Required fields are marked *

You May Also Like

ಕೊರೋನಾ ವೈರಸ್ ಗೆ ಗ್ಲೆನ್ ಮಾರ್ಕ್ ಸಂಸ್ಥೆಯ ಫ್ಯಾಬಿಫ್ಲೂ ಅಸ್ತ್ರ

ದೆಹಲಿ: ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಜನರನ್ನು ಬಾಧಿಸುತ್ತಿರುವ ಕೊರೊನಾಗೆ ಗ್ಲೆನ್ ಮಾರ್ಕ್…

ಚೀನಾ ಸಂಘರ್ಷ ಅಂತ್ಯ – ಸೇನೆ ಹಿಂಪಡೆಯಲು ನಿರ್ಧಾರ!

ನವದೆಹಲಿ : ಚೀನಾ ಸಂಘರ್ಷದ ಬಳಿಕ ಉಂಟಾಗಿದ್ದ ಗಂಭೀರ ಪರಿಸ್ಥಿತಿಯನ್ನು ತಿಳಿಗೊಳಿಸುವ ಭಾರತ ಮತ್ತು ಚೀನಾ ಸೇನಾ ಮುಖ್ಯಸ್ಥರ ಪ್ರಯತ್ನಕ್ಕೆ ಮಹತ್ವದ ಜಯ ಲಭಿಸಿದ್ದು, ಎರಡೂ ಸೇನಾ ಮುಖ್ಯಸ್ಥರು ತಮ್ಮ ಸೈನಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ನಿರ್ಧರಿಸಿದ್ದಾರೆ.

ರಾಜ್ಯಸಭೆ ಕಲಾಪಕ್ಕೆ ಸರಕಾರವೇ ಹೊಣೆ: ಮಲ್ಲಿಕಾರ್ಜುನ ಖರ್ಗೆ

“ನಮ್ಮ ಧ್ವನಿಯನ್ನು ಹತ್ತಿಕ್ಕಲು ನಾವು ಬಿಡುವುದಿಲ್ಲ. ಇದಕ್ಕೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ ಮತ್ತು ನಾವು ಮೋದಿಜಿ ಯವರ ಯಾವುದೇ ಸರ್ವಾಧಿಕಾರಕ್ಕೆ ಅವಕಾಶ ನೀಡುವುದಿಲ್ಲ.”