ಗದಗ: ನಗರದ ಡಿ.ಸಿ.ಮಿಲ್ ತಳಗೇರಿ ಓಣಿಯಲ್ಲಿ ಪೊಲೀಸ್ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕುಂದುಕೊರತೆ ಸಭೆ ಆಯೋಜಿಸಲಾಯಿತು.

ಸಭೆಯಲ್ಲಿ ಶಹರ ಪೊಲೀಸ್ ಠಾಣೆ ಸಿಪಿಐ ಸಾಲಿಮಠ ಮಾತನಾಡಿ, ಪೋಲಿಸ್ ಅಂದರೆ ಭಯ ಅಲ್ಲ, ಭರವಸೆ ಎಂದು ಹೇಳಿದರು ಹಾಗೂ ಕಾನೂನು ಅರಿವು ಮೂಡಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದರು.

ಪಿಎಸ್‌ಐ ಪ್ರಕಾಶ ಡಿ ಮಾತನಾಡಿ, ಶಿಕ್ಷಣದ ಅರಿವು ಮಕ್ಕಳಲ್ಲಿ ಮನೆ ಮಾಡಬೇಕು ಅದು ಅವರ ಪ್ರಗತಿಗೆ ಹಾಗೂ ಸಮಾಜಕ್ಕೆ ಹಿರಿಮೆ ತರುತ್ತದೆ ಎಂದು ಮಕ್ಕಳ ಮನವೊಲಿಸಿದರು.

ಓಣಿಯ ಹಿರಿಯರಾದ ಶಿಕ್ಷಕ ಪಿ.ಎಚ್.ತಳಗೇರಿ ಮಾತನಾಡಿ, ಯುವಕರು ಮಧ್ಯಪಾನ ದಾಸರಾಗಿದ್ದಾರೆ. ಅಂತಹ ಯುವಕರು ದುಶ್ಚಟಗಳಿಂದ ದೂರವಿರಬೇಕೆಂದು ಸಲಹೆ ನೀಡಿದರು.

 ಬಾಮ್ಸೇಫ್ ಅಂಗ ಸಂಘಟನೆಯಾದ ಭಾರತೀಯ ಯುವ ಮೋರ್ಚಾ ಜಿಲ್ಲಾ ಸಂಯೋಜಕ ವಿಶಾಲ ಗೋಶಾಲ್ಯನ್ನವರ್ ಮಾತನಾಡಿ, ಪ್ರೆöÊವೆಟ್ ಡಿಫೆನ್ಸ ಆ್ಯಕ್ಟ್ ಹಾಗೂ ಅನುಚ್ಛೇದ 17 ಅದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿ ಕಾನೂನು ಮತ್ತು ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳಾಗಬೇಕು ಎಂದು ಪೊಲೀಸ್ ಇಲಾಖೆಯವರಿಗೆ ಮನವಿ ಮಾಡಿಕೊಂಡರು.

 ಈ ಸಂದರ್ಭದಲ್ಲಿ ವಿಜಯ ಕಲ್ಮನಿ, ವೀಣಾ ಕಡಬಿನ, ಮಂಜುಳಾ ಅಗಸಿನಕೊಪ್ಪ, ಯಮನವ್ವ ಕಲ್ಮನಿ, ಪೋಲಿಸರೊಂದಿಗೆ ಎಸ್.ಸಿ./ಎಸ್.ಟಿ. ಜನರ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಚರ್ಚೆ ಮಾಡಿದರು. ರಾಘವೇಂದ್ರ ನಾಗನಾಥನಹಳ್ಳಿಯವರು ದಲಿತ ಎಂಬ ಪದ ಬಳಸುವುದು ಸೂಕ್ತವಲ್ಲ ಇದು ಅಸಂವಿಧಾನಿಕ ಪದ ಎಂದು ಪೋಲಿಸ್ ಅಧಿಕಾರಿಗಳಿಗೆ ಮನವಿ ಮಾಡಿಕೊಟ್ಟರು.

