ಹೊಸದಿಲ್ಲಿ: ನಾನು ಆರೋಗ್ಯವಾಗಿದ್ದೇನೆ. ಯಾವುದೇ ಆತಂಕಕ್ಕೆ ಆಸ್ಪದವಿಲ್ಲ ಎಂದು ಗೃಹ ಮಂತ್ರಿ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಅಮಿತ್ ಶಾ ಅವರ ಅನಾರೋಗ್ಯದ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಈ ಮೂಲಕ ಉತ್ತರ ನೀದ್ದಾರೆ. ಈಗಾಗಲೇ ನನ್ನ ಆರೋಗ್ಯ ವಿಚಾರವಾಗಿ ಸುಳ್ಳು ಸುದ್ದಿಗಳು ಹಲವು ದಿನಗಳಿಂದ ಹರದಾಡುತ್ತಿವೆ. ಇನ್ನು ಕೆಲವರು ನನ್ನ ಸಾವಿನ ಬಗ್ಗೆ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಇಡೀ ದೇಶ ಕೊರೋನಾ ಸೋಂಕಿನ ಭಯದ ನೆರಳಲ್ಲಿದೆ. ದೇಶದ ಒಬ್ಬ ಮಂತ್ರಿ ಸ್ಥಾನದಲ್ಲಿರುವ ನಾನು ನನ್ನ ಬಗ್ಗೆ ಹಬ್ಬಿರುವ ಸುಳ್ಳು ವಂದಂತಿ ಬಗ್ಗೆ ಕಾಳಜಿ ವಹಿಸಿಲ್ಲ. ಹಗಲಿರುಳು ಕೊರೋನಾ ಸೋಂಕಿನಿಂದ ಆಗುತ್ತಿರುವ ತೊಂದರೆ ನಿವಾರಣೆಯಲ್ಲಿ ನನ್ನನ್ನು ನಾನು ಹೆಚ್ಚು ತೊಡಗಿಸಿಕೊಂಡಿದ್ದೇನೆ. ಆದರೆ ಬಹಳಷ್ಟು ಜನರು ತಮ್ಮ ಕಾಲ್ಪನಿಕ ಯೋಚನೆಯಿಂದ ಆನಂದ ಪಡುತ್ತಿದ್ದಾರೆ ಎನ್ನುವುದು ತಿಳಿಯಿತು. ಆದರೆ ಕಳೆದ ಎರಡು ದಿನಗಳಿಂದ ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ನನ್ನ ಹಿತ ಚಿಂತಕರು ಈ ಬಗ್ಗೆ ಬಹಳಷ್ಟು ಚಿಂತೆಗೊಳಗಾಗಿದ್ದರು. ಈ ಕಾರಣದಿಂದಾಗಿ ನನ್ನ ಜನರ ಆತಂಕ ದೂರ ಮಾಡುವ ಉದ್ದೇಶದಿಂದ ನನ್ನ ಆರೋಗ್ಯದ ಬಗ್ಗೆ ಹಬ್ಬಿರುವ ವದಂತಿ ಬಗ್ಗೆ ಸ್ಪಷ್ಟಿಕರಣ ನೀಡುತ್ತಿದ್ದೇನೆ.
ನಾನು ಆರೋಗ್ಯವಾಗಿದ್ದೇನೆ. ಯಾವುದೇ ಸಮಸ್ಯೆಯಿಂದ ಬಳಲುತ್ತಿಲ್ಲ. ಹಾಗೂ ನನ್ನ ಆರೋಗ್ಯದ ಕುರಿತು ಹರಿಬಿಡಲಾಗಿರುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಅವರು ಬಿಜೆಪಿಯ ಕಾರ್ಯಕರ್ತರು ಹಾಗೂ ಅವರ ಹಿತೈಶಿಗಳಲ್ಲಿ ಅಮಿತ್ ಶಾ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.