ರೋಣ: ಜಿಗಳೂರ ಗ್ರಾಮಕ್ಕೆ ಪ್ರತ್ಯೇಕ ಕೇಂದ್ರ ಸ್ಥಾನ ನೀಡಲು ಒತ್ತಾಯಿಸಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ತಾಲೂಕು ಕಚೇರಿ ಎದುರು ಅನಿರ್ಧಷ್ಟವಧಿ ಸತ್ಯಾಗ್ರಹ ನಡೆಸಿದರು.

ಜಿಗಳೂರ ಗ್ರಾಮದಿಂದ ರೋಣ ತಾಲೂಕ ಕಚೇರಿಯವರೆಗೂ ಎತ್ತಿನ ಬಂಡಿ ಹಾಗೂ ಟ್ರ‍್ಯಾಕ್ಟರ್ ಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸೂಡಿ ಕ್ರಾಸ್ ಹಾಗೂ ಮುಲ್ಲನಬಾವಿ ಕ್ರಾಸ್ ಮುಖಾಂತರ ಗ್ರಾಮಸ್ಥರು ಪ್ರತಿಭಟನಾ ಮೆರವಣಿಗೆಯಲ್ಲಿ ಬೇಡಿಕೆ ಇಡೇರಿಕೆಗೆ ಒತ್ತಾಯಿಸಿ ಘೋಷಣೆ ಕೂಗುತ್ತಾ ತಹಶೀಲ್ದಾರ್ ಕಚೇರಿಗೆ ಆಗಮಿಸಿದರು. ನಂತರ ತಹಶೀಲ್ದಾರರಿಗೆ ಜಿಗಳೂರು ಗ್ರಾಮವನ್ನು ಪ್ರತ್ಯೇಕ ಕೇಂದ್ರ ಸ್ಥಳವನ್ನಾಗಿ ಘೋಷಿಸಲು ಒತ್ತಾಯಿಸಿ ಮನವಿ ನೀಡಿದರು.

ಈ ವೇಳೆ ರಾಮನಗೌಡ ಪಾಟೀಲ, ಎಸ್.ಐ. ಪಾಟೀಲ, ಎಸ್.ಎಸ್. ಧಾರಣೆಪ್ಪಗೌಡ. ಕುಮಾರ ದಾನಪ್ಪಗೌಡ, ತಿಪ್ಪಣ್ಣ, ಸುರೇಶ ಹ್ಯಾಗಾರ, ಶರಣಪ್ಪ ಹತ್ತಿಕಟಗಿ. ಯಲ್ಲಪ್ಪ ಮಡಿವಾಳರ, ಮಹಾಂತೇಶ್ ಚಿಕ್ಕನಗೌಡರ, ವಿಜಯ ನರೇಗಲ್ ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

You May Also Like

ಲಾಕ್ ಡೌನ್ ಸಡಿಲಿಕೆಗೆ ಹಾವೇರಿ ಜನ ಡೋಂಟ್ ಕೇರ್

ಹಸಿರು ವಲಯದಲ್ಲಿರುವ ಹಾವೇರಿ ಜಿಲ್ಲೆಯಲ್ಲಿ ಆರ್ಥಿಕ ಚಟುವಟುಕೆಗಳಿಗೆ ಸಡಿಲಿಕೆ ನೀಡಲಾಗಿದೆ. ಆದ್ರೆ ಗ್ರೀನ್ ಝೋನ್ ಸಡಿಲಿಕೆಗೂ ಕೆಲವೊಂದು ನಿಯಮಗಳಿಗೆ ಹಾವೇರಿ ಜನ ಕ್ಯಾರೆ ಎನ್ನುತ್ತಿಲ್ಲ.

ಲವ್ ಜಿಹಾದ್ ಪ್ರಕರಣ ಕ್ರಮಕ್ಕೆ ಒತ್ತಾಯಿಸಿ ಲಕ್ಷ್ಮೇಶ್ವರದಲ್ಲಿ ಮನವಿ

ಪಟ್ಟಣದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ.

ಮದ್ಯದಿಂದ ವಂಚಿತರಾದರು ದಾವಣಗೆರೆ ಜನ

ಮದ್ಯದಿಂದ ವಂಚಿತರಾದರು ದಾವಣಗೆರೆ ಜನ ದಾವಣಗೆರೆ : ಮದ್ಯ ಪ್ರಿಯರ ಮನವಿಯಂತೆ ನೀನ್ನೆಯಿಂದ ಬಾರ್ ಗಳು…

ಕೊವಿಡ್-19 ನಿಯಂತ್ರಣ : ನಿಯಮ ಉಲ್ಲಂಘಿಸಿದ ಸಂಘ, ಸಂಸ್ಥೆ, ಹೊಟೆಲ್‍ಗಳ ವಿರುದ್ದ ಪ್ರಕರಣ ದಾಖಲು

ಕೊವಿಡ್-19 ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಖಕ್ಕೆ ಮಾಸ್ಕ ಧಾರಣೆ, ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಗುಂಪು ಸೇರದಿರುವ ಮುಂತಾದ ನಿರ್ದೇಶನಗಳನ್ನು ಉಲ್ಲಂಘಿಸಿದ ಗದಗ ಬೆಟಗೇರಿ ವ್ಯಾಪ್ತಿಯ ಸಂಘ, ಸಂಸ್ಥೆ, ಹೊಟೆಲ್‍ಗಳ ವಿರುದ್ದ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದ್ದಾರೆ.