 ಈ ಸಂದರ್ಭದಲ್ಲಿ ವಿಶಾಲ ಹಾದಿಮನಿ, ಸಂತೋಷ ಅಕ್ಕಿ, ರಾಘು ದೊಡ್ಡಮನಿ, ಶಿವಾನಂದ ಸಕ್ರಿ, ಬಸವರಾಜ ಕಟ್ಟಿಮನಿ, ವಿನಾಯಕ ಕಟ್ಟಿಮನಿ, ವಿನಾಯಕ ಕಲ್ಮನಿ, ವಿನಾಯಕ ಸಂಗಾಪೂರ, ಸಂಜಯ ಪರಾಪೂರ, ಅಭಿಷೇಕ ಸಂಗಾಪೂರ, ಗಣೇಶ ಅಕ್ಕಿ, ಸುರೇಶ ಸಂಗಾಪೂರ, ಪ್ರಮೋದ ಸಕ್ರಿ, ಮೋಹನ ಅಗಸಿನಕೊಪ್ಪ, ರಾಹುಲ ಜಂಬಲದಿನ್ನಿ, ಮಂಜುನಾಥ ಕಲ್ಲೂರ, ಸಾಗರ ಕಟ್ಟಿಮನಿ, ಅಭಿ ಬಳ್ಳಾರಿ, ಶ್ರೀಶೈಲ ಪರಾಪೂರ, ಯಮನೇಶ ಬೇವಿನಕಟ್ಟಿ, ಹಾಗೂ ಭಾರತೀಯ ಯುವ ಮೋರ್ಚಾ ಕಾರ್ಯಕರ್ತರು, ತಳಗೇರಿ ಓಣಿಯ ಹಿರಿಯರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

You May Also Like

ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಗದಗ:  ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಭಾರತ ಸರ್ಕಾರವು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ಯಮಗಳ…

ಗ್ರಾಪಂ ಮಾಜಿ ಅಧ್ಯಕ್ಷನ ದರ್ಪ!: ಮರಳು ಟಿಪ್ಪರ್ ನಿಧಾನವಾಗಿ ಓಡಿಸಿ ಅಂದಿದ್ದಕ್ಕೆ ಹಲ್ಲೆ ಮಾಡಿದ ಆರೋಪ

ಹೇಳೋದು ವೇದಾಂತ, ತಿನ್ನೋದು ಬದನೆಕಾಯಿ ಎನ್ನುತ್ತಾರಲ್ಲ, ಆ ರೀತಿಯ ಕಥೆಯಿದು. ಇಲ್ಲೊಬ್ಬ ವ್ಯಕ್ತಿ ಊರಿನ ಮುಖಂಡ. ಪ್ರತಿ ದಿನ ನಾಲ್ಕಾರು ಜನಕ್ಕೆ ಬುದ್ಧಿ ಹೇಳುತ್ತಿದ್ದ. ಸದ್ಯ ಈ ವ್ಯಕ್ತಿಯೇ ಕುಟುಂಬವೊಂದರ ಮೇಲೆ ದರ್ಪ ಮೆರೆದಿದ್ದಾನೆ.

ಶಿರಾದಲ್ಲಿ ದಾಖಲೆ ಬರೆದ ಬಿಜೆಪಿ!

ತುಮಕೂರು : ಶಿರಾದಲ್ಲಿ ಮೊದಲ ಬಾರಿಗೆ ಕಮಲ ಅರಳಿದ್ದು, ಇತಿಹಾಸ ನಿರ್ಮಿಸಿದೆ.

ಪದ್ಮಶ್ರೀ ಇಬ್ರಾಹಿಂ ಸುತಾರ್ ಇನ್ನಿಲ್ಲ

ಮಹಾಲಿಂಗಪುರ:ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಹೃದಯಾಘಾತದಿಂದ ಪದ್ಮಶ್ರೀ ಪುರಸ್ಕೃತ, ಸೂಫಿ ಸಂತ, ತತ್ವಪದ…